Maravanthe Beach: ಕಡಲ ಕೊರೆತದ ನಡುವೆ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ, ಸಮುದ್ರಕ್ಕೆ ಇಳಿದು ಅನಾಹುತಕ್ಕೆ ಆಹ್ವಾನ

| Updated By: ಆಯೇಷಾ ಬಾನು

Updated on: Jul 12, 2023 | 10:45 AM

ಪ್ರತಿ ದಿನ ಪ್ರವಾಸಿಗರು ಮರವಂತೆ ಬೀಚ್​ಗೆ ಆಗಮಿಸಿ ಸಮುದ್ರದ ಅಲೆಗಳ ನರ್ತನವನ್ನು ಎಂಜಾಯ್ ಮಾಡಿದ್ದಾರೆ. ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಅನಾಹುತಕ್ಕೆ ಆಹ್ವಾನ ಕೊಟ್ಟಂತಾಗಿದೆ.

Maravanthe Beach: ಕಡಲ ಕೊರೆತದ ನಡುವೆ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ, ಸಮುದ್ರಕ್ಕೆ ಇಳಿದು ಅನಾಹುತಕ್ಕೆ ಆಹ್ವಾನ
ಮರವಂತೆ ಬೀಚ್
Follow us on

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಹಿನ್ನೆಲೆ ಸಾಕಷ್ಟು ಭಾಗದಲ್ಲಿ ಕಡಲ ಕೊರೆತ ಸಮಸ್ಯೆ ಉಂಟಾಗಿದೆ(Karnataka Rain). ಆದ್ರೆ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಮರವಂತೆ ಬೀಚ್​ನಲ್ಲಿ(Maravanthe Beach) ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಪ್ರತಿ ದಿನ ಪ್ರವಾಸಿಗರು ಮರವಂತೆ ಬೀಚ್​ಗೆ ಆಗಮಿಸಿ ಸಮುದ್ರದ ಅಲೆಗಳ ನರ್ತನವನ್ನು ಎಂಜಾಯ್ ಮಾಡಿದ್ದಾರೆ. ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಅನಾಹುತಕ್ಕೆ ಆಹ್ವಾನ ಕೊಟ್ಟಂತಾಗಿದೆ.

ಮಳೆಗಾಲ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬೀಚ್​ಗಳಿಗೂ ಪ್ರವೇಶ ನಿಷೇಧ ಹೇರಲಾಗಿದೆ. ಮಳೆಗಾಲದಲ್ಲಿ ಕಡಲಬ್ಬರ ಜಾಸ್ತಿ ಆಗುವ ಹಿನ್ನಲೆ ಬೀಚ್​ಗಳ ಬಳಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಜಿಲ್ಲೆಯಲ್ಲಿ ಬೀಚ್ ಪ್ರವೇಶ ನಿಷೇಧ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ಮಲ್ಪೆ ಬೀಚ್​ಗೆ ಬಲೆ ಅಳವಡಿಕೆ ಮಾಡಲಾಗಿದೆ. ಆದರೆ ಮರವಂತೆ ಬೀಚ್​ಗೆ ಯಾವುದೇ ಭದ್ರತೆ ಕೈಗೊಂಡಿಲ್ಲ. ಹೀಗಾಗಿ ಮೂರು ಕಿಲೋಮೀಟರ್ ಉದ್ದದ ಬೀಚ್​ಗೆ ಪ್ರವಾಸಿಗರು ನಿತ್ಯ ಆಗಮಿಸುತ್ತಿದ್ದಾರೆ.

ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ನೀಡದೆ ಸಮುದ್ರಕ್ಕೆ ಇಳಿದು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ಬೀಚ್​ಗೆ ಇಳಿಯುತ್ತಿದ್ದಾರೆ. ದಿನವೂ ಸಾವಿರಾರು ಪ್ರವಾಸಿಗರು ಮರವಂತೆ ಬೀಚ್​ಗೆ ಭೇಟಿ ನೀಡುತ್ತಿದ್ದು ಬೀಚ್​ಗೆ ಫೆನ್ಸಿಂಗ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ಅವಘಡಗಳು ಇಲ್ಲಿ ನಡೆಯುತ್ತವೆ. ಹೀಗಾಗಿ ಮಲ್ಪೆ ಬೀಚಿನಷ್ಟೇ ಪ್ರಾಮುಖ್ಯತೆಯನ್ನು ಮರವಂತೆ ಬೀಚ್ ಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ಟೊಮ್ಯಾಟೊಗಾಗಿ ಚಾಕು ಇರಿತ; ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಹೊಸಬೆಂಗ್ರೆ ಪ್ರದೇಶದಲ್ಲಿ ವ್ಯಾಪಕವಾಗಿ ಕಡಲ ಕೊರೆತ ಉಂಟಾಗಿದ್ದು ಸಂಪರ್ಕ ರಸ್ತೆ ಸಮುದ್ರ ಪಾಲಾಗಿದೆ. ಸದ್ಯ ಕಡಲ ಕೊರೆತ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.

ಬ್ರಹ್ಮಾವರ ತಾಲೂಕಿನ ಕೋಡಿ ಹೊಸ ಬೇಂಗ್ರೆಯಲ್ಲಿ ಕಡಲ್ಕೊರೆತಕ್ಕೆ ಸಿಕ್ಕಿ ಸಮುದ್ರ ತೀರದ ಸಂಪರ್ಕಕ್ಕಾಗಿ ಮಾಡಲಾಗಿದ್ದ ಕಚ್ಚ ರಸ್ತೆ ಸಮುದ್ರ ಪಾಲಾಗಿದೆ. ಕೋಡಿ ಪರಿಸರದಲ್ಲಿ ಮೀನುಗಾರಿಕೆಗೆ ತೆರಳುವ ದೋಣಿಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಕಿರಿದಾದ ಲೈಟ್ ಹೌಸ್ ಕೂಡ ಕಡಲ ಕೊರೆತದ ಪಾಲಾಗುವ ಭೀತಿ ಎದುರಾಗಿತ್ತು. ಕಳೆದ ಬಾರಿ ಹಾಕಿದ್ದ ತಡೆಗೋಡೆಗಳು ಕೂಡ ಮಳೆರಾಯನ ಅಬ್ಬರಕ್ಕೆ ಕಡಲು ಉಕ್ಕಿ ಹರಿದ ಪರಿಣಾಮ ಸಮುದ್ರ ಪಾಲಾಗಿತ್ತು. ಸದ್ಯ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಸುಮಾರು 500 ಮೀಟರ್ ವ್ಯಾಪ್ತಿಯ ಕಡಲು ತೀರದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣವಾಗಿ ಸಮುದ್ರ ಪಾಲಾಗಿದ್ದ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯವು ಕೂಡ ಪ್ರಗತಿಯಲ್ಲಿದೆ.

ಉಡುಪಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ