ಕೊವಿಡ್ ವಾರ್ ರೂಂ ಸಕ್ರಿಯಗೊಳಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆ

ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿರುವ ರಾಜೇಶ್ ಭೂಷಣ್, ಟೆಸ್ಟಿಂಗ್ ಹಾಗೂ ಬೆಡ್ ವ್ಯವಸ್ಥೆ ಹೆಚ್ಚಿಸಲು ತಿಳಿಸಿದ್ದಾರೆ. ಟೆಸ್ಟಿಂಗ್​ನಲ್ಲಿ ಕಳೆದ ವಾರಕ್ಕಿಂತ ಶೇ.10 ರಷ್ಟು ಹೆಚ್ಚಿಸಲು ಸೂಚಿಸಿದ್ದಾರೆ.

ಕೊವಿಡ್ ವಾರ್ ರೂಂ ಸಕ್ರಿಯಗೊಳಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆ
ಸಾಂದರ್ಭಿಕ ಚಿತ್ರ
Updated By: sandhya thejappa

Updated on: Dec 22, 2021 | 8:43 AM

ಬೆಂಗಳೂರು: ದೇಶದಲ್ಲಿ ಕೊರೊನಾ (Corona) ಮೂರನೇ ಅಲೆ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ದೇಶದಲ್ಲಿ ಈಗಾಗಲೇ ಪತ್ತೆಯಾಗಿದೆ. ಒಮಿಕ್ರಾನ್ ಐದು ಪಟ್ಟು ವೇಗವಾಗಿ ಹರಡುತ್ತದೆ ಅಂತ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮ ಅನಿವಾರ್ಯವಾಗಿದ್ದು, ಕೊರೊನಾ ವಾರ್ ರೂಂಗಳನ್ನ ಸಕ್ರಿಯಗೊಳಿಸಿ ಅಂತ ರಾಷ್ಟ್ರೀಯ ಆರೋಗ್ಯಾಧಿಕಾರಿ ರಾಜೇಶ್ ಭೂಷಣ್ (Rajesh Bhushan) ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಜಿಲ್ಲಾ ಹಾಗೂ ಸ್ಥಳೀಯ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿರುವ ರಾಜೇಶ್ ಭೂಷಣ್, ಟೆಸ್ಟಿಂಗ್ ಹಾಗೂ ಬೆಡ್ ವ್ಯವಸ್ಥೆ ಹೆಚ್ಚಿಸಲು ತಿಳಿಸಿದ್ದಾರೆ. ಟೆಸ್ಟಿಂಗ್​ನಲ್ಲಿ ಕಳೆದ ವಾರಕ್ಕಿಂತ ಶೇ.10 ರಷ್ಟು ಹೆಚ್ಚಿಸಲು ಸೂಚಿಸಿದ್ದಾರೆ. ಶೇ.40 ಆಕ್ಸಿಜನ್ ಸಪೋರ್ಟ್ ಹಾಗೂ ಐಸಿಯು ಬೆಡ್​ಗಳನ್ನ ಹೆಚ್ಚಿಸಿ. ಈ ಹಿಂದೆ ಆರೋಗ್ಯ ಇಲಾಖೆ ನೀಡಿದ್ದ ಮಾರ್ಗದರ್ಶನ ಹಾಗೂ ತಂತ್ರ ಪಾಲಿಸಿ. ಪ್ರತಿ ಜಿಲ್ಲೆಯ ಪ್ರತಿ ದಿನದ ಕೊವಿಡ್ ಡೇಟಾ ಸಮೀಕ್ಷೆ ನಡೆಯಲಿ. ಕಂಟೇನ್ಮೆಂಟ್ ಜೋನ್​ಗಳನ್ನ ಗುರುತಿಸಿ ಸದಾ ನಿಗಾವಹಿಸಿ. ಟೆಸ್ಟ್, ಟ್ರ್ಯಾಕ್, ಟ್ರೀಟ್, ವ್ಯಾಕ್ಸಿನೇಷನ್ ಹಾಗೂ ಕೊರೊನಾ ನಿಯಮಗಳನ್ನ ಪಾಲಿಸಿ ಅಂತ ತಿಳಿಸಿದ್ದಾರೆ.

ಇನ್ನು ಅವಶ್ಯಕತೆ ಇದ್ದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ. ಕೊವಿಡ್ ಕ್ಲಸ್ಟರ್​ಗಳನ್ನ ಗುರುತಿಸಿ, ಬಫರ್ ಜೋನ್ ಹಾಗೂ ಕಂಟೇನ್ಮೆಂಟ್ ಜೋನ್ ಎಂದು ಅಧಿಸೂಚಿಸಬೇಕು. ಕ್ಲಸ್ಟರ್ ಕೇಸ್​ಗಳನ್ನ ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ಒಳಪಡಿಸಬೇಕು ಅಂತ ರಾಜೇಶ್ ಭೂಷಣ್ ಹೇಳಿದ್ದಾರೆ. ಸದ್ಯಕ್ಕಿರುವ ವೈಜ್ಞಾನಿಕ ಪುರಾವೆಯ ಪ್ರಕಾರ ಓಮಿಕ್ರಾನ್, ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಹರಡುತ್ತಿದೆ. ಈಗಲೂ ದೇಶದ ಹಲವೆಡೆ ಡೆಲ್ಟಾ ವೈರಸ್ ಸಕ್ರಿಯವಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಸ್ಥಳೀಯ ಮಟ್ಟದಿಂದ ಕಾರ್ಯಪ್ರವೃತ್ತರಾದರೆ ಖಂಡಿತವಾಗಿ ಹೊಸ ತಳಿಯನ್ನು ತಡೆಗಟ್ಟಬಹುದು ಅಂತ ರಾಜೇಶ್ ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ಜಾರ್ಖಂಡ್​​ನಲ್ಲಿ ಗುಂಪು ಹತ್ಯೆ ತಡೆ ಮಸೂದೆ ಅಂಗೀಕಾರ; ಅಲ್ಪಸಂಖ್ಯಾತರ ಓಲೈಕೆಗೆ ಅವಸರದಿಂದ ತಂದ ಕಾನೂನು ಎಂದ ಬಿಜೆಪಿ

Dowry Harassment: ಹಾಸನದಲ್ಲಿ ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು

Published On - 8:42 am, Wed, 22 December 21