ಹಿರಿಯ ಚಿಂತಕ, ಸಾಹಿತಿ ಜಿ. ರಾಜಶೇಖರ್ ನಿಧನ

| Updated By: ವಿವೇಕ ಬಿರಾದಾರ

Updated on: Jul 21, 2022 | 12:32 AM

ಹಿರಿಯ ಚಿಂತಕ, ಸಾಹಿತಿ, ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರಾಗಿದ್ದ ಜಿ. ರಾಜಶೇಖರ್ (75) ಅನಾರೋಗ್ಯದಿಂದ ಬುಧವಾರ (ಜುಲೈ 20) ರಾತ್ರಿ 11:15 ಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಿರಿಯ ಚಿಂತಕ, ಸಾಹಿತಿ ಜಿ. ರಾಜಶೇಖರ್ ನಿಧನ
ಜಿ. ರಾಜಶೇಖರ್
Follow us on

ಉಡುಪಿ: ಹಿರಿಯ ಚಿಂತಕ, ಸಾಹಿತಿ, ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರಾಗಿದ್ದ ಜಿ. ರಾಜಶೇಖರ್ (75) ಅನಾರೋಗ್ಯದಿಂದ ಬುಧವಾರ (ಜುಲೈ 20) ರಾತ್ರಿ 11:15 ಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಶೇಖರ್‌  ಅವರು ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಿ. ರಾಜಶೇಖರ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕೆಲಕಾಲ ಶಿಕ್ಷಕರಾಗಿ ಕೆಲಸಮಾಡಿ ಎಲ್ಐಸಿಯಲ್ಲಿ ಉದ್ಯೋಗಸ್ಥರಾದರು. ಜಿ. ರಾಜಶೇಖರ ಅವರು ಸಾಹಿತ್ಯ-ಸಮಾಜ-ರಾಜಕಾರಣ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಬರೆಯತ್ತ ಬಂದಿದ್ದಾರೆ.

ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ ಮಂತಾದವು ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.

ರಾಜಶೇಖರ ಅವರು ತಮ್ಮ ‘ಬಹುವಚನ ಭಾರತ’ ಕೃತಿಗೆ “ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ 2015ರ ಸಾಲಿನಲ್ಲಿ ಪ್ರಕಟಿಸಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು.

Published On - 12:28 am, Thu, 21 July 22