ಗದಗನಲ್ಲಿ ಮತ್ತೊಂದು ಚಾಕು ಇರಿತ: ಒಂದೇ ವಾರದಲ್ಲಿ ಮೂರು ಪ್ರಕರಣ, ಬೆಚ್ಚಿಬಿದ್ದ ಜನ

TV9kannada Web Team

TV9kannada Web Team | Edited By: Vivek Biradar

Updated on: Dec 07, 2022 | 9:10 PM

ಗದಗನಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಹುಡ್ಕೋ ಕಾಲೋನಿಯಲ್ಲಿ ಅವಿನಾಶ್​ ಎಂಬುವರಿಗೆ ಚಾಕು ಇರಿಯಲಾಗಿದೆ.

ಗದಗನಲ್ಲಿ ಮತ್ತೊಂದು ಚಾಕು ಇರಿತ: ಒಂದೇ ವಾರದಲ್ಲಿ ಮೂರು ಪ್ರಕರಣ, ಬೆಚ್ಚಿಬಿದ್ದ ಜನ
ಸಾಂಧರ್ಬಿಕ ಚಿತ್ರ

ಗದಗ: ನಗರದಲ್ಲಿ 2 ದಿನಗಳ ಹಿಂದೆ ಮೂವರಿಗೆ ಚಾಕು ಇರಿತ ಪ್ರಕರಣಗಳು ವರದಿಯಾಗಿದ್ದವು. ಈಗ ಗದಗನಲ್ಲಿ (Gadag) ಮತ್ತೊಂದು ಚಾಕು ಇರಿತ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಹುಡ್ಕೋ ಕಾಲೋನಿಯಲ್ಲಿ ಅವಿನಾಶ್​ ಎಂಬುವರಿಗೆ ಚಾಕು ಇರಿಯಲಾಗಿದೆ (knife stab). ಸದ್ಯ ಗಾಯಾಳು ಅವಿನಾಶ್​ನನ್ನು ಜಿಲ್ಲಾಸ್ಪತ್ರೆ ಜಿಮ್ಸ್​ಗೆ ದಾಖಲಿಸಲಾಗಿದೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ

ತಾಜಾ ಸುದ್ದಿ

ಬೆಂಗಳೂರು: ನೆಲಮಂಗಲ ತಾಲೂಕಿನ ದೇವರಹೊಸಹಳ್ಳಿಯಲ್ಲಿ ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿ ಜಯಪ್ರಕಾಶ(39) ಮೃತ ವ್ಯಕ್ತಿ. ಸಾಲಬಾಧೆ, ಜಮೀನು ಪಹಣಿ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಮೃತದೇಹ ಹೊರತೆಗೆದಿದ್ದಾರೆ. ದಾಬಸ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹೈಟೆನ್ಷನ್ ವೈರ್ ತಗುಲಿ ಬಾಲಕ ಸಾವು

ಬೆಂಗಳೂರು: ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡಿದ್ದ ಬಾಲಕ ಚಂದ್ರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. 2 ದಿನಗಳ ಹಿಂದೆ ನಂದಿನಿ ಲೇಔಟ್​ನ ವಿಜಯಾನಂದನಗರದಲ್ಲಿ ಪಾರಿವಾಳ ಉಳಿಸೋಕೆ ಹೋಗಿ ವಿದ್ಯುತ್ ಸ್ಪರ್ಶವಾಗಿ ಬಾಲಕ ಸುಪ್ರೀತ್ ಮತ್ತು ಚಂದ್ರು ಗಾಯಗೊಂಡಿದ್ದರು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಇಬ್ಬರು ಬಾಲಕರು ಮರಣ ಹೊಂದಿದ್ದಾರೆ.

ಮತ್ತಷ್ಟು ಅಪರಾಧ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada