ಕೌಟುಂಬಿಕ ಕಲಹಕ್ಕೆ ಮದ್ದುಗುಂಡು ಕಾರಣ? ಅಪನಂಬಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆ
ಡಿ.17ರಂದು ಹೋಟೆಲ್ ಸಿಬ್ಬಂದಿಗೆ ಒಂದು ಮದ್ದು ಗುಂಡು ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಮತ್ತೊಂದು ಮದ್ದು ಗುಂಡು ಪತ್ತೆಯಾಗಿದೆ.
ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಮದ್ದುಗುಂಡು ಕಾರಣವೆಂದು ಮಹಿಳೆ ಅಪನಂಬಿಕೆಯಿಂದ ಮದ್ದು ಗುಂಡುಗಳನ್ನು ಗುಂಡಿ ತೋಡಿ ಹೂತಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆ ಮದ್ದುಗುಂಡು ಹೂತಿಟ್ಟಿದ್ದು ಘಟನೆ ಬೆಳಕಿಗೆ ಬಂದಿದೆ.
ಡಿ.17ರಂದು ಹೋಟೆಲ್ ಸಿಬ್ಬಂದಿಗೆ ಒಂದು ಮದ್ದು ಗುಂಡು ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಮತ್ತೊಂದು ಮದ್ದು ಗುಂಡು ಪತ್ತೆಯಾಗಿದೆ. ಬಳಿಕ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದು ಮಹಿಳೆಯೊಬ್ಬರು ಗುಂಡು ಹೂತಿಟ್ಟಿರುವುದು ಪತ್ತೆಯಾಗಿದೆ. ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚಿದ್ದಾರೆ. ಮಹಿಳೆ ಯಲಹಂಕದಲ್ಲಿ ವಾಸವಿದ್ದ ಮನೆ ಖಾಲಿ ಮಾಡಿರುವುದು ಪತ್ತೆಯಾಗಿದೆ. ಮೊಬೈಲ್ ನೆಟ್ ವರ್ಕ್ ಮೂಲಕ ಶೋಧಿಸಿದಾಗ ಕೊಡಿಗೆಹಳ್ಳಿಯಲ್ಲಿರುವುದು ಪತ್ತೆಯಾಗಿ ಮಹಿಳೆಯನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಭಾರತೀಯ ವಾಯುಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿಯಾಗಿದ್ದ ಆರೋಪಿ ಮಹಿಳೆ ತನ್ನ ಪತಿಯ ಬಳಿ ಲೈಸೆನ್ಸ್ ಗನ್ ಇತ್ತು, ಅದನ್ನು ಕಳೆದ ವರ್ಷ ಕಾನೂನಾತ್ಮಕವಾಗಿ ಮಾರಿದ್ದರು. ಆದರೆ 15 ಗುಂಡುಗಳನ್ನು ಮಾರಾಟ ಮಾಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು. ಅದರಿಂದ ನನ್ನ ಪುತ್ರನ ಸಾಂಸಾರಿಕ ಜೀವನ ಹಾಳಾಗಿತ್ತು. ಅಂದುಕೊಂಡ ಕೆಲಸಗಳು ಆಗುತ್ತಿಲ್ಲ. ಜೀವಂತ ಗುಂಡುಗಳು ಮನೆಯಿಂದ ಸಾಗಿಸಿದರೆ ಮಗನಿಗೆ ಒಳ್ಳೆಯದಾಗಲಿದೆ ಎಂದು ಮನೆಯಲ್ಲಿದ್ದ 15 ಗುಂಡುಗಳ ಪೈಕಿ ಎರಡು ಗುಂಡುಗಳನ್ನ ಹೂತಿಟ್ಟಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಪೊಲೀಸರು ಮಹಿಳೆಯ ಹೇಳಿಕೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶ ಬೆಂಗಳೂರಿನಲ್ಲಿ ಕೋಟಿ-ಕೋಟಿ ಮೌಲ್ಯದ ಮಾದಕ ವಸ್ತು ಹ್ಯಾಶಿಸ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸರು ಇಬ್ಬರು ಆಂಧ್ರ ಮೂಲದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕಾಶ್, ಧ್ಯಾಮ್ ರಾಜ್ ಬಂಧಿತ ಆರೋಪಿಗಳು.
ಬಂಧಿತರಿಂದ 6 ಕೋಟಿ ಮೌಲ್ಯ 5 ಲೀಟರ್ ಹ್ಯಾಶಿಸ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ಹೊಸ ವರ್ಷಕ್ಕೆ ಬೆಂಗಳೂರಿಗೆ ಮಾದಕ ವಸ್ತು ಮಾರಾಟಕ್ಕೆ ತಂದಿದ್ದ ಆರೋಪಿಗಳು ಬಿಟಿಎಂ ಲೇಔಟ್ ನ SLN ಲೇಕ್ ವ್ಯೂ ಅಪಾರ್ಟ್ಮೆಂಟ್ ಬಳಿ ಹ್ಯಾಶಿಸ್ ಆಯಿಲ್ ಶೇಖರಿಸಿಟ್ಟಿದ್ದರು. ಒರಿಸ್ಸಾದಿಂದ ಹ್ಯಾಶಿಸ್ ಆಯಿಲ್ ತಂದು ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ, ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ; ಹುದ್ದೆ, ವೇತನ ಮೊದಲಾದ ಮಾಹಿತಿ ಇಲ್ಲಿದೆ