ಮಂಗಳೂರು: ಉಜಿರೆಯಿಂದ ಅಪಹೃತಗೊಂಡಿದ್ದ ಅನುಭವ್ ಎಂಬ ಬಾಲಕನನ್ನು ಕೋಲಾರದ ಮಾಸ್ತಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ರಕ್ಷಿಸಿದ್ದರು. ಜೊತೆಗೆ, 6 ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದರು ಎಂದು ಉಜಿರೆಯ ಬಾಲಕ ಅನುಭವ್ ಕಿಡ್ನಾಪ್ ಪ್ರಕರಣದ ಬಗ್ಗೆ ದಕ್ಷಿಣ ಕನ್ನಡ ಎಸ್.ಪಿ. ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಬಂಧಿತ ಆರೋಪಿಗಳು ಅನುಭವ್ನನ್ನು ಅಪಹರಿಸಿದ್ದರು. ಆದರೆ ಇವರಿಗೆ ಸುಪಾರಿ ಕೊಟ್ಟಿರುವ ವ್ಯಕ್ತಿ ಬೇರೆ ಇದ್ದಾನೆ. ಹೊರಗಿನ ವ್ಯಕ್ತಿಗಳು ಕುಟುಂಬದ ಬಗ್ಗೆ ವಿಚಾರಿಸ್ತಿದ್ದ ಮಾಹಿತಿ ಲಭ್ಯವಾಗಿದೆ. ಅದರ ಆಧಾರದಲ್ಲೂ ನಾವು ಪತ್ತೆ ಕಾರ್ಯ ಆರಂಭಿಸಿದ್ದೆವು. 7 ಲಕ್ಷ ಕೊಡೋದಾಗಿ ಹೊರಗಿನ ವ್ಯಕ್ತಿ ಸುಪಾರಿ ಕೊಟ್ಟಿದ್ದ. ಆತ ಈ ಕುಟುಂಬದ ಪರಿಚಯಸ್ಥ ಎಂಬ ಮಾಹಿತಿಯಿದೆ. ಆತನ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಎಸ್.ಪಿ ಲಕ್ಷ್ಮೀಪ್ರಸಾದ್ ಹೇಳಿದರು.
ಕಿಡ್ನ್ಯಾಪ್ ಆಗಿದ್ದ ಬಾಲಕ ಅನುಭವ್ ಬಿಚ್ಚಿಟ್ಟ ಅನುಭವ.. ಪೋಷಕರು ಹೇಳಿದ್ದೇನು?
ಉಜಿರೆ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ: ಬೆಳಗಿನ ಜಾವ ಕೋಲಾರದಲ್ಲಿ ಬಾಲಕ, ಅಪಹರಣಕಾರರ ಪತ್ತೆ!