UPSC 2022 toppers from Karnataka: KSRTC ಬಸ್ ಚಾಲಕನ ಮಗ ಸೇರಿದಂತೆ 25 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ

| Updated By: ನಯನಾ ಎಸ್​ಪಿ

Updated on: May 23, 2023 | 6:42 PM

ಕರ್ನಾಟಕದ ಎಚ್‌ಎಸ್ ಭಾವನಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿ 55 ರ‍್ಯಾಂಕ್ ಗಳಿಸಿದ್ದಾರೆ.

UPSC 2022 toppers from Karnataka: KSRTC ಬಸ್ ಚಾಲಕನ ಮಗ ಸೇರಿದಂತೆ 25 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ
UPSC 2022 ಫಲಿತಾಂಶ
Follow us on

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC Result 2022) ಇಂದು (May 23) ಸಿವಿಲ್ ಸರ್ವೀಸಸ್2022 ಪರೀಕ್ಷೆಯನ್ನು ಬಿಡುಗಡೆ ಮಾಡಿದೆ. ಈ ವರ್ಷವೂ ಮಹಿಳೆಯರು ಉನ್ನತ ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಿದರು, ಇಶಿತಾ ಕಿಶೋರ್ AIR 1 ಅನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದರೆ, ಉಳಿದಂತೆ ಗರಿಮಾ ಲೋಹಿಯಾ, ಉಮಾ ಹರತಿ ಎನ್ ಮತ್ತು ಸ್ಮೃತಿ ಮಿಶ್ರಾ ಅಗ್ರ ಸ್ಥಾನದಲ್ಲಿದ್ದಾರೆ. ಕರ್ನಾಟಕದಿಂದ 25 ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ (UPSC) 2022 ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಒಬ್ಬ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮಗ 589ನೇ ರ‍್ಯಾಂಕ್ ಪಡೆದಿದ್ದಾನೆ. ಯುಪಿಎಸ್‌ಸಿ ಫಲಿತಾಂಶ ಮಂಗಳವಾರ (ಮೇ 23) ಪ್ರಕಟವಾಗಿದೆ.

ಸಿದ್ದಲಿಂಗಪ್ಪ ಕೆ ಪೂಜಾರ್

ಸಿದ್ದಲಿಂಗಪ್ಪ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಬಡ ಕುಟುಂಬದಿಂದ ಬಂದವರು. ಅವರ ತಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ. ಅವರು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ UPSC ಪರೀಕ್ಷೆಯಲ್ಲಿ 589 ನೇ ಸ್ಥಾನ ಪಡೆಡಿದ್ದಾರೆ.

ಪೂಜಾ ಮುಕುಂದ್

ಮೈಸೂರಿನ ಕುವೆಂಪು ನಗರದ ಪೂಜಾ UPSC ಪರೀಕ್ಷೆಯಲ್ಲಿ 390ನೇ ರ್ಯಾಂಕ್ ಗಳಿಸಿದ್ದಾರೆ. ಯಾವುದೇ ಕೋಚಿಂಗ್ ತರಗತಿಗಳಿಗೆ ಹಾಜರಾಗದೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪೂಜಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾ, ಇದು ತನ್ನ ತಾಯಿಯ ಕನಸು ಮತ್ತು ಅದನ್ನು ನನಸಾಗಿಸಲು ಸಂತೋಷವಾಗಿದೆ ಎಂದು ಹೇಳಿದರು. ಪೂಜಾ ಇಂಜಿನಿಯರಿಂಗ್ ಮುಗಿಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾಳೆ.

ಇದನ್ನೂ ಓದಿ: UPSC ಪರೀಕ್ಷೆಯಲ್ಲಿ 362ನೇ ರ‍್ಯಾಂಕ್ ಪಡೆದ ಬೆಳಗಾವಿಯ ಶ್ರುತಿ ಯರಗಟ್ಟಿ

ಮೇಘನಾ ಐ.ಎನ್

ನಿವೃತ್ತ ಉಪ ಸಂರಕ್ಷಣಾಧಿಕಾರಿಯಾಗಿರುವ ಅರಣ್ಯ ಅಧಿಕಾರಿಯ ಪುತ್ರಿ ಮೇಘನಾ ಯುಪಿಎಸ್‌ಸಿ ಪರೀಕ್ಷೆಯಲ್ಲಿ 617ನೇ ರ್ಯಾಂಕ್ ಪಡೆದಿದ್ದಾರೆ. ಇವರು ತಮ್ಮ ಎರಡನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದ ನಂತರ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಮೇಘನಾಗೆ ಐಪಿಎಸ್ ಅಧಿಕಾರಿಯಾಗುವ ನಿರೀಕ್ಷೆ ಇದೆ.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ