ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ
BMRC Recruitment 2021: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRC) ಸೆಕ್ಷನ್ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಬಿಎಂಆರ್ಸಿಯ ಅಧಿಕೃತ ವೆಬ್ಸೈಟ್ ಆದ english.bmrc.co.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು 2022ರ ಜನವರಿ 17 ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 19 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಗುತ್ತಿಗೆ (ಕಾಂಟ್ರಾಕ್ಟ್) ಮಾದರಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಮೂರು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಅರ್ಹತೆ, ಆಯ್ಕೆ ಪ್ರಕ್ರಿಯೆ, ಅನುಭವ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಮುಖ್ಯ ಇಂಜಿನಿಯರ್: 1 ಹುದ್ದೆ
ಹೆಚ್ಚುವರಿ ಮುಖ್ಯ ಎಂಜಿನಿಯರ್ / ಉಪ ಮುಖ್ಯ ಎಂಜಿನಿಯರ್: 2 ಹುದ್ದೆಗಳು
ಡೆಪ್ಯುಟಿ ಜನರಲ್ ಮ್ಯಾನೇಜರ್ (Arch): 1 ಹುದ್ದೆ
ಎಕ್ಸಿಕ್ಯುಟಿವ್ ಇಂಜಿನಿಯರ್ ಡಿಸೈನ್ (Executive Engineer Design): 2 ಹುದ್ದೆಗಳು
ಮ್ಯಾನೇಜರ್ (Arch): 1 ಹುದ್ದೆ
ಡೆಪ್ಯುಟಿ ಮ್ಯಾನೇಜರ್ (Arch): 2 ಪೋಸ್ಟ್‌ಗಳು
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಡಿಸೈನ್: 2 ಹುದ್ದೆಗಳು
ಸಹಾಯಕ ಇಂಜಿನಿಯರ್ -ಡಿಸೈನ್: 3 ಹುದ್ದೆಗಳು
ಸೆಕ್ಷನ್ ಇಂಜಿನಿಯರ್: 5 ಹುದ್ದೆಗಳು
ಹುದ್ದೆಗಳಿಗೆ ಪ್ರತಿ ತಿಂಗಳ ವೇತನ ಇಂತಿದೆ:
ಮುಖ್ಯ ಇಂಜಿನಿಯರ್: 1,65,000/-
ಹೆಚ್ಚುವರಿ ಮುಖ್ಯ ಇಂಜಿನಿಯರ್ / ಉಪ ಮುಖ್ಯಸ್ಥ ಇಂಜಿನಿಯರ್: 1,40,000/-
ಉಪ ಜನರಲ್ ಮ್ಯಾನೇಜರ್ (ಆರ್ಚ್): 1,40,000/-
ಕಾರ್ಯನಿರ್ವಾಹಕ ಇಂಜಿನಿಯರ್ ವಿನ್ಯಾಸ: 85,000/-
ಮ್ಯಾನೇಜರ್ (ಆರ್ಚ್): 85,000/-
ಉಪ ವ್ಯವಸ್ಥಾಪಕರು (ಆರ್ಚ್): 65,000/-
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ವಿನ್ಯಾಸ: 65,000/-
ಸಹಾಯಕ ಎಂಜಿನಿಯರ್ – ವಿನ್ಯಾಸ: 50,000/-
ಸೆಕ್ಷನ್ ಇಂಜಿನಿಯರ್: 40,000/-
ಅಭ್ಯರ್ಥಿಗಳಿಗೆ ಅನುಭವ ಎಷ್ಟಿರಬೇಕು? ಆಯಾ ಹುದ್ದೆಗಳಿಗೆ ತಕ್ಕಂತೆ ಕಾರ್ಯಕ್ಷೇತ್ರದ ಅನುಭವವಿರಬೇಕು ಎಂದು ಸಂಸ್ಥೆ ತಿಳಿಸಿದೆ. ಗರಿಷ್ಠ ವಯೋಮಿತಿ, ಅನುಭವ ಮೊದಲಾದ ಸಂಪೂರ್ಣ ಮಾಹಿತಿ ಬಿಎಂಆರ್ಸಿ ಅಧಿಕೃತ ತಾಣದಲ್ಲಿ (english.bmrc.co.in) ಲಭ್ಯವಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿಯ ಕುರಿತ ಮಾಹಿತಿಗಾಗಿ english.bmrc.co.in ತಾಣದಲ್ಲಿ ಪರೀಕ್ಷಿಸಬಹುದು. ಅಥವಾ ಇಲ್ಲಿ ಕ್ಲಿಕ್ ಮಾಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಜನವರಿ 17ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ? ಕಾಂಪಿಟೆಂಟ್ ಅಥಾರಿಟಿಯಿಂದ ರಚಿತವಾದ ಸಮಿತಿಯಿಂದ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಹುದ್ದೆಗಳಿಗೆ ಅನುಭವ ಹೊಂದಿರುವವರನ್ನು ಪರಿಗಣಿಸಲಾಗುತ್ತದೆ ಮತ್ತು ಅಗತ್ಯಕ್ಕಿಂತ ಕಡಿಮೆ ಅನುಭವ ಹೊಂದಿರುವವರನ್ನು ಸಂದರ್ಶನ / ಆಯ್ಕೆಗೆ ಕರೆಯುವುದಿಲ್ಲ ಎಂದು ತಿಳಿಸಲಾಗಿದೆ. (ಹೆಚ್ಚಿನ ಮಾಹಿತಿಗೆ ಅಧಿಕೃತ ತಾಣಕ್ಕೆ ಭೇಟಿ ನೀಡಬಹುದು).
ಬಿಎಂಆರ್ಸಿ ಇನ್ನೂ ಹೆಚ್ಚಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದು, ಆಸಕ್ತರು ಅಧಿಕೃತ ತಾಣವನ್ನು ಪರಿಶೀಲಿಸಬಹುದು.
ಇದನ್ನೂ ಓದಿ:
Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ
ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ
Published On - 8:00 am, Wed, 22 December 21