ಉಡುಪಿ ನಾಲ್ವರ ಕೊಲೆ ಪ್ರಕರಣ; ಆರೋಪಿ ಪೊಲೀಸ್ ಹುದ್ದೆ ಬಿಟ್ಟ ಹಿಂದಿದೆ ಸ್ಫೋಟಕ ಕಾರಣ

| Updated By: ಆಯೇಷಾ ಬಾನು

Updated on: Nov 22, 2023 | 2:19 PM

ಉಡುಪಿ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆಯಿಂದ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗವಾಗಿದೆ. ಪ್ರವೀಣ್ ಚೌಗಲೆಯ ಹೇಳಿಕೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಗೋಲ್ಡ್ ಸ್ಮಗ್ಲಿಂಗ್ ಕಾರಣಕ್ಕಾಗಿ ಮಹಾರಾಷ್ಟ್ರದ ಪೊಲೀಸ್ ಹುದ್ದೆಯನ್ನು ಬಿಟ್ಟೆ ಎಂದು ಆರೋಪಿ ಪ್ರವೀಣ್ ತಿಳಿಸಿದ್ದಾರೆ.

ಉಡುಪಿ ನಾಲ್ವರ ಕೊಲೆ ಪ್ರಕರಣ; ಆರೋಪಿ ಪೊಲೀಸ್ ಹುದ್ದೆ ಬಿಟ್ಟ ಹಿಂದಿದೆ ಸ್ಫೋಟಕ ಕಾರಣ
ಆರೋಪಿ ಪ್ರವೀಣ್ ಚೌಗಲೆ
Follow us on

ಉಡುಪಿ, ನ.22: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ (Udupi 4 Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆಯಿಂದ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗವಾಗಿದೆ. ಪ್ರವೀಣ್ ಚೌಗಲೆಯ (Praveen Chougule) ಹೇಳಿಕೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಗೋಲ್ಡ್ ಸ್ಮಗ್ಲಿಂಗ್ ಕಾರಣಕ್ಕಾಗಿ ಮಹಾರಾಷ್ಟ್ರದ ಪೊಲೀಸ್ ಹುದ್ದೆಯನ್ನು ಬಿಟ್ಟೆ ಎಂದು ಆರೋಪಿ ಪ್ರವೀಣ್ ತಿಳಿಸಿದ್ದಾರೆ. ಅಲ್ಲದೆ ಸಾಕ್ಷ್ಯ ನಾಶ ಉದ್ದೇಶದಿಂದಲೇ ಇತರ ಮೂವರ ಹತ್ಯೆ ಮಾಡಲಾಗಿರುವ ಬಗ್ಗೆ ತನಿಖೆ ವೇಳೆ ಸಾಬೀತಾಗಿದೆ. ಸದ್ಯ ಆರೋಪಿಯನ್ನು ನವೆಂಬರ್ 28 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಪೊಲೀಸ್ ಹುದ್ದೆಗೆ ಸೇರ್ಪಡೆಗೊಂಡಿದ್ದ ಚೌಗಲೆ ಮೂರೇ ತಿಂಗಳಲ್ಲಿ ಆ ಹುದ್ದೆ ತೊರೆದಿದ್ದ. ಆ ಹುದ್ದೆ ತೊರೆಯುವುದಕ್ಕೆ ಗೋಲ್ಡ್ ಸ್ಮಗ್ಲಿಂಗ್ ಕಾರಣ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. 2008ರ ಏಪ್ರಿಲ್ ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದ ಪ್ರವೀಣ್, 3 ತಿಂಗಳ ಟ್ರೈನಿಂಗ್ ಆಗುತ್ತಲೇ ಪೊಲೀಸ್ ಹುದ್ದೆಗೆ ಗುಡ್ ಬೈ ಹೇಳಿದ್ದ. ಏಕೆಂದರತೆ ಪೊಲೀಸ್ ಟ್ರೈನಿಂಗ್ ನಲ್ಲೇ ಗೋಲ್ಡ್ ಸ್ಲಗ್ಲಿಂಗ್ ಬಗ್ಗೆ ತಿಳಿದುಕೊಂಡಿದ್ದ. ಟ್ರೈನಿಂಗ್​ನಲ್ಲಿ ದೈಹಿಕ ಸಾಮರ್ಥ್ಯ ಸೇರಿದಂತೆ ಎಲ್ಲದರಲ್ಲೂ ಟಾಪರ್ ಆಗಿದ್ದ ಪ್ರವೀಣ್, 3 ತಿಂಗಳ ಬಳಿಕ ಏರ್ ಪೋರ್ಟ್ ನಲ್ಲಿ ಹುದ್ದೆ ಪಡೆದು ಪುಣೆಯಲ್ಲಿ ಸೆಟಲ್ ಆಗಿದ್ದ. ಕಳೆದ 15 ವರ್ಷಗಳಲ್ಲಿ ಬೇಕಾಬಿಟ್ಟಿ ಆಸ್ತಿ ಗಳಿಸಿ, ಮಾರಾಟ ಮಾಡಿದ್ದ. ಅಧಿಕಾರಿ ವರ್ಗಗಳಲ್ಲೂ ಭಾರೀ ಪ್ರಭಾವಿ ಆಗಿದ್ದ. ಈ ಪ್ರಭಾವದಿಂದಲೇ ಗಗನಸಖಿ ಅಯ್ನಾಝ್ ಗೆ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ: Udupi Murder Case: ಉಡುಪಿಯಲ್ಲಿ ನಾಲ್ವರ ಕೊಲೆ ಪ್ರಕರಣ; ಫೇಸ್​​ಬುಕ್​ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದವನ ವಿರುದ್ದ ಸುಮೋಟೋ ಕೇಸ್

ಇನ್ನು ಪೊಲೀಸ್ ಕಸ್ಟಡಿಯಲ್ಲಿ ಬಹುತೇಕ ತನಿಖೆ ಪೂರ್ಣಗೊಂಡಿದೆ. 14 ದಿ‌‌ನಗಳ ಕಾಲ ಪೊಲೀಸ್ ಕಸ್ಟಡಿ ಪಡೆದಿದ್ದ ಮಲ್ಪೆ ಪೊಲೀಸರು ಆರು ದಿನದಲ್ಲಿ ತಮಗೆ ಬೇಕಾದ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ತನಿಖೆಯಲ್ಲಿ ನಾಲ್ವರ ಹತ್ಯೆ ಮಾಡಿದ್ದಕ್ಕೆ ಎಲ್ಲೂ ಕೂಡ ಪ್ರವೀಣ್ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಸಾಕ್ಷ್ಯ ನಾಶ ಉದ್ದೇಶದಿಂದಲೇ ಮೂವರ ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಉಡುಪಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು ನವೆಂಬರ್ 28 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:18 pm, Wed, 22 November 23