ಕೋಟ್ಯಾಧೀಶೆ ಆಗಲು ಹೊರಟ ಚೈತ್ರ ಕುಂದಾಪುರ; ಬಡತನದಿಂದ ಇಲ್ಲಿಯವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಸೇರಿದಂತೆ 5 ಜನರನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶ ಹೊರಡಿಸಿದೆ. ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಚೈತ್ರ ಕುಂದಾಪುರ ಏಕಾಏಕಿ ಕೋಟ್ಯಾಧೀಶೆ ಆಗುವ ಕನಸು ಕಂಡ ಕಥೆ ಮಾತ್ರ ರೋಚಕ.
ಉಡುಪಿ, ಸೆಪ್ಟೆಂಬರ್ 13: ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಭರವಸೆ ನೀಡಿ ಕೋಟಿ ಕೋಟಿ ದೋಚಿದ ಆರೋಪದ ಮೇಲೆ ಚೈತ್ರ ಕುಂದಾಪುರ ಬಂಧನವಾಗಿದೆ. ಚೈತ್ರ ಕುಂದಾಪುರ ಬಂಧನದ ಬಳಿಕ ಆಕೆಯ ಕ್ರಿಮಿನಲ್ ಪ್ಲಾನ್ ಜೊತೆ ಆಕೆಯ ಪೂರ್ವಪರ ಬೆಳಕಿಗೆ ಬರುತ್ತಿದೆ. ಸದ್ಯ ಚೈತ್ರ ಕುಂದಾಪುರ (Chaitra Kundapura), ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಈಕೆ ಏಕಾಏಕಿ ಕೋಟ್ಯಾಧೀಶೆ ಆಗುವ ಕನಸು ಕಂಡ ಕಥೆ ಮಾತ್ರ ರೋಚಕ. ಮುಂದೆ ಓದಿ.
ಚೈತ್ರ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವಳು. ಬಡ ಕುಟುಂಬದಲ್ಲಿ ಹುಟ್ಟಿದ ಇವಳ ತಂದೆ ತಾಯಿ ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಚೈತ್ರ ಕುಂದಾಪುರ ತನ್ನ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿಸಿ, ಬಳಿಕ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರಿನ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸುತ್ತಾಳೆ.
ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿ
ಆರಂಭದಲ್ಲಿಯೇ ಎಬಿವಿಪಿ ಹುಡಗರ ಜೊತೆ ಗುರುತಿಸಿಕೊಂಡಿದ್ದ ಇವಳು ಪದವಿ ಶಿಕ್ಷಣ ಪಡೆಯುವ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಬಿವಿಪಿಯಲ್ಲಿ ತೊಡಗಿಕೊಳ್ಳುತ್ತಾಳೆ. ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಎಬಿವಿಪಿಯಲ್ಲಿ ವಿವಿಧ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಾಳೆ.
ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕೆಲಸ
ಕಾಲೇಜು ಮುಗಿದ ಬಳಿಕ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರ ಕುಂದಾಪುರ, ಎಬಿವಿಪಿಯಿಂದ ಹಿಂದೆ ಸರಿಯುತ್ತಾಳೆ. ನಾಲ್ಕೈದು ವರ್ಷಗಳ ಕಾಲ ಸ್ಥಳೀಯ ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡಿದ ಬಳಿಕ, ಮತ್ತೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಾಳೆ.
ಇದನ್ನೂ ಓದಿ: ಎಂಎಲ್ಎ ಟಿಕೆಟ್ ವಂಚನೆ: ಚೈತ್ರಾ ಕುಂದಾಪುರ ಸೆ. 23ರ ವರೆಗೆ ಸಿಸಿಬಿ ಕಸ್ಟಡಿಗೆ
ನಂತರ ಈ ಚೈತ್ರ ಹಿಂದೂ ಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುತ್ತಾಳೆ. ರಾಷ್ಟ್ರೀಯತೆ, ಹಿಂದೂ ಧರ್ಮ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಭಾಷಣಕಾರ್ತಿಯಾಗಿ ತೊಡಗಿಕೊಂಡಿದ್ದಳು. ಬಳಿಕ ಮಾಡಿದ್ದೆ ಕೋಟಿ ಕೋಟಿ ಲೂಟಿಯ ಪ್ಲ್ಯಾನ್.
ತನ್ನ ಉಗ್ರ ಭಾಷಣದಿಂದ ಸಾಕಷ್ಟು ಜನರ ವಿರೋಧಕ್ಕೆ ಗುರಿಯಾಗಿದ್ದ ಚೈತ್ರ ಕುಂದಾಪುರ, ಕೋಟಿ ಕೋಟಿ ದೋಚುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಪ್ರತಿ ಭಾರಿ ಇಂತಹ ವಿವಾದಗಳು ಪ್ರಕರಣಗಳು ನಡೆದಾಗ ತಪ್ಪಿಸಿಕೊಳ್ಳಲು ಏನೇನೋ ಕಾರಣ ಹೇಳುತ್ತಿದ್ದ ಚೈತ್ರ ಕುಂದಾಪುರ, ಈ ಬಾರಿ ಸಾಕ್ಷಿ ಸಮೇತ ಪೊಲೀಸರಿಗೆ ಲಾಕ್ ಆಗಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.