ಉತ್ತರ ಕನ್ನಡ: ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟ!

| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2024 | 8:22 PM

ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟವಾಗಿದೆ. ಕಾಂಗ್ರೆಸ್ ಶಾಸಕರೊಬ್ಬರ ಸಭೆಯ ಸುದ್ದಿ ಮಾಡಲು ತೆರಳುತ್ತಿದ್ದಾಗ ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಇನ್ನು ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನು ಈ ನಾಡಬಾಂಬ್ ಸ್ಫೋಟವಾಗಿದ್ದು ಎಲ್ಲಿ? ಯಾರ ಕಾರಿನ ಕೆಳಗೆ ಎನ್ನುವ ವಿವರ ಇಲ್ಲಿದೆ.

ಉತ್ತರ ಕನ್ನಡ: ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿನ ಕೆಳಗೆ ನಾಡಬಾಂಬ್ ಸ್ಫೋಟ!
ನಾಡಬಾಂಬ್ ಸ್ಫೋಟ
Follow us on

ಕಾರವಾರ, (ಜುಲೈ 02): ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಗ್ರಾಮದ ಬಳಿ ನಾಡಬಾಂಬ್ ಸ್ಫೋಟವಾಗಿದೆ. ಪತ್ರಕರ್ತರು ಪ್ರಯಾಣಿಸುತ್ತಿದ್ದ ಕಾರಿಗೆ ಕೆಳಗೆ ನಾಡಬಾಂಬ್ ಸ್ಫೋಟಗೊಂಡಿರುವುದು ಅಚ್ಚರಿಕೆ ಕಾರಣವಾಗಿದೆ. ಸಂದೇಶ್ ದೇಸಾಯಿ ಎಂಬ ಪತ್ರಕರ್ತನಿಗೆ ಸೇರಿದ ಕಾರಿನಲ್ಲಿ ಪತ್ರಕರ್ತರು ಇಂದು (ಜುಲೈ 02) ಶಾಸಕ ಆರ್ ವಿ ದೇಶಪಾಂಡೆ ಸಭೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ ಟೈರ್ ಗೆ ಸಿಕ್ಕು ಬಾಂಬ್ ಸ್ಪೋಟವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪತ್ರಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಸಮಯದಲ್ಲಿ ಉತ್ತರ ಕನ್ನಡ ಕರಾವಳಿ ಭಾಗದಲ್ಲಿ ಶಸ್ತ್ರಾಸ್ತ್ರಧಾರಿ ನಕ್ಸಲರ ಓಡಾಟ ನಡೆಸಿದ್ದು ಸುದ್ದಿಯಾಗಿತ್ತು. ಇದೀಗ ನಾಡಬಾಂಬ್ ಇಟ್ಟು ಸ್ಫೋಟಿಸುವ ಸಂಚು ನಡೆಸಿದ್ದಾರಾ ಎಂಬ ಅನುಮಾನ ಮೂಡಿದೆ. ಇನ್ನು ಸ್ಥಳಕ್ಕೆ ಪೊಲೀಸ್ ಇಲಾಖೆ ಸ್ಥಳಕ್ಕೆ ದೌಡಾಯಿಸಿದ್ದು, ಬಾಂಬ್ ಸ್ಫೋಟಗೊಂಡ ಸ್ಥಳ, ಸ್ಥಳದಲ್ಲಿ ಸಿಕ್ಕ ಸ್ಫೋಟಕ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ.

Published On - 6:40 pm, Tue, 2 July 24