ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಗೋವಿನ ಸಗಣಿಯಿಂದ ತಯಾರಾದ ‘ವೇದಿಕ್ ಪೈಂಟ್’

ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೂಲಕ ಗೋವಿನ ಸಗಣಿಯಿಂದ ತಯಾರಿಸಿದ ಹೊಸ ಬಣ್ಣ (Paint) ಒಂದನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಚಯಿಸಿದ್ದಾರೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಗೋವಿನ ಸಗಣಿಯಿಂದ ತಯಾರಾದ ‘ವೇದಿಕ್ ಪೈಂಟ್’
ವೇದಿಕ್ ಪೈಂಟ್
Follow us
TV9 Web
| Updated By: ganapathi bhat

Updated on:Apr 06, 2022 | 11:33 PM

ನವದೆಹಲಿ: ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೂಲಕ ಗೋವಿನ ಸಗಣಿಯಿಂದ ತಯಾರಿಸಿದ ಹೊಸ ಬಣ್ಣ (Paint) ಒಂದನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ನಿತಿನ್ ಗಡ್ಕರಿ ಪರಿಚಯಿಸಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗುವ ಆಶಯವನ್ನು ಗಡ್ಕರಿ ವ್ಯಕ್ತಪಡಿಸಿದ್ದಾರೆ.

ಗೋವಿನ ಸಗಣಿಯಿಂದ ತಯಾರಾದ ಬಣ್ಣಕ್ಕೆ Vedic Paint ಎಂದು ಹೆಸರಿಡಲಾಗಿದೆ. ಹೊಸ ಬಣ್ಣವು ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲಿದೆ. ‘ವೇದಿಕ್ ಪೈಂಟ್’ ಡಿಸ್ಟಂಪರ್ ಹಾಗೂ ಎಮಲ್ಶನ್ ರೂಪದಲ್ಲಿ ಬರಲಿದೆ. ಪರಿಸರ ಸ್ನೇಹಿಯಾಗಿರುವ ಈ ಬಣ್ಣವು ವಿಷ, ಬ್ಯಾಕ್ಟೀರಿಯಾ, ಫಂಗಸ್ ರಹಿತವಾಗಿದೆ. ಗೋಡೆಗೆ ಬಳಿದ ನಾಲ್ಕು ತಾಸುಗಳಲ್ಲಿ ಒಣಗುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ದೇಶದ ರೈತರಿಗೆ 55 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಬರುವ ನಿರೀಕ್ಷೆ ಇದೆ.

TV9 Facebook Live | ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭವಾಗುವುದೇ?

Published On - 5:19 pm, Sat, 19 December 20