ಉಡುಪಿಯ ಕೃಷ್ಣ ಮಠದ ಪರ್ಯಾಯ ಮಹೋತ್ಸವ; ದ್ವೈವಾರ್ಷಿಕ ಪೂಜಾಧಿಕಾರ ವಹಿಸಿಕೊಂಡ ಕೃಷ್ಣಾಪುರ ಶ್ರೀ

| Updated By: ಆಯೇಷಾ ಬಾನು

Updated on: Jan 18, 2022 | 10:14 AM

Udupi Paryaya: ಕೃಷ್ಣ ಮಠದ ಗರ್ಭಗುಡಿ ಬಳಿ ಅದಮಾರು ಈಶಪ್ರಿಯ ತೀರ್ಥರು, ಕೃಷ್ಣಾಪುರ ಶ್ರೀಗಳಿಗೆ ದ್ವೈವಾರ್ಷಿಕ ಪೂಜಾಧಿಕಾರ ಹಸ್ತಾಂತರಿಸಿದ್ದಾರೆ. ಕೃಷ್ಣಾಪುರ ವಿದ್ಯಾಸಾಗರ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.

ಉಡುಪಿಯ ಕೃಷ್ಣ ಮಠದ ಪರ್ಯಾಯ ಮಹೋತ್ಸವ; ದ್ವೈವಾರ್ಷಿಕ ಪೂಜಾಧಿಕಾರ ವಹಿಸಿಕೊಂಡ ಕೃಷ್ಣಾಪುರ ಶ್ರೀ
ಉಡುಪಿಯ ಕೃಷ್ಣ ಮಠ
Follow us on

ಉಡುಪಿ: ಉಡುಪಿಯ ಕೃಷ್ಣ ಮಠದ ಪರ್ಯಾಯ ಮಹೋತ್ಸವ ಹಿನ್ನೆಲೆ ಕೃಷ್ಣಾಪುರ ವಿದ್ಯಾಸಾಗರ ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ ನೆರವೇರಿದೆ. ಕೃಷ್ಣಾಪುರ ಶ್ರೀ ದ್ವೈವಾರ್ಷಿಕ ಪೂಜಾಧಿಕಾರ ವಹಿಸಿಕೊಂಡಿದ್ದಾರೆ. ಅದಮಾರು ಈಶಪ್ರಿಯ ತೀರ್ಥರು ಅಧಿಕಾರ ಹಸ್ತಾಂತರಿಸಿದ್ದಾರೆ. ಕೃಷ್ಣ ಮಠದ ಗರ್ಭಗುಡಿ ಬಳಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದೆ.

ಕೃಷ್ಣ ಮಠದ ಗರ್ಭಗುಡಿ ಬಳಿ ಅದಮಾರು ಈಶಪ್ರಿಯ ತೀರ್ಥರು, ಕೃಷ್ಣಾಪುರ ಶ್ರೀಗಳಿಗೆ ದ್ವೈವಾರ್ಷಿಕ ಪೂಜಾಧಿಕಾರ ಹಸ್ತಾಂತರಿಸಿದ್ದಾರೆ. ಕೃಷ್ಣಾಪುರ ವಿದ್ಯಾಸಾಗರ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. ಅಕ್ಷಯಪಾತ್ರೆ, ಅನ್ನದ ಸಟ್ಟುಗ ಹಸ್ತಾಂತರಿಸಿದ್ದಾರೆ. ಅನ್ನಬ್ರಹ್ಮನ ಕ್ಷೇತ್ರದಲ್ಲಿ ಮುಂದೆ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಪರ್ಯಾಯ ನಡೆಯಲಿದೆ.

ಇನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪರ್ಯಾಯ ಆಚರಣೆ ಮಾಡಲಾಗುತ್ತಿದ್ದು ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಮಹೋತ್ಸವ ಸೀಮಿತವಾಗಿದೆ. ರಾತ್ರಿ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭಗೊಂಡಿದ್ದು ಕೊರೊನಾ ರೂಲ್ಸ್ ಪ್ರಕಾರ ಮೆರವಣಿಗೆಗೆ ನಡೀತು. ಸೀಮಿತ ಟ್ಯಾಬ್ಲೋ, ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ವು. ಉಡುಪಿ ಜಿಲ್ಲಾಡಳಿತ ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ಟ್ಯಾಬ್ಲೋ ಪಲ್ಲಕ್ಕಿಯಲ್ಲಿ ಅಷ್ಟಮಠಾಧೀಶರ ಮೆರವಣಿಗೆ ನಡೆಯುತ್ತಿದೆ. ಕೊರೊನಾ ಹಿನ್ನೆಲೆ ಮಾನವ ಹೊರುವ ಪಲ್ಲಕ್ಕಿ ರದ್ದುಗೊಳಿಸಲಾಗಿದೆ.

ಈ ಬಾರಿ 50ಕ್ಕೂ ಅಧಿಕ ಟ್ಯಾಬ್ಲೋ ರದ್ದು ಮಾಡಲಾಗಿದೆ. ಕೇವಲ ಏಳು ಟ್ಯಾಬ್ಲೋ, ಚಂಡೆ, ಶಂಖ, ಡೋಲು, ಪಂಚವಾದ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಷ್ಟಮಠಾಧೀಶರು
ಮೆರವಣಿಗೆಯಲ್ಲಿ ಸಾಗಿ ಬಂದು ದ್ವೈವಾರ್ಷಿಕ ಪೂಜಾಧಿಕಾರದಲ್ಲಿ ಭಾಗಿಯಾದ್ರು. ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಶ್ರೀ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿಬಂದ್ರು. ಫಲಿಮಾರು, ಪೇಜಾವರ, ಕಾಣಿಯೂರು, ಸೋದೆ, ಶಿರೂರು ಶ್ರೀಗಳು ಭಾಗಿಯಾಗಿದ್ರು.

ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ

ಇದನ್ನೂ ಓದಿ: ಸ್ತಬ್ಧಚಿತ್ರಗಳ ಆಯ್ಕೆ ಕೆಲಸ ನಮ್ಮದಲ್ಲ, ಇಂಥ ಪತ್ರ ಬರೆಯುವುದು ಸರಿಯಲ್ಲ; ಮಮತಾ ಬ್ಯಾನರ್ಜಿ, ಸ್ಟಾಲಿನ್​ ಪತ್ರಕ್ಕೆ ಕೇಂದ್ರದ ಖಡಕ್​ ಪ್ರಕಟಣೆ