ಯುವತಿಯರಿಂದ ಜೇಬಿಗೆ ದುಡ್ಡು ಹಾಕಿಸಿಕೊಂಡ ಕಾನ್​ಸ್ಟೆಬಲ್.. ಲಂಚದ ವಿಡಿಯೋ ವೈರಲ್ ಆಯ್ತು, ಸಿಬ್ಬಂದಿ ಸಸ್ಪೆಂಡ್ ಆಯ್ತೂ!

No Google Pay, No Phone pe, No UPI, only Direct Pocket Pay ಅನ್ನೋ ಶೀರ್ಷಿಕೆಯಲ್ಲಿ ಹರಿಬಿಟ್ಟಿದ್ದ ವೀಡಿಯೋದಲ್ಲಿ ಮಹಿಳಾ ಸಿಬ್ಬಂದಿ ಹುಡುಗಿಯರಿಂದ ಲಂಚ ಪಡೆದು ಅವರಿಂದಲೇ ಅದನ್ನು ಜೇಬಿಗೆ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಸೆರೆಯಾಗಿತ್ತು.

ಯುವತಿಯರಿಂದ ಜೇಬಿಗೆ ದುಡ್ಡು ಹಾಕಿಸಿಕೊಂಡ ಕಾನ್​ಸ್ಟೆಬಲ್.. ಲಂಚದ ವಿಡಿಯೋ ವೈರಲ್ ಆಯ್ತು, ಸಿಬ್ಬಂದಿ ಸಸ್ಪೆಂಡ್ ಆಯ್ತೂ!
ಜೇಬಿಗೆ ಲಂಚ ಇಳಿಸಿದ ದೃಶ್ಯ
Skanda

| Edited By: sadhu srinath

Dec 19, 2020 | 4:12 PM

ಮುಂಬೈ: ಮೊದಲೆಲ್ಲಾ ಟ್ರಾಫಿಕ್​ ಪೊಲೀಸರಿಗೆ ಅಲ್ಪಸ್ವಲ್ಪ ಹೆದರುತ್ತಿದ್ದ ಜನ ಈಗೀಗ ತಿರುಗಿಬೀಳೊಕೆ ಶುರುಮಾಡಿದ್ದಾರೆ. ಕೈಗೆ ಮೊಬೈಲ್​ ಬಂದಮೇಲಂತೂ ಜನರೇ ಟ್ರಾಫಿಕ್​ ಪೊಲೀಸರ ಮೇಲೇ ಕಣ್ಣಿಟ್ಟಿದ್ದಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮೊನ್ನೆಯಷ್ಟೇ ಟ್ವಿಟರ್​ನಲ್ಲಿ ಒಂದು ವೀಡಿಯೋ ಬಹಳ ಸದ್ದು ಮಾಡಿತ್ತು. ಮಹಿಳಾ ಪೊಲೀಸ್ ಒಬ್ಬಾಕೆ ಇಬ್ಬರು ಹುಡುಗಿಯರಿಂದ ಲಂಚ ಪಡೆಯುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿತ್ತು.

No Google Pay, No Phone pe, No UPI, Direct Pocket Pay ಅನ್ನೋ ಶೀರ್ಷಿಕೆಯಲ್ಲಿ ಹರಿಯಬಿಟ್ಟಿದ್ದ ವೀಡಿಯೋದಲ್ಲಿ ಮಹಿಳಾ ಸಿಬ್ಬಂದಿ ಹುಡುಗಿಯರಿಂದ ದಂಡ ಪಡೆಯುವ ಬದಲು ಲಂಚ ಪಡೆದು ಅವರಿಂದಲೇ ಅದನ್ನು ಜೇಬಿಗೆ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ವೈರಲ್​ ಆಗಿತ್ತು.

ದೃಶ್ಯ ಪುಣೆಯ ಪಿಂಪ್ರಿ ಪ್ರದೇಶದ ಸಾಯಿ ಚೌಕ್​ ಏರಿಯಾದ್ದು ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಹಾಕ್ರಪ್ಪಾ ಅಂತಾ ನಿಲ್ಸಿದ್ರೆ, ಇವ್ರು ಜೇಬು ತುಂಬಿಸಿಕೊಳ್ಳೋ ಕೆಲಸದಲ್ಲಿ ಬ್ಯುಸಿ ಆಗಿದ್ರು. ಆದ್ರೆ ಯಾವಾಗ ವಿಡಿಯೋ ವೈರಲ್​ ಆಯ್ತೋ ತಕ್ಷಣವೇ ಎಚ್ಚೆತ್ತ ಇಲಾಖೆ ಆಂತರಿಕ ತನಿಖೆ ನಡೆಸಿ ವಿಡಿಯೋದಲ್ಲಿದ್ದ ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಿದೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯ ಪುಣೆಯ ಪಿಂಪ್ರಿ ಪ್ರದೇಶದ ಸಾಯಿ ಚೌಕ್​ ಏರಿಯಾದ್ದು ಎಂದು ತಿಳಿದು ಬಂದಿದೆ. ಲಂಚ ನೀಡಿದ್ದ ಯುವತಿಯರು ಹೆಲ್ಮೆಟ್ ಧರಿಸದೇ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೂ ಯಾವ ಕಾರಣಕ್ಕೆ ಅವರಿಂದ ಲಂಚ ಸ್ವೀಕರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.

ರಸ್ತೆಯಲ್ಲಿ ಕಸದ ವಾಹನ ನಿಲ್ಲಿಸಿದ.. ಪೌರಕಾರ್ಮಿಕರ ಮೇಲೆ ಟ್ರಾಫಿಕ್​ ಪೊಲೀಸರಿಂದ ಹಲ್ಲೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada