ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಇಳಿಕೆಯಾಗದ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಶಾಲೆ ತೆರೆಯುವುದಿಲ್ಲ. ಉಳಿದ ಜಿಲ್ಲೆಗಳಲ್ಲಿ ಮಾತ್ರ ಸೋಮವಾರದಿಂದ ಶಾಲೆ ಆರಂಭ ಆಗಲಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪಾಸಿಟಿವಿಟಿ ರೇಟ್ ಕಡಿಮೆಯಾದರೆ ಶಾಲೆಗಳು ಆರಂಭ ಆಗಲಿದೆ. ಕೊರೊನಾ ಕಡಿಮೆಯಾದರೆ ಜಿಲ್ಲೆಯಲ್ಲಿ ಶಾಲೆ ಆರಂಭಿಸುತ್ತೇವೆ. ಉಳಿದ ಜಿಲ್ಲೆಯಲ್ಲಿ ಶಾಲೆ ಪ್ರಾರಂಭವಾಗಿದೆ ಎಂಬ ವಾದ ಸರಿಯಲ್ಲ. ಕೊರೊನಾ ಹತೋಟಿಗೆ ತರುವುದು ಎಲ್ಲರ ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.
ಗಣೇಶ ಹಬ್ಬ ವಿಜೃಂಭಣೆಯಿಂದ ಆಗಬೇಕೆಂಬುದು ನಮ್ಮ ಆಸೆ. ಆದರೆ ಕೊರೊನಾ 3ನೇ ಅಲೆ ಆತಂಕ ಕೂಡ ಕಣ್ಮುಂದೆ ಇದೆ. ಧಾರ್ಮಿಕ ಆಚರಣೆ, ಜನರ ಆರೋಗ್ಯ ಎರಡೂ ಬಹಳ ಮುಖ್ಯ. ಈ ವಿಚಾರವಾಗಿ ಸರ್ಕಾರ ಒಂದು ಸೂತ್ರವನ್ನ ಸಿದ್ಧಪಡಿಸಲಿದೆ. ಜನರ ನಂಬಿಕೆ, ಆರೋಗ್ಯ ವಿಚಾರದಲ್ಲಿ ಸೂತ್ರವನ್ನು ಸಿದ್ಧ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಸ್ತ್ರೀಯರು, ಮಕ್ಕಳಿಗೆ ರಕ್ಷಣೆಯಿಲ್ಲ. ತಾಲಿಬಾನಿಗಳ ಮಾನಸಿಕತೆ ಹೇಗಿದೆ ಎಂದು ಗೊತ್ತಾಗುತ್ತಿದೆ. ಕಾನೂನು ಗಾಳಿಗೆ ತೂರಿ ವಿಚಿತ್ರ ಕಾನೂನು ರೂಪಿಸುತ್ತಿದ್ದಾರೆ. ಈ ರೀತಿ ಹಿಂಸಾಕೃತ್ಯ ತಾತ್ಕಾಲಿಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳು ಈ ಬಗ್ಗೆ ಆಲೋಚಿಸಿ ಒಂದಾಗಬೇಕು ಎಂದು ಸುನಿಲ್ ಅಭಿಪ್ರಾಯಪಟ್ಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡಿಗರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರಾಜತಾಂತ್ರಿಕ ವಲಯ ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ತಾಲಿಬಾನಿಗಳ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಆಗಿದೆ. ಭಯೋತ್ಪಾದನಾ ಚಟುವಟಿಕೆ ಜಗತ್ತಿಗೆ ಎಚ್ಚರಿಕೆಯ ಗಂಟೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಈ ಬಗ್ಗೆ ಆಲೋಚಿಸಬೇಕು. ಭಾರತವು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. ನಮ್ಮ ಯುವಕರ ದಿಕ್ಕುತಪ್ಪಿಸಿ ತಾಲಿಬಾನಿನ ಶಿಕ್ಷಣ ನೀಡುವ ಅಪಾಯ ಇದೆ. ಈ ಪ್ರವೃತ್ತಿ ಕೆಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಹೊರಟಿದ್ದ ಅಫ್ಘಾನ್ ಹಿಂದು-ಸಿಖ್ರಿಗೆ ವಿಮಾನ ಹತ್ತಲು ಬಿಡದ ತಾಲಿಬಾನ್ ಉಗ್ರರು; 12 ತಾಸು ಕಾದಿದ್ದೂ ವ್ಯರ್ಥ
ಅಫಘಾನಿಸ್ತಾನ ಕ್ರಿಕೆಟ್ ವ್ಯವಸ್ಥೆಗೆ ತಾಲಿಬಾನ್ ಯಾವುದೇ ತೊಂದರೆ ಮಾಡುವುದಿಲ್ಲ: ಕ್ರಿಕೆಟ್ ಮಂಡಳಿ ಮುಖ್ಯಸ್ಥ
Published On - 7:09 pm, Sat, 21 August 21