Budget 2021 ಭಾರತ ಹಿಂದೆಂದೂ ಕಂಡರಿಯದ ಬಜೆಟ್ ನಿಮ್ಮ ಮುಂದಿರಲಿದೆ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೂಗ್ಲಿ!
ಈ ಬಗ್ಗೆ ಸಿಐಐ ಪಾಲುದಾರಿಕೆ ಶೃಂಗಸಭೆ 2020ರಲ್ಲಿ ಮಾತನಾಡಿದ ನಿರ್ಮಲಾ, ಈ ಬಾರಿಯ ಬಜೆಟ್ ತುಂಬಾನೇ ವಿಶೇಷವಾಗಿರಲಿದೆ. ಈ ರೀತಿಯ ಮುಂಗಡಪತ್ರವನ್ನು ಭಾರತ ಹಿಂದೇಂದೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಭಾರತದ ಆರ್ಥಿಕತೆ ಮೈನಸ್ 23ಕ್ಕೆ ಕುಸಿತ ಕಂಡಿತ್ತು. ಈಗ ನಿಧಾನವಾಗಿ ಆರ್ಥಿಕತೆ ಚೇತರಿಕೆ ಕಾಣಲು ಆರಂಭಿಸಿದೆ. ಈ ಮಧ್ಯೆ, ಮುಂದಿನ ಫೆಬ್ರವರಿಯಲ್ಲಿ ಘೋಷಣೆ ಆಗಲಿರುವ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಮೂಡಿದೆ. ಹೀಗಿರುವಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್ ವಿಶೇಷವಾಗಿರಲಿದೆ ಎನ್ನುವ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸಿಐಐ ಪಾಲುದಾರಿಕೆ ಶೃಂಗಸಭೆ 2020ರಲ್ಲಿ ಮಾತನಾಡಿದ ನಿರ್ಮಲಾ, ಈ ಬಾರಿಯ ಬಜೆಟ್ ತುಂಬಾನೇ ವಿಶೇಷವಾಗಿರಲಿದೆ. ಈ ರೀತಿಯ ಮುಂಗಡಪತ್ರವನ್ನು ಭಾರತ ಹಿಂದೇಂದೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಈ ಬಾರಿಯ ಬಜೆಟ್ನಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಸಾಕಷ್ಟು ಅಂಶಗಳು ಇರಲಿವೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ನಿಮ್ಮ ಸೂಚನೆಗಳನ್ನು ನನಗೆ ಕಳುಹಿಸಿ. ಇದರಿಂದ ಬಜೆಟ್ ಸಿದ್ಧಪಡಿಸಲು ನಮಗೆ ತುಂಬಾನೇ ಸಹಕಾರಿಯಾಗಲಿದೆ. 100 ವರ್ಷಗಳ ಭಾರತದ ಇತಿಹಾಸದಲ್ಲಿ ಈ ರೀತಿಯ ಬಜೆಟ್ಅನ್ನು ಯಾರು ನೋಡಿರಬಾರದು. ಆ ರೀತಿಯ ಮುಂಗಡ ಪತ್ರವನ್ನು ಸಿಧ್ಧಗೊಳಿಸಲಿದ್ದೇವೆ. ಆದರೆ, ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅತ್ಯಗತ್ಯ ಎಂದಿದ್ದಾರೆ.
2021-22ನೇ ಸಾಲಿನ ಬಜೆಟ್ ಫೆಬ್ರವರಿ 1ರಂದು ಮಂಡನೆ ಆಗಲಿದೆ. ಬಜೆಟ್ ಅಧಿವೇಶನ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಬಹುತೇಕ ಕ್ಷೇತ್ರಗಳು ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿವೆ. ಬಜೆಟ್ನಲ್ಲಿ ಈ ಕ್ಷೇತ್ರಗಳಿಗೆ ಚೈತನ್ಯ ನೀಡುವ ಕೆಲಸ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಪ್ತ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ನಿಯೋಜನೆ
Published On - 5:09 pm, Sat, 19 December 20