ನಿನ್ನೆ ಅಳಲು ತೋಡಿಕೊಂಡ ಸಿದ್ದರಾಮಯ್ಯ, ಇಂದು ‘ಆ 12 ಸ್ಥಾನ’ ಗೆದ್ದು ಮುಖ್ಯಮಂತ್ರಿ ಆಗುವ ಪಣ ತೊಟ್ಟರು

ಮೈಸೂರು, ಚಾಮರಾಜನಗರದಿಂದ 12 ಸ್ಥಾನ ಗೆದ್ದರಷ್ಟೇ ನಾವು ಮತ್ತೆ ಮುಖ್ಯಮಂತ್ರಿ ಸ್ಥಾನ ಕೇಳಲು ಸಾಧ್ಯ ಆದ್ದರಿಂದ ಚುನಾವಣೆಗೆ ಎಚ್ಚರಿಕೆಯಿಂದ ಸಿದ್ದರಾಗಬೇಕು ನಿಗದಿತ ಸಮಯಕ್ಕಿಂತ ಮೊದಲೇ ಚುನಾವಣೆ ಬರಬಹುದು. ಯಾವುದೇ ಕಾರಣಕ್ಕೂ ಯಾರೂ ಮೈಮರೆಯಬಾರದು ಎಂದು ಕರೆ ನೀಡಿದ್ದಾರೆ.

ನಿನ್ನೆ ಅಳಲು ತೋಡಿಕೊಂಡ ಸಿದ್ದರಾಮಯ್ಯ, ಇಂದು ‘ಆ 12 ಸ್ಥಾನ’ ಗೆದ್ದು ಮುಖ್ಯಮಂತ್ರಿ ಆಗುವ ಪಣ ತೊಟ್ಟರು
ಮೈಸೂರಿನಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ
Skanda

| Edited By: sadhu srinath

Dec 19, 2020 | 5:29 PM

ಮೈಸೂರು: ನಿನ್ನೆಯಷ್ಟೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಸ್ವಪಕ್ಷೀಯರೇ ಕಾರಣ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಮತ್ತೆ ಮುಖ್ಯಮಂತ್ರಿ ಆಗುವ ಆಸೆಯನ್ನು ಹಂಚಿಕೊಂಡಿದ್ದಾರೆ. ಮೈಸೂರಿನ ಖಾಸಗಿ ಹೊಟೇಲಿನಲ್ಲಿ ಕಾಂಗ್ರೆಸ್​ನ ಶಾಸಕರು, ಮಾಜಿ ಶಾಕರೊಂದಿಗೆ ನಡೆಸಿದ ಸಭೆಯಲ್ಲಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಿಂದ 12 ಸ್ಥಾನ ಗೆದ್ದರಷ್ಟೇ ನಾವು ಮತ್ತೆ ಮುಖ್ಯಮಂತ್ರಿ ಸ್ಥಾನ ಕೇಳಲು ಸಾಧ್ಯ ಆದ್ದರಿಂದ ಚುನಾವಣೆಗೆ ಎಚ್ಚರಿಕೆಯಿಂದ ಸಿದ್ದರಾಗಬೇಕು ಎಂದು ಕರೆ ನೀಡಿದ್ದಾರೆ. ನಿಗದಿತ ಸಮಯಕ್ಕಿಂತ ಮೊದಲೇ ಚುನಾವಣೆ ಬರಬಹುದು. ಯಾವುದೇ ಕಾರಣಕ್ಕೂ ಯಾರೂ ಮೈಮರೆಯಬಾರದು ಎಂದು ಸೂಚನೆ ನೀಡುವ ಮೂಲಕ ಚುನಾವಣೆಗೆ ಈಗಿಂದಲೇ ಸಿದ್ಧರಾಗುವ ಸೂಚನೆ ನೀಡಿದ್ದಾರೆ.

ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಯಾವ ಕಾರಣಕ್ಕೂ ಮೈಸೂರು ಭಾಗದಲ್ಲಿ ಜೆಡಿಎಸ್​ ಪಕ್ಷವನ್ನು ಕಡೆಗಣಿಸಬೇಡಿ. ಅವರ ಕುರಿತು ಬಹಳ ಎಚ್ಚರಿಕೆಯಿಂದ ಇರಿ ಎಂದು ಕಾಂಗ್ರೆಸ್​ನ ಶಾಸಕರು ಹಾಗೂ ಮಾಜಿ ಶಾಸಕರಿಗೆ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಮೈಸೂರು ಭಾಗದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಸಿದ್ದರಾಮಯ್ಯ ಸಿದ್ದತೆ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ.

ಸೋಲಿಗೆ ಸ್ಥಳೀಯ ಸ್ವಪಕ್ಷೀಯರು ಕಾರಣ.. ರಾಜ್ಯ ನಾಯಕರಲ್ಲ ನನ್ನ ಸೋಲಿಗೆ ಕಾಂಗ್ರೆಸ್ ಪಕ್ಷದವರೇ ಕಾರಣ ಎಂದು ನಿನ್ನೆ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಇಂದು ಆ ಕುರಿತು ಸ್ಪಷ್ಟನೆ ನೀಡಿದ್ದಾರೆ.ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಅಲ್ಲಿನ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿದ್ದೇನೆಯೇ ಹೊರತು ರಾಜ್ಯ ಮಟ್ಟದ ನಾಯಕರೆಂದು ಹೇಳಿಲ್ಲ. ಹೇಳಿಕೆಗೆ ವಿಪರೀತಾರ್ಥ ಕಲ್ಪಿಸುವುದು ಬೇಡ ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

‘ನಮ್ಮವರೇ ಕೆಲವರಿಗೆ ನಾನು ಮತ್ತೆ CM ಆಗೋದು ಬೇಕಿರಲಿಲ್ಲ..ಸಹಿಸದೇ ನನ್ನನ್ನ ಸೋಲುವಂತೆ ಮಾಡಿದ್ರು’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada