ಕೊರೊನಾ ಭಯ! ಭಕ್ತರಿಗಿಲ್ಲ ತಪ್ತ ಮುದ್ರಾಧಾರಣೆ ಭಾಗ್ಯ..
ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ. ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ. ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ ಶಕ್ತಿ ತುಂಬಲಾಗುತ್ತೆ. ನಂತರ […]
ಉಡುಪಿ: ಕೃಷ್ಣನಗರಿಯಲ್ಲಿ ಪರ್ಯಾಯ, ಅಷ್ಟಮಿ ಬಿಟ್ರೆ ತಪ್ತ ಮುದ್ರಾಧಾರಣೆ ಉಡುಪಿ ಜನತೆಗೆ ಬಹುದೊಡ್ಡ ಸಂಭ್ರಮದ ಕ್ಷಣ. ಈ ಮುದ್ರಾಧಾರಣೆಯಲ್ಲಿ ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಅಬಾಲವೃದ್ಧರವರೆಗೂ ಭಕ್ತಿಯಿಂದ ಪಾಲ್ಗೊಳ್ತಾರೆ. ಆದ್ರೆ ಈ ಬಾರಿ ಮಾತ್ರ ಭಕ್ತರಿಗೆ ಈ ಭಾಗ್ಯ ಇಲ್ಲ. ಇದಕ್ಕೆ ಕಾರಣ ಕೊರೊನಾ.
ಹೌದು, ಉಡುಪಿಯಲ್ಲಿ ತಪ್ತ ಮುದ್ರಾಧಾರಣೆ ಆಚರಣೆ ಪ್ರಮುಖ ಧಾರ್ಮಿಕ ಆಚರಣೆ. ಕಾರಣ ಶ್ರೀ ಕೃಷ್ಣನ ಆಯುಧಗಳಾದ ಶಂಖ ಹಾಗೂ ಚಕ್ರವನ್ನ ಹೋಮ ಕುಂಡದಲದಲ್ಲಿರುವ ಬೆಂಕಿಯಲ್ಲಿಟ್ಟು ಪೂಜಿಸಿ ಅದಕ್ಕೆ ಶಕ್ತಿ ತುಂಬಲಾಗುತ್ತೆ. ನಂತರ ಈ ಪವಿತ್ರ ಶಂಖ ಚಕ್ರವನ್ನು ಅಷ್ಟ ಮಠಾಧೀಶರು ಭಕ್ತರಿಗೆ ಮುದ್ರಾಧಾರಣೆ ರೂಪದಲ್ಲಿ ಮಾಡುತ್ತಾರೆ. ಈ ಮುದ್ರಾಧಾರಣೆ ಹಾಕಿಸಿಕೊಳ್ಳಲು ಸಾವಿರಾರು ಭಕ್ತರು ಕೃಷ್ಣ ಮಠ ಸೇರಿದಂತೆ ಎಲ್ಲಾ ಎಂಟು ಮಠಗಳಿಗೆ ತೆರಳುತ್ತಾರೆ.
ಕೊರೊನಾ ಭಯ, ಇನ್ನೂ ತೆರೆಯದ ಶ್ರೀಕೃಷ್ಣ ಮಠ ಆದರೆ ಇಂತಹ ಮಹತ್ವದ ಕ್ಷಣ ಈ ಬಾರಿ ಉಡುಪಿಯಲ್ಲಿ ಇರೋದಿಲ್ಲ. ಈ ಬಾರಿ ಜುಲೈ ಒಂದರ ಪ್ರಥಮ ಏಕಾದಶಿಯಂದು ನಡೆಯುವ ಸಾಂಪ್ರದಾಯಿಕ ಆಚರಣೆ ಮುದ್ರಾಧಾರಣೆಯನ್ನು ಯತಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಇನ್ನೂ ಶ್ರೀಕೃಷ್ಣ ಮಠ ತೆರೆಯಲಾಗಿಲ್ಲ.
ಮುದ್ರಾಧಾರಣೆ ಇದ್ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಮುದ್ರಾಧಾರಣೆಯನ್ನ ಯತಿಗಳಿಗೆ ಹಾಗೂ ಮಠದ ಸಿಬ್ಬಂದಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮುಂದಿನ ಶುಭ ದಿನಗಳಂದು ಭಕ್ತರಿಗೆ ಮುದ್ರಾಧಾರಣೆ ಮಾಡಲಾಗುವುದು ಎಂದು ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ತಿಳಿಸಿದೆ -ಹರೀಶ್ ಪಾಲೆಚ್ಚಾರ್
Published On - 4:56 pm, Wed, 24 June 20