ಧಾರವಾಡ: BSF ಯೋಧ ಗಂಗಾಧರಯ್ಯ ಹಿರೇಮಠ ಹೃದಯಾಘಾತಕ್ಕೆ ಬಲಿ; ರೊಟ್ಟಿಗವಾಡ ಗ್ರಾಮಕ್ಕೆ ತೆರಳಿ ಅಂತಿಮ ನಮಸ ಸಲ್ಲಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಗಡಿ ಭದ್ರತಾ ಪಡೆಯಲ್ಲಿ(BSF) ಸೇವೆ ಸಲ್ಲಿಸುತ್ತಿದ್ದ ಗಂಗಾಧರಯ್ಯ ಹಿರೇಮಠ (BSF soldier Gangadharayya Hiremath) ಅವರು ಹೃದಯಾಘಾತದಿಂದ (heart attack) ಕೊನೆ ಉಸಿರೆಳೆದಿದ್ದು, ಇಂದು ಧಾರವಾಡ ಜಿಲ್ಲೆಯ ಕುಂದುಗೊಳ (Kundagol) ತಾಲೂಕಿನ ರೊಟ್ಟಿಗವಾಡ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಧಾರವಾಡ: ಗಡಿ ಭದ್ರತಾ ಪಡೆಯಲ್ಲಿ(BSF) ಸೇವೆ ಸಲ್ಲಿಸುತ್ತಿದ್ದ ಗಂಗಾಧರಯ್ಯ ಹಿರೇಮಠ (BSF soldier Gangadharayya Hiremath) ಅವರು ಹೃದಯಾಘಾತದಿಂದ (heart attack) ಕೊನೆ ಉಸಿರೆಳೆದಿದ್ದು, ಇಂದು ಧಾರವಾಡ ಜಿಲ್ಲೆಯ ಕುಂದುಗೊಳ (Kundagol) ತಾಲೂಕಿನ ರೊಟ್ಟಿಗವಾಡ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಹುತಾತ್ಮ ವೀರಯೋಧನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಸಚಿವ ಜೋಶಿ ಪ್ರಾರ್ಥಿಸಿದರು (Amar Jawan).
ಕುಂದುಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಇರುವ ಗಂಗಾಧರಯ್ಯ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಂತ್ವನ ತಿಳಿಸಿದರು. ಭಾರತೀಯ ಸೇನೆ ಸೇವೆ ಸಲ್ಲಿಸುತ್ತಿದ್ದ ನಮ್ಮ ವೀರ ಯೋಧ ಗಂಗಾಧರಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜೋಶಿ ಇದೇ ವೇಳೆ ಪ್ರಾರ್ಥಿಸಿದರು. ವೀರ ಯೋಧ ಗಂಗಾಧರಯ್ಯ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ಪಶ್ಚಿಮ ಬಂಗಾಳದ ಕೂಚ್ ಬಿಹಾರ್‌ದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
Published On - 3:12 pm, Mon, 29 August 22