Transgender Community : ‘ನನ್ನದಲ್ಲದ ತಪ್ಪಿಗೆ ನನ್ನ ಹುಟ್ಟು, ಲಿಂಗ, ಅಸ್ತಿತ್ವದ ಬಗ್ಗೆ ಅಸಭ್ಯವಾಗಿ ಮಾತನಾಡಿ ಇಡೀದಿನ ಹೊಡೆದರು’

Police Department : ‘ಇತಿಹಾಸವನ್ನು ಹಿಂದಿರುಗಿ ನೋಡಿದಾಗ ಈತನಕವೂ ನಮ್ಮ ಸಮುದಾಯಕ್ಕೆ ಪೊಲೀಸರಿಂದಲೇ ಹೆಚ್ಚು ತೊಂದರೆಯಾಗುತ್ತ ಬಂದಿರುವುದು. ಹೀಗಿರುವಾಗ, ಮುಂದಿನ ದಿನಗಳಲ್ಲಿ ಇಲಾಖೆಗೆ ಸೇರುವ ನಮ್ಮ ಸಮುದಾಯದವರನ್ನು ಸಮಾನತೆಯಿಂದ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ? ಆತಂಕ, ಪ್ರಶ್ನೆ ಕಾಡತೊಡಗಿದೆ.’ ಅಶ್ವಿನಿ ರಾಜನ್  

Transgender Community : ‘ನನ್ನದಲ್ಲದ ತಪ್ಪಿಗೆ ನನ್ನ ಹುಟ್ಟು, ಲಿಂಗ, ಅಸ್ತಿತ್ವದ ಬಗ್ಗೆ ಅಸಭ್ಯವಾಗಿ ಮಾತನಾಡಿ ಇಡೀದಿನ ಹೊಡೆದರು’
ಅಶ್ವಿನಿ ರಾಜನ್
Follow us
ಶ್ರೀದೇವಿ ಕಳಸದ
|

Updated on:Dec 22, 2021 | 4:51 PM

Transgender Community : ಸಮಾನ ಅವಕಾಶಗಳನ್ನು ಪಡೆದುಕೊಂಡು ತನ್ನನ್ನು ತಾ ಉನ್ನತೀಕರಣಗೊಳಿಸಿಕೊಂಡು ಬದುಕುವ ಹಕ್ಕು ಮತ್ತು ಪ್ರಯತ್ನ ಪ್ರತೀ ಮಾನವಜೀವಿಗಳಲ್ಲೂ ಇದ್ದೇ ಇರುತ್ತದೆ. ಇದಕ್ಕೆ ಸಮಾಜ ಮತ್ತು ಸರ್ಕಾರದ ಪ್ರತಿಸ್ಪಂದನೆ ಅತ್ಯವಶ್ಯ. ಅಂದಾಗ ಮಾತ್ರ ಅಲ್ಲಿ ಒಂದಿಷ್ಟು ಬೆಳಕು ಮೂಡುತ್ತದೆ. ನಿನ್ನೆಯಷ್ಟೇ ರಾಜ್ಯ ಪೊಲೀಸ್ ಇಲಾಖೆಯು ಲೈಂಗಿಕ ಅಲ್ಪಸಂಖ್ಯಾತರಿಗೆ ಇಲಾಖೆಯ ನೇಮಕಾತಿಯಲ್ಲಿ ಶೇ.1 ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಬೆಳಗಾವಿಯಲ್ಲಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ಲೈಂಗಿಕ ಅಲ್ಪಸಂಖ್ಯಾತರು ಅಪರಾಧವೆಸಗಿದಾಗೆಲ್ಲಾ ಇಲಾಖೆಯು ಶಿಕ್ಷಿಸುತ್ತ ಬಂದಿದೆ. ಆದರೆ ಈಗ ಅವರೂ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸಲು ಆಶಿಸಿದ್ದಾರೆ. ಹಾಗಾಗಿ ಅವರ ಮನವಿಯನ್ನು ಮಾನ್ಯ ಮಾಡುವುದು ನಮ್ಮ ಕರ್ತವ್ಯ. ಇನ್ನುಮುಂದೆ ಅರ್ಹತೆ ಇದ್ದ ಈ ಸಮುದಾಯದ ಯಾರೂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಈ ಹೆಜ್ಜೆ ಇಡೀ ದೇಶದಲ್ಲೇ ಮೊದಲು’ ಎಂದಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ನಿವಾಸಿ, ಟ್ರಾನ್ಸ್​ ಮಹಿಳೆ ಅಶ್ವಿನಿ ರಾಜನ್ (Trans Woman) ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.   

ಅವಕಾಶಗಳು ಕಣ್ಣೆದುರಿಗಿದ್ದಲ್ಲಿ ನಮ್ಮ ಸಮುದಾಯದವರು ಶೈಕ್ಷಣಿಕವಾಗಿ ತೊಡಗಿಕೊಳ್ಳಲು ಭರವಸೆ ಹೆಚ್ಚುತ್ತದೆ. ಈ ಮೂಲಕ ಸಮುದಾಯದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಈಗ ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ಕಲ್ಪಿಸಿರುವುದು ಸಂತಸದ ವಿಷಯ. ಆದರೆ ಈ ಸಂದರ್ಭದಲ್ಲಿ ಈತನಕವೂ ಮರೆಯಲಾಗದಂಥ ನನ್ನ ವೈಯಕ್ತಿಕ ಘಟನೆ ನನ್ನ ಮನಸ್ಸಿನಿಂದ ಸರಿಯುತ್ತಿಲ್ಲ. ಹಾಗಾಗಿ ಈ ವೇದಿಕೆಯ ಮೂಲಕ ಅದನ್ನು ವ್ಯಕ್ತಪಡಿಸಲು ಆಶಿಸುತ್ತೇನೆ.

ಎಂಟ್ಹತ್ತು ವರ್ಷಗಳ ಹಿಂದೆ ನಾನು ಶಾಪಿಂಗ್​ಗೆ ಎಂದು ಬೆಂಗಳೂರಿನ ಭದ್ರಪ್ಪ ಲೇಔಟ್​ಗೆ ಹೋಗಿದ್ದೆ. ಸಿಗ್ನಲ್​ನಲ್ಲಿ ಯಾರೋ ತೃತೀಯ ಲಿಂಗಿಗಳು ಅನುಚಿತವಾಗಿ ವರ್ತಿಸಿದರು ಎಂಬ ಕಾರಣ ಹೇಳಿದ ಪೊಲೀಸರು ನನ್ನನ್ನು ಇದ್ದಕ್ಕಿದ್ದಂತೆ ಕೊಡಿಗೆಹಳ್ಳಿ ಸ್ಟೇಷನ್ನಿಗೆ ಕರೆದೊಯ್ದರು. ನಾನು ಏನು ತಪ್ಪು ಮಾಡಿದ್ದೇನೆ ಎಂದು ಕೇಳಿದರೆ, ಸಾಹೇಬರು ಕರೆದುಕೊಂಡು ಬಾ ಎಂದಿದ್ದಾರೆ ಎಂದಷ್ಟೇ ಹೇಳಿದರು. ಸ್ಟೇಷನ್​ನಲ್ಲಿಯೂ ನನ್ನ ಈ ಪ್ರಶ್ನೆಗೆ ಉತ್ತರ ಇಡೀ ದಿನ ಲಾಠಿ ಏಟು. ಗೋಡೆಗೆ ತಲೆ ಚಚ್ಚಿ, ಬೆನ್ನು, ಕಾಲು, ಹೊಟ್ಟೆ ಎಲ್ಲ ಕಡೆಗೂ ಮನಬಂದಂತೆ ಹೊಡೆದರು.  ಒಂದು ವಾರ ಚಿಕಿತ್ಸೆ ಪಡೆದು, ಸತ್ತು ಬದುಕಿದೆ. ಆ ದೈಹಿಕ, ಮಾನಸಿಕ ಆಘಾತವನ್ನು ಇನ್ನೂ ಮರೆಯಲಾಗುತ್ತಿಲ್ಲ.

ಆಸ್ಪತ್ರೆಯಿಂದ ಮರಳಿ ಮನೆಗೆ ಬಂದ ಮೇಲೆ ಅಕ್ಕಪಕ್ಕದ ಜನರೆದುರು ಅವಮಾನವಾದಂತಾಗಿ ಕೀಳರಿಮೆ ಶುರುವಾಯಿತು. ಇದೆಲ್ಲದಕ್ಕೂ ಕಾರಣ ಆ ಪೊಲೀಸರೇ. ಇತಿಹಾಸವನ್ನು ಹಿಂದಿರುಗಿ ನೋಡಿದಾಗ ಈತನಕವೂ ನಮ್ಮ ಸಮುದಾಯಕ್ಕೆ ಪೊಲೀಸರಿಂದಲೇ ಹೆಚ್ಚು ತೊಂದರೆಯಾಗುತ್ತ ಬಂದಿರುವುದು. ಹೀಗಿರುವಾಗ, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಸೇರುವ ನಮ್ಮ ಸಮುದಾಯದವರನ್ನು ಸಮಾನತೆಯಿಂದ ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ? ನಮ್ಮನ್ನು ಹೇಗೆಲ್ಲ ಟ್ರೀಟ್ ಮಾಡಬಹುದು ಎನ್ನುವ ಆತಂಕ, ಪ್ರಶ್ನೆ ಕಾಡತೊಡಗಿದೆ.

ಆ ದಿನ ಕೊಡಿಗೆಹಳ್ಳಿ ಪೊಲೀಸರು, ಏನು ತಪ್ಪು ಮಾಡಿದ್ದೀಯಾ ಎಂದು ಕೇಳದೆ ಹೊಡೆದರಲ್ಲ ಅದನ್ನು ಹೇಗೆ ಮರೆಯುವುದು? ನನ್ನ ಹುಟ್ಟು, ನನ್ನ ಲಿಂಗ, ನನ್ನ ಅಸ್ತಿತ್ವದ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು ಇನ್ನೂ ಕಿವಿಯಲ್ಲಿದೆ. ವಿಚಾರಣೆ ಮಾಡದೆ ಹೊಡೆಯಲು ಪೊಲೀಸರಿಗೆ ಏನು ಅಧಿಕಾರವಿದೆ ಎನ್ನುವುದು ಪದೇಪದೆ ನೆನಪಾಗಿ ಮನಸ್ಸಿಗೆ ಹಿಂಸೆಯಾಗುತ್ತದೆ. ಹೇಗೆ ಮರೆಯುವುದು ಇದನ್ನು?

ಹಾಗಾಗಿ, ನಮ್ಮ ಸಮುದಾಯದವರು ಉದ್ಯೋಗವೆಂದು ಇಲಾಖೆಯನ್ನು ಪ್ರವೇಶಿಸಿದಾಗ ಹಂತಹಂತದಲ್ಲಿಯೂ ಅವರಿಗೆ ಯಾವ ರೀತಿಯ ಸೌಲಭ್ಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಲ್ಪಿಸಬಹುದು? ಇದು ದಿಗಿಲು ಉಂಟು ಮಾಡುತ್ತಿದೆ.

*

ಈ ವಿಷಯಕ್ಕೆ ಸಂಬಂಧಿಸಿ ನೀವೂ ನಿಮ್ಮ ಪ್ರತಿಕ್ರಿಯಿಸಬಹುದು. ಪದಮಿತಿ 200-300. ನಿಮ್ಮ ಭಾವಚಿತ್ರವೂ ಇರಲಿ. email –  tv9kannadadigital@gmail.com

ಇದನ್ನೂ ಓದಿ : Transgender Community : ಟ್ರಾನ್ಸ್ ಸಬ್ ಇನ್​ಸ್ಪೆಕ್ಟರರನ್ನು ಸಮತೆಯಿಂದ ನೋಡಲು ಉಳಿದ ಪೊಲೀಸ್ ಸಿಬ್ಬಂದಿಗೆ ಸಂವೇದನಾ ತರಬೇತಿ ಬೇಕು

ಇದನ್ನೂ ಓದಿ : ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ

Published On - 4:29 pm, Wed, 22 December 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್