ಅಮಲು ಪದಾರ್ಥ ಏರಿಸಿ ರಸ್ತೆಯಲ್ಲಿ ಚೆನ್ನೈ ಮೂಲದ ಮೆಡಿಕಲ್ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯ ನಡುವೆ ಹೊಡೆದಾಟ: ವಿಡಿಯೋ

ವಿದ್ಯಾರ್ಥಿಗಳ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಅಂತಾ ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಆ ಮೂವರೂ ಯುವಕರು.

ಅಮಲು ಪದಾರ್ಥ ಏರಿಸಿ ರಸ್ತೆಯಲ್ಲಿ ಚೆನ್ನೈ ಮೂಲದ ಮೆಡಿಕಲ್ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯ ನಡುವೆ ಹೊಡೆದಾಟ: ವಿಡಿಯೋ
ಅಮಲು ಪದಾರ್ಥ ಏರಿಸಿ ರಸ್ತೆಯಲ್ಲಿ ಚೆನೈ ಮೂಲದ ಮೆಡಿಕಲ್ ವಿದ್ಯಾರ್ಥಿಗಳು-ವಿದ್ಯಾರ್ಥಿನಿಯ ನಡುವೆ ಹೊಡೆದಾಟ
Edited By: ಸಾಧು ಶ್ರೀನಾಥ್​

Updated on: Jan 08, 2022 | 1:02 PM

ಉಡುಪಿ: ಅಮಲು ಪದಾರ್ಥ ಸೇವಿಸಿ ಕಾಲೇಜು ವಿದ್ಯಾರ್ಥಿಗಳ ರಂಪಾಟ ನಡೆಸಿರುವ ಘಟನೆ ಉಡುಪಿಯ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ. ನಡು ರಸ್ತೆಯಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿಯ ನಡುವೆ ಹೊಡೆದಾಟಗಳು ನಡೆದಿವೆ. ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ, ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಶುರವಚ್ಚಿಕೊಂಡಿದ್ದಾರೆ

ವೈದ್ಯಕೀಯ ವಿದ್ಯಾರ್ಥಿಗಳಾಗಿ ಕೊರೊನಾ ವೀಕೆಂಡ್​ ಕರ್ಫ್ಯೂಗೂ ಡೋಂಟ್​ ಕೇರ್​:
ಸ್ವತಃ ವೈದ್ಯಕೀಯ ವಿದ್ಯಾರ್ಥಿಗಳಾಗಿ ಕೊರೊನಾಗೂ ಡೋಂಟ್​ ಕೇರ್​, ಕೊರೊನಾ ವೀಕೆಂಡ್​ ಕರ್ಫ್ಯೂಗೂ ಡೋಂಟ್​ ಕೇರ್​ ಎಂದ ಮೆಡಿಕಲ್ ವಿದ್ಯಾರ್ಥಿಗಳು ಇವರು. ವಿದ್ಯಾರ್ಥಿಗಳ ಈ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಅಂತಾ ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಆ ಮೂವರೂ ಯುವಕರು. ಕೊನೆಗೆ ಸಾರ್ವಜನಿಕರ ಸಹಾಯದಿಂದ ಪೊಲೀಸರು ಅಂಬುಲೆನ್ಸ್‌ನಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೆನ್ನೈ ಮೂಲದ ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಇವರು. ವಿದ್ಯಾರ್ಥಿಗಳ ಹೈ ಡ್ರಾಮಾದಿಂದಾಗಿ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆಯಂತೂ ಧಾರಾಳವಾಗಿ ಸಿಕ್ಕಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರ್ಕಳದಲ್ಲಿ ಗೋಕಳ್ಳರ ಕಳ್ಳಾಟ:
ಕರಿಯಕಲ್ಲು ಕಜೆ ಎಂಬಲ್ಲಿನ ಎರಡು ಮನೆಗಳಿಂದ ಗೋವುಗಳ ಕಳವಾಗಿದೆ. ಯಶೋಧ ಆಚಾರ್ಯ ಮತ್ತು ಸುಧಾಕರ ಶೆಟ್ಟಿ ಎಂಬವರ ಮನೆಯಿಂದ ಗೋ ಕಳವು ಆಗಿದೆ. ಒಂದು ವರ್ಷದ ಅವಧಿಯಲ್ಲಿ ಒಂದು ಮನೆಯಿಂದ 16 ದನಗಳ ಕಳವಾಗಿರುವುದು ಸೋಜಿಗವಾಗಿದೆ. ಮತ್ತೊಂದು ಮನೆಯಿಂದ 12 ಗೋವುಗಳನ್ನು ಅಪಹರಿಸಿರುವ ಕಳ್ಳರು ಈ ಪ್ರದೇಶದಿಂದ ಒಂದು ವರ್ಷದ ಅವಧಿಯಲ್ಲಿ ಈ ಕಳ್ಳಾಟದಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಹಿಂದೂಜಾಗರಣ ವೇದಿಕೆಯ ಮುಖಂಡರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರಿಗೆ ಒತ್ತಾಯಿಸಿದ್ದಾರೆ.

College Students Under Inebriated Condition Creates Ruckus In Udupi | ಮತ್ತಲ್ಲಿ ವಿದ್ಯಾರ್ಥಿಗಳ ರಂಪಾಟ
YouTube video player

ಇದನ್ನೂ ಓದಿ:
ಕರ್ಫ್ಯೂ ಮಧ್ಯೆ ಮಾನವೀಯತೆ ತೋರಿದ ಹುಬ್ಬಳ್ಳಿ ಪೊಲೀಸರು: ರಸ್ತೆಯಲ್ಲಿ ಏಕಾಏಕಿ ಕುಸಿದು ಬಿದ್ದ ಯುವಕನಿಗೆ ನೆರವು

Published On - 11:27 am, Sat, 8 January 22

TV9 Web

TV9 Kannada

Read More
Loading...
Unable to load recommendations.
Follow Us