ನನ್ನ ಮಗಳು ಇನ್ನೊಬ್ಬರ ಮನಸಿಗೆ ನೋವು ಮಾಡುವವಳಲ್ಲ, ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸಿದ್ದಾರೆ -ಚೈತ್ರಾ ಕುಂದಾಪುರ ತಾಯಿ

| Updated By: ಆಯೇಷಾ ಬಾನು

Updated on: Sep 14, 2023 | 3:07 PM

ಚೈತ್ರಾ ಕುಂದಾಪುರ ಅವರ ತಾಯಿ ರೋಹಿಣಿ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು ನನ್ನ ಮಗಳು ಇನ್ನೊಬ್ಬರ ಮನಸಿಗೆ ನೋವು ಮಾಡುವವಳಲ್ಲ. ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸಿದ್ದಾರೆ. ಅವಳದ್ದು ನೇರವಾಗಿ ಮಾತನಾಡುವ ಪ್ರವೃತ್ತಿ, ತಪ್ಪು ಮಾಡಲುವ ಪ್ರವೃತ್ತಿಯಲ್ಲ. ಅವಳ ಮೇಲೆ ನನಗೆ ನಂಬಿಕೆ ಇದೆ. ಅವಳು ತಪ್ಪು ಮಾಡಿಲ್ಲ ಎಂದರು.

ನನ್ನ ಮಗಳು ಇನ್ನೊಬ್ಬರ ಮನಸಿಗೆ ನೋವು ಮಾಡುವವಳಲ್ಲ, ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸಿದ್ದಾರೆ -ಚೈತ್ರಾ ಕುಂದಾಪುರ ತಾಯಿ
ಚೈತ್ರಾ ಕುಂದಾಪುರ ತಾಯಿ ರೋಹಿಣಿ
Follow us on

ಉಡುಪಿ, ಸೆ.14: ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚಿಸಿರೋ ಕೇಸ್​ನಲ್ಲಿ ಚೈತ್ರಾ ಕುಂದಾಪುರ ಅವರನ್ನ ಅರೆಸ್ಟ್ ಮಾಡಲಾಗಿದೆ. ಸಿಸಿಬಿ ತನಿಖೆ ಆರಂಭವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಚೈತ್ರಾ ಕುಂದಾಪುರ(Chaitra Kundapura) ಅವರ ತಾಯಿ ರೋಹಿಣಿ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು ನನ್ನ ಮಗಳು ಇನ್ನೊಬ್ಬರ ಮನಸಿಗೆ ನೋವು ಮಾಡುವವಳಲ್ಲ. ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿಸಿದ್ದಾರೆ. ಅವಳದ್ದು ನೇರವಾಗಿ ಮಾತನಾಡುವ ಪ್ರವೃತ್ತಿ, ತಪ್ಪು ಮಾಡಲುವ ಪ್ರವೃತ್ತಿಯಲ್ಲ. ಅವಳ ಮೇಲೆ ನನಗೆ ನಂಬಿಕೆ ಇದೆ. ಅವಳು ತಪ್ಪು ಮಾಡಿಲ್ಲ ಎಂದು ತಮ್ಮ ಮಗಳ ಬಗ್ಗೆ ರೋಹಿಣಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚೈತ್ರಾ ಅರೆಸ್ಟ್​ ಆಗಿರುವ ಬಗ್ಗೆ ನನ್ನ ದೊಡ್ಡ ಮಗಳು ಮಾಹಿತಿ ನೀಡಿದ್ದಳು. ಮನೆಯಲ್ಲಿ ಚೈತ್ರಾ ನಮಗೆ ಯಾವುದೇ ರೀತಿಯ ಟೆನ್ಶನ್ ನೀಡುತ್ತಿರಲಿಲ್ಲ. ಚೈತ್ರಾ ಹೊಸ ಕಾರು ಖರೀದಿಸಿದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬ್ಯಾಂಕ್​ನಲ್ಲಿ ಒಂದು ಲೋನ್ ಇದೆ ಎನ್ನುವ ಮಾಹಿತಿ ಇದೆ. ಆದರೆ ಅದು ಯಾವುದು ಅಂತ ಗೊತ್ತಿಲ್ಲ. ವಾರದ ಹಿಂದೆ ಕುಂದಾಪುರದ ಮನೆಯಲ್ಲೇ ನನ್ನ ಪುತ್ರಿ ಚೈತ್ರಾ ಇದ್ದಳು. ಯಾವುದಾದರೂ ಕಾರ್ಯಕ್ರಮಕ್ಕೆ ಕರೆದಾಗ ಎಲ್ಲರ ಜೊತೆ ಹೋಗ್ತಿದ್ದಳು. ವಾರದ ಹಿಂದೆ ಇಲ್ಲಿಂದ ತೆರಳಿದವಳು ಅರೆಸ್ಟ್ ಆಗಿದ್ದಾಳೆ.

ಅರೆಸ್ಟ್ ಆದ ಬಳಿಕ ನಿನ್ನೆ ಎರಡು ಗಂಟೆಯ ಹೊತ್ತಿಗೆ ನನಗೆ ಪೊಲೀಸ್ ಮೂಲಕ ಕರೆ ಮಾಡಿದ್ದಳು. ಏನಾಗುವುದಿಲ್ಲ, ಆರಾಮವಾಗಿರು ಔಷಧಿ ತೆಗೆದುಕೊಳ್ಳಿ ಎಂದಿದ್ದಳು. ಅವಳ ಬಗ್ಗೆ ನನಗೆ ನಂಬಿಕೆ ಇದೆ. ಇನ್ನೊಬ್ಬರ ಮನಸಿಗೆ ನೋವು ಮಾಡದ ವ್ಯಕ್ತಿತ್ವ ಅವಳದ್ದು. ಯಾರೋ ಆಕೆಯನ್ನು ಮುಂದಿಟ್ಟುಕೊಂಡು ಈ ಕೆಲಸ ನಡೆಸಿದ್ದಾರೆ. ನೇರವಾಗಿ ಮಾತನಾಡುವ ಪ್ರವೃತ್ತಿ ಅವಳದ್ದು, ತಪ್ಪು ಮಾಡಲುವ ಪ್ರವೃತ್ತಿಯಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗುವ ಕುಟುಂಬ ನಮ್ಮದಲ್ಲ ಎಂದು ಕುಂದಾಪುರದಲ್ಲಿ ಚೈತ್ರಾ ಕುಂದಾಪುರ ಅವರ ತಾಯಿ ರೋಹಿಣಿ ಹೇಳಿದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆಗೆ ಸಿಲುಕಿದ ಗೋವಿಂದ ಬಾಬು ಪೂಜಾರಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಭರವಸೆ ನೀಡಿ 5 ಕೋಟಿ ದೋಚಿದ ಆರೋಪದ ಮೇಲೆ ಚೈತ್ರ ಕುಂದಾಪುರ ಅವರನ್ನು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬಂಧನವಾಗಿದೆ. ಚೈತ್ರ ಕುಂದಾಪುರ ಬಂಧನದ ಬಳಿಕ ಆಕೆಯ ಕ್ರಿಮಿನಲ್ ಪ್ಲಾನ್ ಜೊತೆ ಆಕೆಯ ಪೂರ್ವಪರ ಬೆಳಕಿಗೆ ಬರುತ್ತಿದೆ. ಸದ್ಯ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಆದೇಶ ಹೊರಡಿಸಿದೆ.

ಉಡುಪಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ