ಕಾರವಾರ: ಮದ್ಯ ಕುಡಿಯಲು ಹಣ ನೀಡಲಿಲ್ಲ ಎನ್ನುವ ಒಂದು ಕಾರಣಕ್ಕೆ ಪತಿರಾಯನೊಬ್ಬ ಕಟ್ಟಿಕೊಂಡ ಪತ್ನಿಯನ್ನೇ ಕೊಂದಿದ್ದಾನೆ (Murder). ತಂದೆಯ ಈ ಕೃತ್ಯಕ್ಕೆ ಮಗನೂ ಕೈಜೋಡಿಸಿದ್ದಾನೆ ಎನ್ನುವುದು ದುರಂತ. ಉತ್ತರ ಕನ್ನಡ ಜಿಲ್ಲೆ (Uttara Kannada District) ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರೋಪಿಗಳಾದ ಪತಿ ವಿಶ್ವೇಶ್ವರ ಭಟ್(69), ಮಗ ಮಧುಕರ ಭಟ್(33) ಕುಡಿತದ ಚಟ ಬೆಳೆಸಿಕೊಂಡಿದ್ದರು. ಇಂದು(ಡಿ.07) ಕುಡಿಯಲು ಹಣ ನೀಡಲಿಲ್ಲವೆಂದು ಇಬ್ಬರು ಸೇರಿ ಗೀತಾ ಭಟ್ಳನ್ನು (64) ಕೊಲೆ ಮಾಡಿದ್ದಾರೆ. ಸದ್ಯ ಆರೋಪಿ ಮಧುಕರ್ ಭಟ್ನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಗದಗನಲ್ಲಿ ಮತ್ತೊಂದು ಚಾಕು ಇರಿತ: ಒಂದೇ ವಾರದಲ್ಲಿ ಮೂರು ಪ್ರಕರಣ, ಬೆಚ್ಚಿಬಿದ್ದ ಜನ
ದಿನನಿತ್ಯ ಮನೆಯಲ್ಲಿ ತನ್ನ ಕುಡಿತಕ್ಕೆ ಹಣ ನೀಡುವಂತೆ ಗೀತಾ ಭಟ್ಳ ಮಗ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಇವರ ಮನೆಯಲ್ಲಿ ಕುಡಿತದ ಕಾರಣದಿಂದ ದಿನವೂ ಕಲಹ ನಡೆಯುತ್ತಲೇ ಇತ್ತು. ಎದಿನಂತೆ ಇಂದೂ ಕೂಡಾ ಹಣ ನೀಡುವಂತೆ ಜಗಳವಾಡಿದ್ದಾರೆ. ಆದರೆ ಹಣ ನೀಡದ ಕಾರಣ ತಂದೆ-ಮಗ ಸೇರಿಕೊಂಡು ಗೀತಾ ಭಟ್ಳನ್ನು ಕಟ್ಟಿಗೆಯಿಂದ ಹೊಡೆದು ಕೊಂದ್ದಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಕುಮಟಾ ಪಿಎಸ್‌ಐ ನವೀನಕುಮಾರ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:21 pm, Wed, 7 December 22