ಉಡುಪಿಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ, ಅಗ್ನಿ ಅವಘಡಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ!

| Updated By: ಸಾಧು ಶ್ರೀನಾಥ್​

Updated on: Mar 15, 2024 | 1:58 PM

ಕರಾವಳಿ ಜಿಲ್ಲೆಗಳಲ್ಲಿ ಒಂದಾದ ಉಡುಪಿ ಜಿಲ್ಲೆಯಲ್ಲಿ ಸದ್ಯ ಬಿಸಿಲಿನ ಬೇಗೆ (Udupi Summer 2024) ಹೇಳತೀರದಾಗಿದೆ. ಜಿಲ್ಲೆಯಲ್ಲಿ ವಾರಕ್ಕೆ ಮೂರು ನಾಲ್ಕರಂತೆ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಪ್ರಕರಣಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು ಕೂಡ ಉಡುಪಿ ಜಿಲ್ಲೆಯಲ್ಲಿ ಸೂಕ್ತ ಅಗ್ನಿಶಾಮಕ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಅಗ್ನಿಶಾಮಕ ವಾಹನ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೆ ವಾಹನ ಗುಜರಿಗೆ ಬಂದು ನಿಂತಿದೆ!

ಉಡುಪಿಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ, ಅಗ್ನಿ ಅವಘಡಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ!
ಉಡುಪಿ ಜಿಲ್ಲೆಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ
Follow us on

ಕರಾವಳಿಯಲ್ಲಿ ದಿನೇ ದಿನೇ ವಾತಾವರಣದ ಬಿಸಿಯೇರುತ್ತಿದೆ. ಬಿಸಿಲಿನ ಜಳಕ್ಕೆ ಗಿಡಗಂಟಿಗಳು ಕುರುಚಲು ಪೊದೆಗಳಿಗೆ ಬೆಂಕಿ ತಾಕುತ್ತಿರುವ ವಿದ್ಯಮಾನಗಳು ಸದ್ಯ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತುರ್ತು ಬೆಂಕಿ ಅವಘಡಗಳನ್ನ (Fire Accident) ನಿಯಂತ್ರಿಸಲು ವಾಹನವೇ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ! ಹೌದು ಕರಾವಳಿ ಜಿಲ್ಲೆಗಳಲ್ಲಿ ಒಂದಾದ ಉಡುಪಿ ಜಿಲ್ಲೆಯಲ್ಲಿ ಸದ್ಯ ಬಿಸಿಲಿನ ಬೇಗೆ (Udupi Summer 2024) ಹೇಳತೀರದಾಗಿದೆ. ಜಿಲ್ಲೆಯಲ್ಲಿ ವಾರಕ್ಕೆ ಮೂರು ನಾಲ್ಕರಂತೆ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಪ್ರಕರಣಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು ಕೂಡ ಉಡುಪಿ ಜಿಲ್ಲೆಯಲ್ಲಿ ಸೂಕ್ತ ಅಗ್ನಿಶಾಮಕ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಉಡುಪಿ ನಗರದಲ್ಲಿರುವ ಜಿಲ್ಲಾ ಅಗ್ನಿಶಾಮಕ ದಳದ ಕಚೇರಿಯ ಮುಂಭಾಗದಲ್ಲಿ ಅಗ್ನಿಶಾಮಕ ವಾಹನ ಇದ್ದರೂ ಕೂಡ ಸೂಕ್ತವಾದ ಕಾರ್ಯ ನಿರ್ವಹಣೆ ಇಲ್ಲದೆ ವಾಹನ ಗುಜರಿಗೆ ಬಂದು ನಿಂತಿದೆ. ಈಗಾಗಲೇ ಜಿಲ್ಲೆಯ ಎರಡು ಅಗ್ನಿಶಾಮಕ ವಾಹನಗಳು, ಗುಜರಿ ವಾಹನವಾಗಿದ್ದು ಯಾವುದೇ ಉಪಯೋಗಕ್ಕೆ ನಿಲುಕುತ್ತಿಲ್ಲ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಗಣೇಶ್.

ಸದ್ಯ ಉಡುಪಿಯ ಅಗ್ನಿಶಾಮಕ ದಳದ ಕಚೇರಿಯಲ್ಲಿ ಒಂದು ಅಗ್ನಿಶಾಮಕ ವಾಹನ ಇದ್ದು ಆಕಸ್ಮಿಕ ಅವಘಡ ಗಳಿಗೆ ಮಾತ್ರ ಲಭ್ಯ ಎನ್ನುವಂತಿದೆ. ಉಡುಪಿಯಿಂದ ಹೆಜಮಾಡಿಯ ತನಕ ಕೂಡ ಇದೇ ವಾಹನವನ್ನ ಬಳಸಿ ಅಗ್ನಿಶಾಮಕದ ಕಾರ್ಯ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಇಲ್ಲಿ ನಾಲ್ಕು ಅಗ್ನಿಶಾಮಕ ವಾಹನಗಳಿದ್ದು ಈಗಾಗಲೇ ಉಳಿದ ವಾಹನಗಳು ಗುಜರಿ ಸೇರಿವೆ.

Also read: ಬಂಗಾರಪೇಟೆಯಲ್ಲಿ ಮಹಾಶಿವರಾತ್ರಿಗೆ ನಾನ್​ ವೆಜ್​ ಪೂಜೆ! ಮೇಕೆ, ಕೋಳಿಯ ಕತ್ತನ್ನು ಕಚ್ಚಿ ಬಿಸಿ ರಕ್ತ ಸೇವಿಸುವ ತಮಿಳು ಸಂಸ್ಕೃತಿ

ಜಿಲ್ಲೆಯ ಬಹುತೇಕ ಅಗ್ನಿಶಾಮಕ ಕೇಂದ್ರಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದು, ಎಲ್ಲಾ ಕೇಂದ್ರಗಳಲ್ಲೂ ಹಳೆಯ ಅಗ್ನಿಶಾಮಕ ವಾಹನಗಳೆ ಇವೆ. ಆಧುನಿಕ ವ್ಯವಸ್ಥೆಗಳೇ ಇಲ್ಲದ ಆ ಅಗ್ನಿಶಾಮಕ ವಾಹನಗಳನ್ನು ಕಿರಿದಾದ ರಸ್ತೆಗಳಲ್ಲಿ ತೆಗೆದುಕೊಂಡು ಹೋಗಿ ಅಗ್ನಿಶಾಮಕ ಕೆಲಸ ಮಾಡುವುದು ದೊಡ್ಡ ಹರಸಾಹಸ ಎನ್ನುತ್ತಾರೆ ಸಿಬ್ಬಂದಿ.

Also Read: ನಮ್ಮೂರಿನ ಗೋಮಾಳ ನಮಗೇ ಮೀಸಲಿಡಿ -ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ಕೊಡಬೇಡಿ: ಕೋಲಾರ ಡಿಸಿ ವಿರುದ್ಧ ಗಾಜಲದಿನ್ನೆ ಗ್ರಾಮಸ್ಥರು ಕಿಡಿ

ಒಟ್ಟಾರೆಯಾಗಿ ಜಿಲ್ಲೆಯ ಪರಿಸ್ಥಿತಿಯನ್ನ ಅವಲೋಕಿಸಿ ತಕ್ಷಣಕ್ಕೆ ಅಗತ್ಯವಿರುವ ಅಗ್ನಿಶಾಮಕ ವಾಹನವನ್ನು ಪೂರೈಸಬೇಕಾದ ಅಗತ್ಯತೆ ಇದೆ. ಇಲ್ಲವಾದರೆ ತುರ್ತು ಸಂದರ್ಭಗಳಲ್ಲಿ ವಾಹನದ ವ್ಯವಸ್ಥೆ ಇಲ್ಲದೆ ಅಗ್ನಿಯನ್ನ ನಂದಿಸುವ ಕಾರ್ಯದಲ್ಲಿ ಸಿಬ್ಬಂದಿ ಮಾತ್ರ ಭಾಗಿಯಾಗುವ ಮೂಲಕ ಇನ್ನೊಂದು ಅವಘಡಕ್ಕೆ ಸಾಕ್ಷಿಯಾಗುವಂತ ಪರಿಸ್ಥಿತಿ ಜಿಲ್ಲೆಯಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ