
ಕಾರವಾರ, ನವೆಂಬರ್ 04: ಮುಂಬೈನಿಂದ ಮಂಗಳೂರಿಗೆ (Mumbai to Mangaluru) ತೆರಳುತ್ತಿದ್ದ ಬಸ್‌ನಲ್ಲಿ (bus) ಸಾಗಿಸುತ್ತಿದ್ದ 401 ಗ್ರಾಂ ತೂಕದ 32 ಚಿನ್ನದ ಬಳೆ ಹಾಗೂ 50 ಲಕ್ಷ ರೂ ನಗದು ಹಣವನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಭಟ್ಕಳದಲ್ಲಿ ತಪಾಸಣೆ ಮಾಡಿದಾಗ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ಪತ್ತೆ ಆಗಿದೆ. ಸದ್ಯ ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈನಲ್ಲಿ ಬಸ್ ಚಾಲಕನ ಕೈಗೆ ಅನಾಮಿಕ ವ್ಯಕ್ತಿ ಸೂಟ್‌ಕೇಸ್ ನೀಡಿದ್ದಾನೆ. ಮಂಗಳೂರು ಬಸ್ ನಿಲ್ದಾಣದಲ್ಲಿ ಸೂಟ್‌ಕೇಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದ. ಬಸ್ ಸಂಖ್ಯೆ ಹೇಳುತ್ತೇನೆ, ನಮ್ಮವರು ಬಂದು ಪಡೆಯುತ್ತಾರೆ. ಇರ್ಫಾನ್ ಎಂಬುವವರಿಗೆ ಸೂಟ್‌ಕೇಸ್ ಕೊಡುವಂತೆ ಹೇಳಿದ್ದ.
ಇದನ್ನೂ ಓದಿ: ಆನೇಕಲ್: ಆರ್ಟಿಓ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ತೆರಿಗೆ ಕಟ್ಟದ 25 ಬಸ್ಗಳು ಜಪ್ತಿ
ಸಂಶಯಾಸ್ಪದ ಹಿನ್ನೆಲೆ ಭಟ್ಕಳದಲ್ಲಿ ಬಸ್ ಸರ್ಚ್ ಮಾಡಿದಾಗ ಪೊಲೀಸರ ಕಣ್ಣಿಗೆ ಸೂಟ್‌ಕೇಸ್‌ನಲ್ಲಿ ಸ್ವೀಟ್ ಬಾಕ್ಸ್ ಮಾದರಿಯಲ್ಲಿ ಕಂಡಿದ್ದು, ಅದನ್ನು ಓಪನ್ ಮಾಡಿದಾಗ ಹಣ, ಒಡವೆ ಪತ್ತೆ ಆಗಿವೆ. ಸದ್ಯ ಬಸ್ ಚಾಲಕನಿಂದ ನಗದು ಮತ್ತು ಚಿನ್ನ ವಶಕ್ಕ ಪಡೆದಿರುವ ಪೊಲೀಸರು, ಮಾಲೀಕರ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
ಕಾರವಾರ ತಾಲೂಕಿನ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ತಲೆ ಮೇಲೆ ಹೊತ್ತು ಸಾಗಿಸುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರವಾರ ಚಿತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಸಾಲ ಕೊಟ್ಟವರ ಮನೆಯಲ್ಲೇ ಕನ್ನ; ತಂಗಿ ಕೃತ್ಯಕ್ಕೆ ಅಣ್ಣ ಸಾಥ್, ಆರು ಜನರ ಬಂಧನ
ಮುಖ್ಯ ರಸ್ತೆಯಲ್ಲಿ ಪೊಲೀಸರು ತಪಾಸಣೆ ತಿವ್ರಗೊಳಿಸಿರುವ ಹಿನ್ನೆಲೆ ಸಂಜೆ ವೇಳೆ ಅರಣ್ಯ ಪ್ರದೇಶದ ಕಾಲು ದಾರಿ ಮೂಲಕ ತಲೆ ಮೇಲೆ ಮದ್ಯ ತುಂಬಿದ ಚೀಲ ಹೊತ್ತು ಸಾಗಿಸುತ್ತಿದ್ದರು. ಚಿತಾಕುಲ ಪಿಎಸ್ಐ ಪರಶುರಾಮ ಹಾಗೂ ತಂಡದಿಂದ ಕಾರ್ಯಾಚರಣೆ ವೇಳೆ ದಿಲೀಪ್ ಮ್ಹಾಳಸೆಕರ, ರಾಜೇಂದ್ರ ಪಡವಳಕರ ಹಾಗೂ ಗಣಪತಿ ಗಲ್ಗುಟಕರ ಸಿಕ್ಕಿಬಿದಿದ್ದಾರೆ. ಕಾರವಾರ ಮೂಲದ ಈ ಮೂವರು, 1,34,482 ಮೌಲ್ಯದ ಸುಮಾರು ಹತ್ತಕ್ಕೂ ಹೆಚ್ಚು ಬ್ರಾಂಡ್ನ ಗೋವಾ ಮೂಲದ ಮದ್ಯ ಸಾಗಿಸುತ್ತಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.