ತಮಿಳುನಾಡು ಜನತೆಗೆ ಪೊಂಗಲ್ ಉಡುಗೊರೆ ನೀಡಿದ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ
ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ರಾಜ್ಯದ ಜನತೆಗೆ ಪೊಂಗಲ್ ಹಬ್ಬದ ಉಡುಗೊರೆ ನೀಡಿದ್ದಾರೆ. ಪಡಿತರ ಕಾರ್ಡ್ ಹೊಂದಿರುವ 2.06 ಕೋಟಿಗೂ ಹೆಚ್ಚು ಕುಟುಂಬಗಳು ಈ ಉಡುಗೊರೆ ಪಡೆದಿವೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ರಾಜ್ಯದ ಜನತೆಗೆ ಪೊಂಗಲ್ ಹಬ್ಬದ ಉಡುಗೊರೆಯನ್ನು ಒಂದು ತಿಂಗಳು ಮೊದಲೇ ನೀಡಿದ್ದಾರೆ. ಪಡಿತರ ಕಾರ್ಡ್ ಹೊಂದಿರುವ 2.06 ಕೋಟಿಗೂ ಹೆಚ್ಚು ಜನರಿಗೆ 2500 ರೂ, ಅಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಕಬ್ಬು ಮತ್ತು ಹೊಸ ಬಟ್ಟೆಗಳ ಉಡುಗೊರೆ ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ತಮ್ಮ ಕ್ಷೇತ್ರವಾದ ಸೇಲಮ್ ಜಿಲ್ಲೆಯ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರ ಹೊಂದಿರುವ ಪಕ್ಷಗಳು ಪೊಂಗಲ್ ಹಬ್ಬಕ್ಕೆ ಉಡುಗೊರೆ ನೀಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಇಂದಿನ ಕೊಡುಗೆ ನೀಡುವ ಮೂಲಕ ಕೆ. ಪಳನಿಸ್ವಾಮಿ ಇದನ್ನು ಮುಂದುವರಿಸಿದಂತಾಗಿದೆ.
2021ರ ಮೇನಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಸ್ಟಾರ್ ನಟರಾದ ಕಮಲ್ ಹಾಸನ್ ಹಾಗೂ ರಜನಿಕಾಂತ್ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ಪಳನಿಸ್ವಾಮಿಗೆ ಕೊಂಚ ಆತಂಕ ಸೃಷ್ಟಿಸಿದೆ ಎನ್ನುವ ಮಾತು ತಮಿಳುನಾಡು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದೆ. ಈ ಕಾರಣಕ್ಕೆ ಅವರು ಮತದಾರರನ್ನು ಒಲಿಸಲು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದಾರೆ.
Pongal gift hampers containing Rs 2,500, rice, sugar, dry grapes, cashew, cardamom, sugarcane and a cloth bag will be given to 2.06 crores rice-drawing ration cardholders: Tamil Nadu Chief Minister Edappadi Palanisamy in Salem
(file photo) pic.twitter.com/TUb22IFcc8
— ANI (@ANI) December 19, 2020