ಶರತ್ ಶೆಟ್ಟಿ ಕೊಲೆ ಪ್ರಕರಣ‌: ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋದ ಕುಟುಂಬ, ಸರ್ವನಾಶ ಮಾಡುವುದಾಗಿ ದೈವ ಅಭಯ

|

Updated on: Mar 24, 2023 | 1:21 PM

ಪಾಂಗಾಳ ಶರತ್ ವಿ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ಪಂಜುರ್ಲಿ ಬಳಿ ಬೇಡಿಕೆ ಇಟ್ಟಿದ್ದಾರೆ.

ಶರತ್ ಶೆಟ್ಟಿ ಕೊಲೆ ಪ್ರಕರಣ‌: ಕೊಲೆಗಾರರ ವಿರುದ್ಧ ಕ್ರಮಕ್ಕೆ  ದೈವದ ಮೊರೆ ಹೋದ ಕುಟುಂಬ, ಸರ್ವನಾಶ ಮಾಡುವುದಾಗಿ ದೈವ ಅಭಯ
ಪಂಜುರ್ಲಿ ಮೊರೆ ಹೋದ ಕುಟುಂಬಸ್ಥರು
Follow us on

ಉಡುಪಿ: ಅಂಡರ್ವರ್ಲ್ಡ್ ಗ್ಯಾಂಗ್​ನಿಂದ ಶರತ್ ಶೆಟ್ಟಿ ಕೊಲೆ ಪ್ರಕರಣ‌ಕ್ಕೆ ಸಂಬಂಧಿಸಿ ಕೊಲೆಗಾರರ ವಿರುದ್ಧ ಕ್ರಮಕ್ಕೆ ಕುಟುಂಬದವರು ದೈವದ ಮೊರೆ ಹೋದ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಾಂಗಾಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ( ಮಾರ್ಚ್ 23) ನಡೆದ ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಶರತ್ ಶೆಟ್ಟಿ ಕುಟುಂಬಸ್ಥರು ಕೊಲೆಗೆ ನ್ಯಾಯ ಕೇಳಿದ್ದು ಈ ವೇಳೆ ಶರತ್ ಶೆಟ್ಟಿ ಯಾವ ರೀತಿ ಸಾಯುವಂತಾಯಿತು ಅದೇ ರೀತಿ ಅವರನ್ನು ಸರ್ವನಾಶ ಮಾಡುವುದಾಗಿ ದೈವ ಭರವಸೆ ನೀಡಿದೆ.

ಕಾಪು ತಾಲೂಕಿನ ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆಯಾಗಿ ತಿಂಗಳುಗಳೇ ಕಳೆದಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಯ ಬಂಧನವೂ ಆಗಿದೆ. ಶರತ್ ವಿ. ಶೆಟ್ಟಿ (42) ಪಾಂಗಾಳ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಂಜುರ್ಲಿ

ಇದನ್ನೂ ಓದಿ: ಗುಳಿಗ ದೈವಗೆ ಆರಗ ಜ್ಞಾನೇಂದ್ರರಿಂದ ಅವಹೇಳನ ಪ್ರಕರಣ: ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗದಿಂದ ವಿಶೇಷ ಪ್ರಾರ್ಥನೆ

ಕುಟುಂಬಸ್ಥರಿಗೆ ದೈವದ ಅಭಯ

ಇದೀಗ ಪಾಂಗಾಳ ಶರತ್ ವಿ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ನಿನ್ನೆ ರಾತ್ರಿ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮೋತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಶರತ್ ಶೆಟ್ಟಿ ಕೊಲೆ ಆರೋಪಿಗಳು ಪಾತಾಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆ ಎಂದು ಪಂಜುರ್ಲಿ ದೈವವು ಅಭಯ ನುಡಿದಿದೆ.

ಕೊಲೆಯಾಗಿ ತಿಂಗಳು ಕಳೆದರೂ ಪ್ರಮುಖ ಆರೋಪಿ ಸೆರೆಯಾಗಿಲ್ಲ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೋಡಿಕೊಂಡ ಬಗ್ಗೆ ದೈವವೂ ಆದಷ್ಟು ಶೀಘ್ರವಾಗಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಕುಟುಂಬಸ್ಥರು  ಧೈರ್ಯ ಗೆಡುವುದು ಬೇಡ ಎಂದಿದೆ.

ಈ ಸಂದರ್ಭ ಶ್ರೀಮತಿ ಮತ್ತು ಶ್ರೀ ಹರಿಶ್ಚಂದ್ರ ಶೆಟ್ಟಿ ಮತ್ತು ಕುಟುಂಬಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 1:21 pm, Fri, 24 March 23