ಹಿರಿಯ ವಿದ್ವಾನ್, ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ ನಿಧನ

ಬೆಂಗಳೂರಿನ ಹೆಬ್ಬಾಳದ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಲಕ್ಷ್ಮಣದಾಸ್ ಅವರು ಹೆಸರಾಂತ ಹರಿಕಥಾ ವಿದ್ವಾನ್ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸರ ಶಿಷ್ಯರಾಗಿದ್ದರು.

ಹಿರಿಯ ವಿದ್ವಾನ್, ಆಧ್ಯಾತ್ಮಿಕ ಚಿಂತಕ ಹಾಗೂ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ ನಿಧನ
ಲಕ್ಷ್ಮಣದಾಸ್ ವೇಲಣಕರ್
Follow us
TV9 Web
| Updated By: preethi shettigar

Updated on:Dec 22, 2021 | 11:52 AM

ಬೆಂಗಳೂರು: ಹಿರಿಯ ವಿದ್ವಾನ್ ಹಾಗೂ ಅಧ್ಯಾತ್ಮಿಕ ಚಿಂತಕ, ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ ಅವರು ಬೆಂಗಳೂರಿನ ಸ್ವಗೃಹದಲ್ಲಿಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಡಿಸೆಂಬರ್​ 22) ಬೆಳಿಗ್ಗೆ ಕೊನೆಯುಸಿರೆಳೆದರು. ಲಕ್ಷ್ಮಣದಾಸ್ ವೇಲಣಕರ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರನಾದ ಖ್ಯಾತ ಹಿಂದೂಸ್ತಾನಿ ಗಾಯಕ ದತ್ತಾತ್ರೇಯ ವೇಲಣಕರ್ ಅವರನ್ನು ಅಗಲಿದ್ದಾರೆ‌.  

ಬೆಂಗಳೂರಿನ ಹೆಬ್ಬಾಳದ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಲಕ್ಷ್ಮಣದಾಸ್ ಅವರು ಹೆಸರಾಂತ ಹರಿಕಥಾ ವಿದ್ವಾನ್ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸರ ಶಿಷ್ಯರಾಗಿದ್ದರು. ತಮ್ಮ ಗುರುಗಳ ನಂತರ ರಾಜ್ಯದಲ್ಲಿ ಹರಿಕಥಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಲಕ್ಷ್ಮಣದಾಸ್ ವೇಲಣಕರ್ ಸಾಕಷ್ಟು ಶ್ರಮಿಸಿದ್ದರು.

ಲಕ್ಷ್ಮಣದಾಸ್ ವೇಲಣಕರ್ ಅವರು ಗೋರಖ್ ಪುರದ ಗೀತಾ ಪ್ರೆಸ್​ನ ನೂರಕ್ಕೂ ಅಧಿಕ‌ ಅಧ್ಯಾತ್ಮಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.  ಷಡ್ಜಾ ಕಲಾಕೇಂದ್ರವನ್ನು ಸ್ಥಾಪಿಸಿ ಆಧ್ಯಾತ್ಮಿಕ, ಸಂಗೀತ ಹಾಗೂ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದರು.

ಲಕ್ಷ್ಮಣದಾಸ್ ವೇಲಣಕರ್​ 1960 ರಲ್ಲಿ ಬೆಂಗಳೂರಿಗೆ ಬಂದ ಇವರು ಭದ್ರಗಿರಿ ಸಹೋದರರಲ್ಲಿ ಆಶ್ರಯ ಪಡೆದು ಕಥಾ ಕೀರ್ತನವನ್ನು ಅಭ್ಯಸಿಸಲು ಪ್ರಾರಂಭಿಸಿದರು. ನಂತರ ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರವನ್ನು ಸೇರಿ ಗುರುಕುಲ ಪದ್ಧತಿಯಂತೆ ಆಶ್ರಮದ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸಿದರು. ಬಳಿಕ ಕೀರ್ತನ ಕಲೆಯನ್ನು ಕಲಿಯತೊಡಗಿದರು. ಸಂತ ಅಚ್ಯುತದಾಸರೊಂದಿಗೆ ಹರಿಕಥಾ ಅಧ್ಯಯನದಲ್ಲಿ ಕೂಡ ಸಹಭಾಗಿಯಾದರು.

ಇದನ್ನೂ ಓದಿ: ಹಿರಿಯ ಛಾಯಾಗ್ರಾಹಕ ಗೋಪಾಲಕೃಷ್ಣನ್​ ನಿಧನ; ಪೊಲೀಸ್​ ಠಾಣೆಗೆ ದೂರು ನೀಡಿದ ಪುತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಸೊಸೆ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ನಿಧನ

Published On - 11:42 am, Wed, 22 December 21