ಉಡುಪಿ: ಮೀನುಗಾರಿಕೆಗೆ ತೆರಳಿದ್ದ ವೇಳೆ ಬಲೆಯೊಳಗೆ ಸಿಲುಕಿ ಮೀನುಗಾರ ಸಾವು
ಪ್ರತ್ಯೇಕ ಘಟನೆ: ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸಮುದ್ರ ಕಿನಾರೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಬಲೆಯೊಳಗೆ ಸಿಲುಕಿ ಮೀನುಗಾರ ಸಾವನ್ನಪ್ಪಿದ ಘಟನೆ ನಡೆದಿದೆ. ಇತ್ತ ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4, ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಬ್ಯಾಡರಹಳ್ಳಿ ಗೋವಿಂದರಾಜು(57) ಮೃತ ಬೈಕ್ ಸವಾರ.
ಉಡುಪಿ, ಮಾ.01: ಮೀನುಗಾರಿಕೆಗೆ ತೆರಳಿದ್ದ ವೇಳೆ ಬಲೆಯೊಳಗೆ ಸಿಲುಕಿ ಮೀನುಗಾರನೋರ್ವ(Fisherman) ಸಾವನ್ನಪ್ಪಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸಮುದ್ರ ಕಿನಾರೆಯಲ್ಲಿ ನಡೆದಿದೆ. ಪೊಲಿಪು ನಿವಾಸಿ ಕಿಶೋರ್ (29 ) ಮೃತ ದುರ್ದೈವಿ. ಪ್ರತಿದಿನ ಕಯಾಕ್ ಮೂಲಕ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್, ಇಂದು ಮುಂಜಾನೆಯು ಕಾಯಾಕ್ ಮೂಲಕ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ಗೆ ಕಾರು ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
ಬೆಂಗಳೂರು ಗ್ರಾಮಾಂತರ: ಬೈಕ್ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4, ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಬ್ಯಾಡರಹಳ್ಳಿ ಗೋವಿಂದರಾಜು(57) ಮೃತ ಬೈಕ್ ಸವಾರ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಇನ್ನು ಅಪಘಾತ ಬಳಿಕ ಕಾರು ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:‘ಕಾಲ’ ಕೂಡಿಬಂದರೆ ಸಾವು ನಿಶ್ಚಿತ: ಪ್ರಾಣ ತೆಗೆದ ಎಗ್ ಬಜ್ಜಿ.. ವನಪರ್ತಿ ಜಿಲ್ಲೆಯಲ್ಲಿ ದುರಂತ! ಏನಾಯಿತು?
ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ವ್ಯಕ್ತಿ ಸಾವು
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಸಮೀಪ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಡೆದಿದೆ. ಕೆ.ರಾಮೇನಹಳ್ಳಿ ರಾಮಪ್ಪ(55)ಮೃತ ಬೈಕ್ ಸವಾರ. ಇನ್ನು ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮೃತರ ತಲೆ ಚೂರಾಗಿತ್ತು. ಇತ್ತ ಮತ್ತೊಂದು ಬೈಕ್ನಲ್ಲಿದ್ದ ಯುವಕರಿಗೂ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಯ ಟೆರೇಸ್ ಮೇಲೆ ವ್ಯಕ್ತಿಯ ಮೃತ ದೇಹ ಪತ್ತೆ
ಶಿವಮೊಗ್ಗ: ಮನೆಯ ಟೆರೇಸ್ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಸಾಗರದ ನೆಹರು ನಗರದಲ್ಲಿ ಘಟನೆ ನಡೆದಿದೆ. ಮಧುಸೂದನ್ (55) ಮೃತ ದುರ್ದೈವಿ. ತನ್ನ ಸಂಬಂಧಿಕರ ಮನೆಯ ಟೆರೇಸ್ನ ಸಿಂಟೆಕ್ಸ್ ಸ್ಟ್ಯಾಂಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೃತ ಮಧುಸೂದನ್, ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಈ ಹಿನ್ನಲೆ ಮಧುಸೂದನ್ ಕೆಲಸಕ್ಕಾಗಿ ಇಂದು ಶಿರಸಿಗೆ ಹೋಗಬೇಕಿತ್ತು. ಉದ್ಯೋಗ ಸಿಗದೇ ಇರುವ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ