ಶಂಕರ್ ಮಹಾದೇವನ್, ರಾಘವೇಂದ್ರ ರಾಥೋಡ್​​ಗೆ 21ನೇ ಶತಮಾನದ ಐಕಾನ್ ಅವಾರ್ಡ್

ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಮತ್ತು ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್ ಅವರು 21 ನೇ ಶತಮಾನದ ಐಕಾನ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಂಕರ್ ಮಹಾದೇವನ್, ರಾಘವೇಂದ್ರ ರಾಥೋಡ್​​ಗೆ 21ನೇ ಶತಮಾನದ ಐಕಾನ್ ಅವಾರ್ಡ್
ಶಂಕರ್ ಮಹಾದೇವನ್
guruganesh bhat

| Edited By: bhaskar hegde

Dec 19, 2020 | 6:45 PM

ಲಂಡನ್ (ಪಿಟಿಐ): ಬಾಲಿವುಡ್ ಗಾಯಕ ಶಂಕರ್ ಮಹಾದೇವನ್ ಮತ್ತು ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್ ಅವರು 21 ನೇ ಶತಮಾನದ ಐಕಾನ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ ಒಟ್ಟು ಹದಿನೈದು ಜನರಿಗೆ ಈ ಪ್ರಶಸ್ತಿ ಲಭಿಸಿದೆ.  ‘ಕೊರೋನಾ ಸಮಯದಲ್ಲಿ ಈ ಪ್ರಶಸ್ತಿ ಸಂದಿರುವುದು ನನಗೆ ಬಹಳೇ ವಿಶೇಷ. ಈ ಮೂಲಕ ನಮ್ಮ ಸ್ಫೂರ್ತಿಯನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಇದು ಕಾರಣವಾಗಿದೆ ಎಂದೇ ಭಾವಿಸುತ್ತೇನೆ.’ ಎಂದು ಶಂಕರ್ ಮಹಾದೇವನ್ ಹೇಳಿದ್ದಾರೆ.

ರಾಘವೇಂದ್ರ ರಾಥೋಡ್

ಫ್ಯಾಷನ್ ಡಿಸೈನರ್ ರಾಘವೇಂದ್ರ ರಾಥೋಡ್, ‘ಕಲೆ ಮತ್ತು ಫ್ಯಾಷನ್ ಉದ್ಯಮಕ್ಕೆ ಈ ಪ್ರಶಸ್ತಿಯಿಂದ ಮಾನ್ಯತೆ ಒದಗಿದಂತಾಗಿದೆ. ಇದರಿಂದ ನನ್ನಲ್ಲಿ ಚೈತನ್ಯ ಹೆಚ್ಚಿದೆ.’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡಾಬರ್ ಇಂಡಿಯಾ ಲಿಮಿಟೆಡ್‌ನ ಉಪಾಧ್ಯಕ್ಷ ಮೋಹಿತ್ ಬರ್ಮನ್‌ ಅವರಿಗೆ ಡೆಡಿಕೇಟೆಡ್ ಸ್ಟಾಲ್ವರ್ಟ್ ಪ್ರಶಸ್ತಿ ಮತ್ತು ಜಮೈಕಾದ ಕ್ರಿಕೆಟಿಗ ಕ್ರಿಸ್ ಗೇಲ್ ಮತ್ತು ಅರ್ಜೆಂಟೀನಾದ ಪೋಲೊ ಆಟಗಾರ ಅಡಾಲ್ಫೊ ಕ್ಯಾಂಬಿಯಾಸೊ ಅವರಿಗೆ ಸ್ಪರ್ಧಾತ್ಮಕ ಕ್ರೀಡಾ ಪ್ರಶಸ್ತಿಗಳು ಸಂದಿವೆ.  ‘ನನ್ನ ವೃತ್ತಿಪಯಣದ ಯಶಸ್ಸಿಗೆ ತಿರುವು ಕೊಟ್ಟ ಈ ಪ್ರಶಸ್ತಿಯಿಂದ ರೋಮಾಂಚಿತಗೊಂಡಿದ್ದೇನೆ.’ ಎಂದು ಸ್ಕ್ವೇರ್ಡ್ ವಾಟರ್​ಮಿಲನ್ ಲಿಮಿಟೆಡ್ ಸ್ಥಾಪಕ ತರುಣ್ ಘುಲಾಟಿ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada