ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಡಿಕೆ ಶಿವಕುಮಾರ್ ಇಳಿದಿರುವುದು ಆತಂಕ ಉಂಟುಮಾಡಿದೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡನೆ

ಸರ್ಕಾರ ಯೋಚನೆ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಟೀಕೆ ಟಿಪ್ಪಣಿ ಎಲ್ಲದಕ್ಕೂ ಸರ್ಕಾರ ಹಾಗೂ ನಾವೆಲ್ಲ ಉತ್ತರ ಕೊಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿಕೆಶಿ ಅವರು ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಇಳಿದಿರುವುದು ಆತಂಕ ಉಂಟುಮಾಡಿದೆ.

ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಡಿಕೆ ಶಿವಕುಮಾರ್ ಇಳಿದಿರುವುದು ಆತಂಕ ಉಂಟುಮಾಡಿದೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡನೆ
ಕೋಟಾ ಶ್ರೀನಿವಾಸ ಪೂಜಾರಿ, ಸಚಿವರು
Edited By:

Updated on: Jun 19, 2022 | 7:40 PM

ಉಡುಪಿ: ಪಠ್ಯ ಪುಸ್ತಕ ಪರಿಷ್ಕರಣೆ(Textbook Revision) ಕುರಿತಂತೆ ರಾಜಕೀಯ ಜಟಾಪಟಿ ಮುಗಿಯುವಂತೆ ಕಾಣ್ತಿಲ್ಲ. ಪಠ್ಯ ಪರಿಷ್ಕರಣ ವಿರುದ್ಧ ನಿನ್ನೆಯಷ್ಟೇ ವಿವಿಧ ಸಂಘಟನೆಗಳು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar), ಪಠ್ಯಪುಸ್ತಕದ ಪ್ರತಿಯನ್ನು ಹರಿದು ತಮ್ಮ ಆಕ್ರೋಶ ಹೊರಹಾಕಿದ್ರು. ಈ ಬಗ್ಗೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Srinivas Pujari) ಖಂಡನೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯೋಚನೆ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಟೀಕೆ ಟಿಪ್ಪಣಿ ಎಲ್ಲದಕ್ಕೂ ಸರ್ಕಾರ ಹಾಗೂ ನಾವೆಲ್ಲ ಉತ್ತರ ಕೊಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿಕೆಶಿ ಅವರು ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಇಳಿದಿರುವುದು ಆತಂಕ ಉಂಟುಮಾಡಿದೆ. ಡಿಕೆಶಿಯವರು ತಮ್ಮ ವರ್ತನೆ ಬಗ್ಗೆ ಪುನರಾಲೋಚನೆ ಮಾಡಬೇಕು. ಪುಸ್ತಕ ಹರಿದಾಕಿದ ವರ್ತನೆಗೆ ವಿಷಾದ ವ್ಯಕ್ತಪಡಿಸಬೇಕು. ಪ್ರತಿರೋಧಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಕಾಶ ಇದೆ. ಹೀಗೆ ಸಾರ್ವಜನಿಕವಾಗಿ ಪುಸ್ತಕ ಹರಿದಾಕಿರುವುದು ಖಂಡನೀಯ. ಡಿಕೆಶಿ ಅವರ ಹುದ್ದೆಗೆ ಈ ವರ್ತನೆ ತಕ್ಕದಲ್ಲ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಡಿಕೆಶಿ ವರ್ತನೆಯನ್ನು ಖಂಡಿಸಿದ್ದಾರೆ. ಇದನ್ನೂ ಓದಿ: Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!

ಒಕ್ಕಲಿಗರ ಸಂಘ ಯಾಕೆ ಮಾತಾಡ್ತಿಲ್ಲ ಎಂದ ಡಿಕೆಶಿ
ಏಪ್ರಿಲ್ 18ರಂದು ಪಠ್ಯ ಪರಿಷ್ಕರಣೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ಡಿಕೆಶಿ, ಸ್ವಾಮೀಜಿಗಳು ಸರ್ಕಾರದ ವಿರುದ್ಧ ಹೆದರದೆ ಧ್ವನಿ ಎತ್ತಬೇಕು. ಅವಮಾನ ಆದಾಗ ಒಕ್ಕಲಿಗರ ಸಂಘ, ವೀರಶೈವ ಲಿಂಗಾಯತ ಸಂಘದವರು ಯಾಕೆ ಮಾತಾಡ್ಲಿಲ್ಲ ಅಂತಾ ಪ್ರಶ್ನಿಸಿದ್ರು.

ಪಠ್ಯಪುಸ್ತಕಗಳನ್ನು ವಾಪಸ್ ಪಡೆಯುವಂತೆ ಸಿದ್ದು ಆಗ್ರಹ
ವಿಜಯಪುರದ ದೇವರಹಿಪ್ಪರಗಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷ್ಕರಣಾ ಪಠ್ಯ ವಿಸರ್ಜಿಸಬೇಕು. ಈಗಾಗಲೇ ಪೂರೈಸಿರುವ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು ಅಂತಾ ಒತ್ತಾಯಿಸಿದ್ದಾರೆ.

ಕೈ ನಾಯಕ ಪಠ್ಯ ವಾರ್‌ಗೆ ಕೇಸರಿ ಕಲಿಗಳು ಟಾಂಗ್
ಕಾಂಗ್ರೆಸ್‌ ನಾಯಕರ ಪಠ್ಯ ವಾರ್‌ಗೆ ಕೇಸರಿ ಕಲಿಗಳು ಟಾಂಗ್ ಕೊಟ್ಟಿದ್ದಾರೆ. ತುಮಕೂರಿನಲ್ಲಿ ಗುಡುಗಿರೋ ಸಚಿವ ಆರ್‌.ಅಶೋಕ್, ಸಿದ್ದರಾಮಯ್ಯ ಕಾಲದಲ್ಲೂ ಕುವೆಂಪು ಪಠ್ಯಕ್ಕೆ ಕತ್ತರಿ ಹಾಕಿ, ಟಿಪ್ಪುವನ್ನು ವೈಭವೀಕರಿಸಲಾಗಿತ್ತು ಅಂತಾ ಕುಟುಕಿದ್ರು. ಪುಸ್ತಕ ಹರಿದ ಡಿಕೆಶಿಗೂ ತಿರುಗೇಟು ಕೊಟ್ರು. ಇದನ್ನೂ ಓದಿ: P M Narendra Modi: ಚೆಸ್​ ಒಲಿಂಪಿಯಾಡ್​ ಜ್ಯೋತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:47 pm, Sun, 19 June 22