
ಉಡುಪಿ (ನವೆಂಬರ್ 28): ಲಕ್ಷಕಂಠ ಭಗವದ್ಗೀತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕರಾವಳಿಯ ಪುಣ್ಯಭೂಮಿ ಉಡುಪಿಗೆ (Udupi) ಆಗಮಿಸಿ ಕೃಷ್ಣದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ‘ಭಾರತ ಭಾಗ್ಯವಿದಾತ’ ಬಿರುದು ನೀಡಿ ಸನ್ಮಾನ ಮಾಡಿದ್ದಾರೆ. ಲಕ್ಷಕಂಠ ಪಾರಾಣದಲ್ಲಿ ಭಾಗವಹಿಸಿ 7 ನಿಮಿಷಗಳ ಕಾಲ ಶ್ಲೋಕ ಪಠಣ ಮಾಡಿದ ನರೇಂದ್ರ ಮೋದಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೈ ಶ್ರೀಕೃಷ್ಣ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಉಡುಪಿ ಪಾತ್ರವನ್ನು ಪ್ರಸ್ತಾಪಿಸಿದ್ದು, ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ.ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದ್ದಾರೆ ಎಂದರು.
ನನ್ನ ಜನನ ಗುಜರಾತ್ ನಲ್ಲಿ ಆಗಿದ್ದರೂ ಉಡುಪಿ ಜೊತೆ ಅವಿನಾಭಾವ ಸಂಬಂಧ ಇದೆ. ಉಡುಪಿಗೆ ಇಂದು ಭೇಟಿ ನೀಡಿದ್ದು ವಿಶಿಷ್ಟ ಅನುಭೂತಿ. ನಾನು ದ್ವಾರಕೆಯಲ್ಲಿ ಹೋಗಿ ಶ್ರೀಕೃಷ್ಣನ ದರ್ಶನ ಪಡೆದಿದ್ದೆ. ಉಡುಪಿಗೆ ಬರುವುದು ಅಂದ್ರೆ ನನಗೆ ಬಹಳ ವಿಶೇಷ. ಹಿಂದೆ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಮೊದಲ ಸ್ಥಾನ ಬಂದಿತ್ತು ಉಡುಪಿ ಭಾರತೀಯ ಜನತಾ ಪಕ್ಷದ ಕರ್ಮಭೂಮಿಯಾಗಿದೆ. ಬಿಜೆಪಿಗೆ ದಿವಂಗತ ವಿ.ಎಸ್.ಆಚಾರ್ಯರ ಕೊಡುಗೆಸಾಕಷ್ಟಿದೆ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮೋಕ್ಷ ಸಾಧ್ಯ. ಲಕ್ಷ ಕಂಠ ಗೀತಾ ಪಾರಾಯಣ ನಮಗೆ ಹೊಸ ಶಕ್ತಿ ನೀಡುತ್ತಿದೆ. ಇಂದು ವಿಶೇಷವಾಗಿ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ನಮಿಸುತ್ತೇನೆ. ಲಕ್ಷ ಕಠ ಗೀತಾ ಪಾರಾಯಣವನ್ನು ಇಂದು ಸಾಕಾರಗೊಳಿಸಿದ್ದಾರೆ ಎಂದು ಉಡುಪಿಯನ್ನು ಕೊಂಡಾಡಿದರು.
ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ, ಅಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿಯ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ಸ್ವರ್ಗೀಯಾಗಿರುವ ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ (Madhvacharya) ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ. ರಾಮ ಮಂದಿರ ಪರಿಷತ್‌ನ ಒಂದು ದ್ವಾರ ಮಧ್ವರ ಹೆಸರಿನಲ್ಲಿ ಆಗಿರೋದು ಉಡುಪಿಗೆ ಮತ್ತೊಂದು ಹೆಮ್ಮೆ. ಜಗದ್ಗುರು ಮಧ್ವಾಚಾರ್ಯರ ಪರಂಪರೆ ಹರಿದಾಸ ಪರಂಪರೆಗಳಲ್ಲಿ ಒಂದು. ಶ್ರೀಕೃಷ್ಣನ ಉಪದೇಶ ಎಲ್ಲಾ ಯುಗಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು
ಭಗವದ್ಗೀತೆಯೊಂದಿಗೆ ಮುಂದಿನ ಪೀಳಿಗೆಯನ್ನು ಜೋಡಿಸುವ ಪ್ರಯತ್ನ ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರಲ್ಲಿ ಧರ್ಮ ಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೆ ಅಸಂಖ್ಯ ಸಂಖ್ಯೆಯಲ್ಲಿ ರಾಮ ಭಕ್ತರು ಇದರೊಂದಿಗೆ ಸೇರಿದ್ದಾರೆ. ವಿಶ್ವೇಶ ತೀರ್ಥ ಸ್ವಾಮೀಜಿ ರಾಮ ಮಂದಿರ ಆಂದೋಲನ ನಡೆಸಿದ್ದು ವಿಶ್ವ ಅರಿತಿದೆ. ರಾಮ ಮಂದಿರದ ಒಂದು ದ್ವಾರಕ್ಕೆ ಮಧ್ವಾಚಾರ್ಯರ ಹೆಸರು ಉಡುಪಿ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಪುರಂದರ ದಾಸರು, ಕನಕದಾಸರು ದಾಸ ಪರಂಪರೆಯನ್ನು ಕನ್ನಡ ಭಾಷೆಯಲ್ಲಿ ಜನರ ಬಳಿಗೆ ಕೊಂಡೊಯ್ದರು. ಇಂದು ಉಡುಪಿಯಲ್ಲಿ ಕಿಂಡಿಯ ಮೂಲಕ ಭಗವಾನ್ ಶ್ರೀಕೃಷ್ಣನ ದರ್ಶನ ಆಯಿತು. ಕನಕದಾಸರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿತು.
ಪೆಹಲ್ಗಾಮ್ ದುರಂತದಲ್ಲಿ ಕರ್ನಾಟಕದ ಸಹೋದರರೂ ಜೀವ ತೆತ್ತರು.ಈ ಹಿಂದಿನ ಸರ್ಕಾರಗಳು ಉಗ್ರ ಕೃತ್ಯಗಳಾದಾಗ ಸುಮ್ಮನಿದ್ದವು. ಆದ್ರೆ, ನಾವು ನಾವು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಆಪರೇಷನ್ ಸಿಂಧೂರ ಮೂಲ ತಕ್ಕ ಉತ್ತರ ಕೊಟ್ಟರು. ಈ ಮೂಲಕ ಭಯೋತ್ಪಾದನೆ ಕೃತ್ಯವನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ನವ ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ಎಲ್ಲರೂ ಈ ಒಂಭತ್ತು ಸಂಕಲ್ಪ ಮಾಡಿ ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು. ಹಾಗಾದ್ರೆ, ಮೋದಿ ಹೇಳಿದ 9 ಸಂಕಲ್ಪಗಳೇನು ಎನ್ನುವುದು ಈ ಕೆಳಗಿನಂತಿವೆ ನೋಡಿ.
Published On - 2:43 pm, Fri, 28 November 25