ಉತ್ತರ ಕನ್ನಡ: ಪಿಎಸ್​ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಪಿಎಸ್​ಐ ಕಿರುಕುಳಕ್ಕೆ ಬೇಸತ್ತು ರಾಮನಗರ ಪೊಲೀಸ್​ ಠಾಣೆ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಸ್ಕರ ಸಾವು ಖಂಡಿಸಿ ಕುಣಬಿ ಸಮಾಜ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಉತ್ತರ ಕನ್ನಡ: ಪಿಎಸ್​ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು
ಮೃತ ಭಾಸ್ಕರ್​
Edited By:

Updated on: Jun 15, 2024 | 2:45 PM

ಕಾರವಾರ, ಜೂನ್15: ಪಿಎಸ್​ಐ (PSI) ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭಾಸ್ಕರ್ ಬೋಂಡೆಲ್ಕರ್​​ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಜೋಯಿಡಾ (Joida) ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮನಗರ ಪಿಎಸ್​ಐ ಬಸವರಾಜ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ​ದೂರು ನೀಡಿದ್ದರು. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಕ್ಕೆ ಭಾಸ್ಕರ್​ ಅವರಿಗೆ ಪಿಎಸ್​ಐ ಬಸವರಾಜ ನಿರಂತರ ಕಿರುಕಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪಿಎಸ್ಐ ಬಸವರಾಜ ಕಿರುಕಳಕ್ಕೆ ಬೇಸತ್ತು ಭಾಸ್ಕರ್​​ ರಾಮನಗರ ಬಿಟ್ಟು ಜೋಯಿಡಾದಲ್ಲಿ ಕೆಲಸಕ್ಕೆ ಸೇರಿದ್ದರು.

ಇದನ್ನೂ ಓದಿ: ಶಿಥಿಲಗೊಂಡ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ದ್ವಾರದ ಕಟ್ಟಡ

ಕೆಲ ದಿನಗಳ ಹಿಂದೆ ಜಮೀನು ವಿಚಾರದಲ್ಲಿ ಪೊಲೀಸರು ಭಾಸ್ಕರ ಅವರ ಮಾವ ಗಣಪತಿಗೆ ಅವರಿಗೆ ನೋಟಿಸ್ ಕೊಟ್ಟಿದ್ದರು. ಇದನ್ನು ತಿಳಿದ ಭಾಸ್ಕರ್, ನನಗೆ ಪೀಡುಸುತ್ತಿದ್ದ ಪೊಲೀಸರು ಈಗ ನನ್ನ ಮಾವನಿಗೂ ಪೀಡಿಸುತ್ತುದ್ದಾರೆಂದು ಭಾವಿಸಿ ಜೂನ್ 13 ರಂದು ಮಧ್ಯಪಾನ ಮಾಡಿ ಠಾಣೆಗೆ ಹೋಗಿ ನೋಟಿಸ್ ಕೊಟ್ಟಿರುವುದಕ್ಕೆ ಪ್ರಶ್ನಿಸಿದ್ದರು.

ಈ ವೇಳೆ ಪೊಲೀಸರು ಸರಿಯಾಗಿ ಸ್ಪಂದಿಸದೆ ಭಾಸ್ಕರ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಭಾಸ್ಕರ್​ ಪೊಲೀಸ್​ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಂಕಿ ಹಂಚಿಕೊಂಡಿದನ್ನು ಕಂಡ ಪೊಲೀಸರು ಕೂಡಲೆ ಬೆಂಕಿ ನಂದಿಸಿದರು. ಅರ್ಧ ದೇಹ ಸುಟ್ಟು, ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕೆಎಲ್​ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಫಲಕಾರಿಯಾಗದೆ ಇಂದು (ಜೂ.15) ಆಸ್ಪತ್ರೆಯಲ್ಲೇ ಭಾಸ್ಕರ ಮೃತಪಟ್ಟಿದ್ದಾರೆ. ಭಾಸ್ಕರ ಸಾವು ಖಂಡಿಸಿ ಕುಣಬಿ ಸಮಾಜ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:04 pm, Sat, 15 June 24