ಉಡುಪಿ, ಅ.22: ಜಿಲ್ಲೆಯ ಬೈಲೂರಿನಲ್ಲಿರುವ ಪರಶುರಾಮನ ಪ್ರತಿಮೆ ವಿವಾದ ಸಂಬಂಧ ರಕ್ಷಣಾ ಕವಚ, ಕಂಚಿನ ಮೂರ್ತಿಯ ಫಿನಿಶಿಂಗ್ ಲೇಪನ ಹರಿದಿದ್ದ ಕಾಂಗ್ರೆಸ್ (Congress) ಹಾಗೂ ಸಾರ್ವಜನಿಕ ಆಸ್ತಿ ಹಾನಿ, ಧಾರ್ಮಿಕ ಭಾವನೆಗೆ ದಕ್ಕೆ ತಂದ ಆರೋಪ ಸಂಬಂಧ ಬಿಜೆಪಿ (BJP) ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಬೈಲೂರಿನ ಪರಶುರಾಮ ಮೂರ್ತಿಯ ಸತ್ಯಾಸತ್ಯತೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿತ್ತು. ರಿಯಾಲಿಟಿ ಚೆಕ್ ಹೆಸರಿನಲ್ಲಿ ಮೂರ್ತಿ ಮೇಲೆ ಹತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ರಕ್ಷಣಾ ಕವಚ, ಕಂಚಿನ ಮೂರ್ತಿಯ ಫಿನಿಶಿಂಗ್ ಲೇಪನ ಹರಿದು ಹಾಕಿದ್ದರು. ಮೂರ್ತಿಯ ಮೂಲ ಸ್ವರೂಪ ವಿರೂಪಗೊಳಿಸಿದ ಕುರಿತು ಹಾಗೂ ಸರ್ಕಾರಿ ಸೊತ್ತು ನಷ್ಟ- ಸುಳ್ಳು ಸುದ್ದಿ ಹರಡಿಸಿರುವ ಬಗ್ಗೆ ಸುನಿಲ್ ಎಬಂವರು ದೂರು ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಯಂತರ ರೂ. ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ!
ಇತ್ತ, ಕಂಚಿನ ಮೂರ್ತಿ ಎಂದು ಸಾಭೀತುಪಡಿಸಲು ಹೊರಟ ಬಿಜೆಪಿ ವಿರುದ್ಧವೂ ಕೇಸ್ ದಾಖಲಾಗಿದೆ. ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಲು ಪರಶುರಾಮನ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಬಿಜೆಪಿ ರಿಯಾಲಿಟಿ ಚೆಕ್ ಮಾಡಿತ್ತು.
ಈ ಸಂಬಂಧ ದಿವ್ಯಾ ನಾಯಕ್ ಎಂಬವರು ಸಾರ್ವಜನಿಕ ಆಸ್ತಿ ಹಾನಿ, ಧಾರ್ಮಿಕ ಭಾವನೆಗೆ ದಕ್ಕೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಎರಡು ತಿಂಗಳು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಅಕ್ರಮವಾಗಿ ಪ್ರವೇಶ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ