Siddaramaiah: ಧರ್ಮ ರಾಜಕಾರಣ – ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ :ಪ್ರಲ್ಹಾದ್ ಜೋಶಿ

| Updated By: ಸಾಧು ಶ್ರೀನಾಥ್​

Updated on: Aug 20, 2022 | 6:17 PM

ಚುನಾವಣೆ ಸಂದರ್ಭದಲ್ಲಿ ಹೀಗೆಯೇ ಟೆಂಪಲ್ ರನ್ ಮಾಡಿ ರಾಹುಲ್ ಗಾಂಧಿ ಅಪಹಾಸ್ಯಕ್ಕೀಡಾಗಿದ್ದರು.  ನಿನ್ನೆ ಮಠಕ್ಕೆ ಹೋಗಿ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟುಬಂದಿದ್ದಾರೆ. ಸಿದ್ದರಾಮಯ್ಯ ಪಶ್ಚಾತ್ತಾಪ ಅಲ್ಲ; ಪ್ರಾಯಶ್ಚಿತ ಮಾಡಿಕೊಳ್ಳಬೇಕು -ಸಚಿವ ಪ್ರಲ್ಹಾದ್ ಜೋಶಿ 

Siddaramaiah: ಧರ್ಮ ರಾಜಕಾರಣ - ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ :ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
Follow us on

ದೇವನಹಳ್ಳಿ: ಈ ಹಿಂದೆ ಕಾಂಗ್ರೆಸ್​​ನವರು ಹಿಂದೂ (Hindu) ವಿಚಾರ ಅಂದರೆ ತುಂಬಾ ಅಸಡ್ಡೆಯಿಂದ ನೋಡುತ್ತಿದ್ರು. ಆದರೆ ಇದೀಗ ಬಿಜೆಪಿಯ ಪ್ರಾಬಲ್ಯದಿಂದ ಅವರಿಗೆ ಭಯ ಶುರುವಾಗಿದೆ. ಸಿದ್ದರಾಮಯ್ಯ (Siddaramaiah) ಮಠ ಮಂದಿರಗಳಿಗೆ ಓಡಾಡಲು ಶುರು ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi ) ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹೀಗೆಯೇ ಟೆಂಪಲ್ ರನ್ ಮಾಡಿ ರಾಹುಲ್ ಗಾಂಧಿ ಅಪಹಾಸ್ಯಕ್ಕೀಡಾಗಿದ್ದರು. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಅಪಹಾಸ್ಯಕ್ಕೆ ತುತ್ತಾಗಿದ್ರು. ನಿನ್ನೆ ಮಠಕ್ಕೆ ಹೋಗಿ ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟುಬಂದಿದ್ದಾರೆ. ಸಿದ್ದರಾಮಯ್ಯ ಪಶ್ಚಾತ್ತಾಪ ಅಲ್ಲ; ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ಧರ್ಮ ರಾಜಕಾರಣ – ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ – ಪ್ರಲ್ಹಾದ್ ಜೋಶಿ

ಲಿಂಗಾಯತ ವೀರಶೈವ ಧರ್ಮರಾಜಕಾರಣಕ್ಕೆ ಕೈ ಹಾಕಿದ್ದ ಸಿದ್ದರಾಮಯ್ಯ ಅವರು ಪ್ರಶ್ಚಾತಾಪ ಪಟ್ಟರೆ ಸಾಲದು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ಅವರಿಗೆ ಈಗ ದೇವರು ಹಾಗೂ ಹಿಂದು ಧರ್ಮದ ಮಹತ್ವ ಗೊತ್ತಾಗ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಧರ್ಮ ರಾಜಕಾರಣ ಮಾಡಲ್ಲ ಎಂದು ಈಗ ಹೇಳಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಹಿಂದುತ್ವ, ಹಿಂದು ಧರ್ಮದ ಆಚರಣೆಗಳು ಎಂದರೆ ಕಾಂಗ್ರೆಸ್ ಮೊದಲೆಲ್ಲಾ ಅಸೆಡ್ಡೆ ತೋರಿಸುತಿತ್ತು. ಆದ್ರೆ, ಹಿಂದುತ್ವ ಸಿದ್ದಾಂತದಲ್ಲಿ ನಂಬಿಕೆಯಿಟ್ಟು ಮುನ್ನೆಡೆದ ಬಿಜೆಪಿ ಪಕ್ಷದ ಬೆಳವಣಿಗೆಯನ್ನ ನೋಡಿ ಈಗ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಬಿಜೆಪಿ ಅಂದ್ರೆ ಸಿದ್ದರಾಮಯ್ಯ ಅವರಿಗೆ ಈಗ ಭಯ. ಹೀಗಾಗಿಯೇ ಸಿದ್ದರಾಮಯ್ಯ ಅವರು ಮಠ, ಮಾನ್ಯಗಳಿಗೆ, ದೇವಸ್ಥಾನಗಳಿಗೆ ತೆರಳ್ತಿದ್ದಾರೆ. ಸಿದ್ದರಾಮಯ್ಯ ಈ ಮೊದಲು ತಮ್ಮನ್ನ ತಾವು ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದರು. ಆದ್ರೆ ಈಗ ದೇವರಲ್ಲಿ ಅವರಿಗೆ ನಂಬಿಕೆ ಬಂದಿದೆ. ಧರ್ಮ ರಾಜಕಾರಣದಲ್ಲಿ ಕೈ ಹಾಕಲ್ಲ ಎನ್ನುತ್ತಿದ್ದಾರೆ.

ಲಿಂಗಾಯತ ವೀರಶೈವ ಧರ್ಮ ರಾಜಕಾರಣ ನಡೆಸಿದ್ದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟರೆ ಸಾಲದು. ಅದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹಿಂದು ಮುಸ್ಲಿಂರಲ್ಲಿ ಒಡಕು ತರುವ ಕೆಲಸವನ್ನ ಸಿದ್ದರಾಮಯ್ಯ ಅವರು ಮಾಡುತ್ತಿದ್ದರು. ಮುಸ್ಲಿಂ ಓಲೈಕೆ ರಾಜಕಾರಣ, ತುಷ್ಟಿಕರಣದ ರಾಜಕಾರಣವನ್ನ ಸಿದ್ದರಾಮಯ್ಯ ಅವರು ಬಿಡಬೇಕು ಎಂದು ಜೋಶಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

Published On - 5:56 pm, Sat, 20 August 22