ಗಾಂಧಿ ಕುಟುಂಬದ ನಾಯಕತ್ವ ವಿರೋಧಿಸಿದವರೇ ಈಗ ರಾಹುಲ್​ ಬೆಂಬಲಿಸಿದರು

ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ 23 ಅಸಮಾಧಾನಿತರು ಹಾಗೂ ಕೆಲ ಮುಖ್ಯ ನಾಯಕರು ಸಭೆ ನಡೆಸಿದ್ದರು.  7 ಗಂಟೆಗಳ ಕಾಲ ಸಭೆ ನಡೆದಿದ್ದು, ಸಭೆಯಲ್ಲಿ ರಾಹುಲ್​ ಗಾಂಧಿ ನಾಯಕತ್ವವನ್ನು ಯಾರೂ ವಿರೋಧಿಸಿಲ್ಲ ಎನ್ನಲಾಗಿದೆ.

ಗಾಂಧಿ ಕುಟುಂಬದ ನಾಯಕತ್ವ ವಿರೋಧಿಸಿದವರೇ ಈಗ ರಾಹುಲ್​ ಬೆಂಬಲಿಸಿದರು
ರಾಹುಲ್ ಗಾಂಧಿ
Rajesh Duggumane

|

Dec 19, 2020 | 5:54 PM

ನವದೆಹಲಿ: ಅಧ್ಯಕ್ಷ ಹುದ್ದೆ  ಬದಲಾಗಬೇಕೆಂದು 23 ರೆಬೆಲ್​ ನಾಯಕರು ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಇಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ರಾಹುಲ್​ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಲು G23 ನಾಯಕರು ವಿರೋಧ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬದ ಕೈಯಲ್ಲಿರುವುದಕ್ಕೆ ಕೈ ಪಕ್ಷದ ಪ್ರಮುಖ ನಾಯಕರು ಆಕ್ರೋಶ ಹೊರ ಹಾಕಿದ್ದರು. ಅಷ್ಟೇ ಅಲ್ಲ, ಕೂಡಲೇ ನಾಯಕತ್ವ ಬದಲಾವಣೆ ಆಗಬೇಕು, ಗಾಂಧಿ ಕುಟುಂಬದ ಹೊರತಾದ ನಾಯಕರು ಪಕ್ಷದ ನೇತೃತ್ವ ವಹಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ಈಗ ಅಚ್ಚರಿ ಎನ್ನುವಂತೆ ರೆಬೆಲ್​ ನಾಯಕರು ರಾಹುಲ್​ ಅವರನ್ನು ಅಧ್ಯಕ್ಷ ಪಟ್ಟಕ್ಕೆ ತರಲು ಸಮ್ಮತಿ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ 23 ಅಸಮಾಧಾನಿತರು ಹಾಗೂ ಕೆಲ ಮುಖ್ಯ ನಾಯಕರು ಸಭೆ ನಡೆಸಿದ್ದರು.  7 ಗಂಟೆಗಳ ಕಾಲ ನಡೆದ ಸಭೆ ನಂತರ ಮಾತನಾಡಿದ ಕಾಂಗ್ರೆಸ್​ ಹಿರಿಯ ನಾಯಕ ಪವನ್​ ಬನ್ಸಾಲ್​, ಸಭೆ ಉತ್ತಮವಾಗಿ ನಡೆದಿದೆ. ಯಾರೊಬ್ಬರೂ ರಾಹುಲ್​ ಗಾಂಧಿಯನ್ನು ಟೀಕೆ ಮಾಡಿಲ್ಲ. ಬದಲಿಗೆ ಅವರನ್ನು ಬೆಂಬಲಿಸಿದರು ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್​ ಅಧ್ಯಕರಾಗಲು ಯಾವುದೇ ತೊಂದರೆ ಇಲ್ಲ ಎಂದು ರೆಬೆಲ್​ ನಾಯಕರು ಸಮ್ಮತಿಸಿರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.

ಅಧ್ಯಕ್ಷರಾಗಲು ರಾಹುಲ್​ ಗ್ರೀನ್​ ಸಿಗ್ನಲ್​? ರಾಹುಲ್​ ಗಾಂಧಿ ಕೂಡ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲರೂ ಆಸೆ ಪಟ್ಟರೆ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ರಾಹುಲ್​ ಪಕ್ಷದ ಸಭೆಯಲ್ಲಿ ಹೇಳಿದ್ದಾರಂತೆ. ಈ ಮೂಲಕ ಅಧ್ಯಕ್ಷ ಸ್ಥಾನಕ್ಕೇರಲು ಸಮ್ಮತಿಸಿದ್ದಾರೆ.

ರಾಹುಲ್​ ಅಧ್ಯಕ್ಷ ಸ್ಥಾನ ತ್ಯಜಿಸಿದ್ದೇಕೆ? 2019 ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ನಿರೀಕ್ಷೆಯೊಂದಿಗೆ ಕಾಂಗ್ರೆಸ್​ ಸ್ಪರ್ಧೆ ಮಾಡಿತ್ತು. ಈ ವೇಳೆ ಕಾಂಗ್ರೆಸ್​ ನೇತೃತ್ವವನ್ನು ರಾಹುಲ್​ ಗಾಂಧಿಯೇ ವಹಿಸಿಕೊಂಡಿದ್ದರು. ಆದರೆ, ಮೋದಿ ಅಲೆ ಎಲ್ಲವನ್ನೂ ತಲೆಕೆಳಗೆ ಮಾಡಿತ್ತು. ಕಾಂಗ್ರೆಸ್​ ಹೀನಾಯವಾಗಿ ಸೋತಿತ್ತು. ರಾಹುಲ್​ ಗಾಂಧಿ ಹಿಡಿತದಲ್ಲಿದ್ದ ಅಮೇಥಿಯಲ್ಲೇ ಅವರೇ ಸೋತಿದ್ದರು. ಈ ಸೋಲಿನ ನಂತರ ರಾಹುಲ್​ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ ಕಾಂಗ್ರೆಸ್​​ನ ಹಂಗಾಮಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು.

ಕಾಂಗ್ರೆಸ್ ಅಧ್ಯಕ್ಷ ಗಾದಿ ಏರಲಿದ್ದಾರಾ ರಾಹುಲ್ ಗಾಂಧಿ? ಸುಳಿವು ನೀಡಿದ ರಣ​ದೀಪ್​ ಸುರ್ಜೇವಾಲಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada