ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ!
ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕೋಟಿ ರೂಪಾಯಿ ಹಣ ಡೀಲ್ ಮಾಡಿದ ಪ್ರಕರಣದ ಬೆನ್ನಲ್ಲೇ ಇದೀಗ ಇದೇ ಮಾದರಿಯ ಮತ್ತೊಂದು ಕೇಸ್ ಬಯಲಿಗೆ ಬಂದಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೋರ್ವರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದ್ದು, ಸಂಬಂಧ ಇಬ್ಬರು ಬಿಜೆಪಿ ಮುಖಂಡರ ವಿರುದ್ಧ ದೂರು ದಾಖಲಾಗಿದೆ. ಹಾಗಾದ್ರೆ, ದೂರಿನಲ್ಲೇನಿದೆ? ಎನ್ನುವುದನ್ನು ನೋಡಿ
ಮಂಗಳೂರು, (ಅಕ್ಟೋಬರ್ 22): ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ಹಿಂದೂ ಸಂಘಟನೆಗಳಲ್ಲಿ ಗುರಿತಿಸಿಕೊಂಡ ಚೈತ್ರಾ ಸೇರಿದಂತೆ ಹಲವರ ಬಂಧನವಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೊಂದು ಇದೇ ಮಾದರಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ 2.55 ಕೋಟಿ ರೂಪಾಯಿ ವಂಚನೆ ವಂಚನೆ ಮಾಡಿದ ಪ್ರಕರಣ ಬಯಲಿಗೆ ಬಂದಿದೆ.
ಈ ಸಂಬಂಧ ವಿಜಯಪುರದ ರೇವಣ್ಣ ಸಿದ್ದಪ್ಪ ಹಾಗೂ ಪುತ್ತೂರು ಬಿಜೆಪಿಯ ಮುಖಂಡ ಶೇಖರ್ ಎನ್.ಪಿ ಎನ್ನುವವರ ವಿರುದ್ಧ ವಂಚನೆಗೊಳಗಾದಹಗರಿಬೊಮ್ಮನಹಳ್ಳಿಯ ಶಿವಮೂರ್ತಿ ಎನ್ನುವರು ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಶೇಖರ್ ಭೇಟಿಯಾಗಗಿದ್ದ, ಬಳಿಕ ಕಟೀಲ್ ಕರೆ ಮಾಡಿ ಟಿಕೆಟ್ ವಿಚಾರವಾಗಿ ಶೇಖರ್ ಜೊತೆ ಮಾತನಾಡಿ ಎಂದು ಹೇಳಿದ್ದರು ಎಂದು ದೂರು ದಾಖಲಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿಬಂದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ದೂರಿನಲ್ಲೇನಿದೆ?
ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೊಟ್ಟರಿನ ಬಿಜೆಪಿ ಮುಖಂಡ ರೇವಣ್ಣ ಸಿದ್ದಪ್ಪ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ ಎಂಬುವವರು ಒತರೆ ಕಾರ್ಯಕ್ರಮಗಳಿಗೆ ಹೋದಾಗ ಪರಿಚಯವಾಗಿತ್ತು. ಬಳಿಕ 2023ರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನನ್ನನ್ನು ಪದೇ ಪದೇ ಭೇಟಿ ಮಾಡಿ ಬಿಜೆಪಿ ಟಿಕೆಟ್ ಕೊಡಿಸುವೇ. ನೀವು ಟಿಕೆಟ್ ಪಡೆಯಲು ಯೋಗ್ಯರು ಎನ್ನುವ ಮಾತುಗಳನ್ನಾಡಿದ್ದರು. ನಂತರ 2022ರ ಅಕ್ಟೋಬರ್ 23ರಂದಯ ರೇವಣ್ಣ ಸಿದ್ದಪ್ಪ ನನ್ನನ್ನು ಬೆಂಗಳೂರಿಗೆ ಕರೆತಂದು ಒಂದು ಹೋಟೆಲ್ನಲ್ಲಿ ಪುತ್ತೂರಿನ ಬಿಜೆಪಿ ಮಖಂಡ ಶೇಖರ್ ಅವರನ್ನು ಪಡಿಚಯಿಸಿದ್ದ. ನಂತರ ಶೇಖರ್ ಅವರು ನಳಿನ್ ಕುಮಾರ್ ಕಟೀಲ್ ಅವರ ಬೆಂಗಳೂರಿನ ಕಚೇರಿಗೆ ಕರೆದುಕೊಂಡು ಹೋಗಿದ್ದ ಭೇಟಿ ಮಾಡಿಸಿದ್ದರು. ತದ ನಂತರ ನಳಿನ್ ಕುಮಾರ್ ಕಟೀಲ್ ಅವರು ನನ್ನ ಬಳಿ ಮಾತನಾಡಿ ಟಿಕೆಟ್ ವಿಚಾರದ ಎಲ್ಲಾ ವ್ಯವಹಾರವನ್ನು ಶಖರ್ ಅವರ ಬಳಿ ಮಾತನಾಡಿ ಎಂದು ಕಟೀಲ್ ತಿಳಿಸಿದ್ದಾರೆ ಎಂದು ದೂರು ದಾರ ಶಿವಮೂರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತದನಂತರ ಶೇಖರ್ ಅವರು ನನ್ನ ಬಳಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣವನ್ನು ಕೇಳಿದ್ದಾರೆ. ಟಿಕೆಟ್ ಸಿಗದೇ ಇದ್ದಲ್ಲಿ ನಿಮ್ಮ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದ್ದರು.. ಅಂದಿನಿಂದ ಅಂದರೆ 2022 ಅಕ್ಟೋಬರ್ 09ರಿಂದ ಶುರುವಾದ ವ್ಯವಹಾರ ಏಪ್ರಿಲ್ 2023ಕ್ಕೆ 2 ಕೋಟಿ 55 ಲಕ್ಷದ ವರೆಗೂ ಹಣ ಪಡೆದುಕೊಂಡಿದ್ದಾರೆ ಎಂದು ದೂರುದಾರ ಶಿವಮೂರ್ತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Sun, 22 October 23