ಉಡುಪಿ: ಕಂಠ ಪೂರ್ತಿ ಕುಡಿದು ಜ್ಞಾನ ದೇಗುಲದಲ್ಲೇ ಕುಡುಕ ಶಿಕ್ಷಕನ ಅವಾಂತರ
ಉಡುಪಿಯಲ್ಲಿ ಜ್ಞಾನ ದೇಗುಲದಲ್ಲಿ ಕುಡುಕ ಶಿಕ್ಷಕನ ಅವಾಂತರ. ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿದ ಶಿಕ್ಷಕ.
ಉಡುಪಿ: ಕುಡುಕ ಶಿಕ್ಷಕನೋರ್ವ ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿ ಅವಾಂತರ ಸೃಷ್ಟಿಸಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ನಡೆದಿದೆ. ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಮೂರ್ತಿ ಎಂಬ ಶಿಕ್ಷಕ ಮದ್ಯ ಸೇವಿಸಿ ಜಗಲಿಯಲ್ಲಿ ಮಲಗಿದ್ದಾರೆ. ಶಿಕ್ಷಕನ ಅವಾಂತರವನ್ನು ವಿಡಿಯೋ ಮಾಡಿದ ಸ್ಥಳೀಯರು ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Published on: Dec 28, 2022 01:17 PM
Latest Videos