AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆಗೊಂಡು ಕೆಲವೇ ತಾಸುಗಳಲ್ಲಿ ಕ್ಲೋಸ್​ ಆದ ಕಾರವಾರ ಯುದ್ಧ ವಿಮಾನ ವಸ್ತು ಸಂಗ್ರಹಾಲಯ: ಕಾರಣ ಏನು?

ಕಾರವಾರ ಕಡಲ ತೀರದಲ್ಲಿನ ಯುದ್ಧ ವಿಮಾನ ಹಾಗೂ ನೌಕಾದಳದ ಮಾಹಿತಿ ನೀಡಲು ಆರಂಭ ಮಾಡಿದ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡು ಕೆಲವೇ ತಾಸುಗಳಲ್ಲಿ ಮತ್ತೆ ಕ್ಲೋಸ್​ ಮಾಡಿರುವಂತಹ ಘಟನೆ ನಡೆದಿದೆ. ಕೆಲಸವೇ ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವ ಅವಸರ ಏನಿತ್ತು ಎಂದು ಜನರ ಪ್ರಶ್ನೆ ಮಾಡುತ್ತಿದ್ದಾರೆ.

ಉದ್ಘಾಟನೆಗೊಂಡು ಕೆಲವೇ ತಾಸುಗಳಲ್ಲಿ ಕ್ಲೋಸ್​ ಆದ ಕಾರವಾರ ಯುದ್ಧ ವಿಮಾನ ವಸ್ತು ಸಂಗ್ರಹಾಲಯ: ಕಾರಣ ಏನು?
ಉದ್ಘಾಟನೆಗೊಂಡು ಕೆಲವೇ ತಾಸುಗಳಲ್ಲಿ ಕ್ಲೋಸ್​ ಆದ ಕಾರವಾರ ಯುದ್ಧ ವಿಮಾನ ವಸ್ತು ಸಂಗ್ರಹಾಲಯ: ಕಾರಣ ಏನು?
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 01, 2024 | 10:06 PM

Share

ಉತ್ತರ ಕನ್ನಡ, ಜುಲೈ 01: ಕಾರವಾರದ (Karwar) ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಇನ್ನಷ್ಟು ಮನರಂಜನೆಯ ಜೊತೆಗೆ, ಯುದ್ಧ ವಿಮಾನ ಹಾಗೂ ನೌಕಾದಳದ ಮಾಹಿತಿ ನೀಡಲು ಆರಂಭ ಮಾಡಿದ ಯುದ್ಧ ವಿಮಾನ ವಸ್ತು ಸಂಗ್ರಹಾಲಯ (Tupolev Aircraft Museum) ಕಾಟಾಚಾರಕ್ಕೆ ಉದ್ಘಾಟನೆ ಮಾಡಿ, ಮತ್ತೆ ಕ್ಲೋಸ್ ಮಾಡಿದ್ದು ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾರವಾರ ಕಡಲ ತೀರದಲ್ಲಿನ ವಸ್ತು ಸಂಗ್ರಹಲಾಯವಿದೆ. 2017 ರಲ್ಲಿ ಭಾರತೀಯ ವಾಯು ಸೇನೆಯಿಂದ ನಿವೃತ್ತವಾದ ಯುದ್ದ ವಿಮಾನವನ್ನು ತಮಿಳುನಾಡಿನ ಅರಕ್ಕೋಡಮ್ ನಲ್ಲಿ ಇರುವ ರಾಜೋಲಿ ನೌಕಾನೆಲೆಯಿಂದ 2023ರ ಸೆಪ್ಟೆಂಬರ್‌ ತಿಂಗಳಲ್ಲಿ ಕಾರವಾರಕ್ಕೆ ತರಲಾಯಿತು.

ಕೋಟಿಗಟ್ಟಲೇ ವೆಚ್ಚ ಮಾಡಿ ತಂದ ಈ ಯುದ್ಧ ವಿಮಾನವನ್ನು ಜೋಡಿಸುವ ಕಾರ್ಯ ಸಹ ವಿಳಂಬವಾಗಿ 8 ತಿಂಗಳ ನಂತರ ಜೋಡಣೆಯಾಗಿತ್ತು. ಇದರ ಸಂಪೂರ್ಣ ಖರ್ಚನ್ನು ನೌಕಾದಳ ವಹಿಸಿತ್ತು. 53.6 ಮೀಟರ್ ಉದ್ದ ಹಾಗೂ 35 ಮೀಟರ್ ಅಗಲವಿರುವ ಯುದ್ಧ ವಿಮಾನವು ರಾಷ್ಟ್ರೀಯ ಹೆದ್ಧಾರಿ ಪಕ್ಕದ ವಾರ್ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗಿದ್ದು ಇದರ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡಿದೆ. ಆದರೆ ಇಂದು ಸಂಪೂರ್ಣ ಕಾರ್ಯ ಮುಗಿಯುವುದರೊಳಗೆ ಪ್ರವಾಸೋದ್ಯಮ ಇಲಾಖೆ ಕಾರವಾರದ ಶಾಸಕ ಸತೀಶ್ ಸೈಲ್ ಮೂಲಕ ಉದ್ಘಾಟನೆ ಮಾಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾಯಾದ್ಯಂತ ಭಾರಿ ಮಳೆ; ಜಲಪಾತಗಳಿಗೆ ಜೀವ ಕಳೆ, ಜನರ ಸೆಳೆಯುತ್ತಿರುವ ಪ್ರವಾಸಿ ತಾಣಗಳು

ಇನ್ನು ಉದ್ಘಾಟನೆಗೊಂಡು ಕೆಲವೇ ತಾಸಿನಲ್ಲಿ ಯುದ್ಧ ವಿಮಾನ ಮ್ಯೂಸಿಯಂ ವೀಕ್ಷಣೆಗೆ ಸ್ಥಗಿತ ಗೊಳಿಸಲಾಗಿತ್ತು. ಇದಲ್ಲದೇ ವಿಮಾನದ ಒಳಭಾಗದಲ್ಲಿ ಎಸಿ ಅಳವಡಿಕೆ ಸೇರಿದಂತೆ ಹಲವು ಕಾರ್ಯಗಳು ಆಗದ ಕಾರಣ ಉದ್ಘಾಟನೆಗೊಂಡ ಕೆಲವೇ ತಾಸಿನಲ್ಲಿ ಬಂದ್ ಮಾಡಲಾಗಿದೆ. ಸದ್ಯ ಇಲ್ಲಿನ ವಿಮಾನ ಸ್ಥಾಪನೆ ಕಾರ್ಯಕ್ಕೆ ಎರಡು ಕೋಟಿ ಹಣ ರೂ. ಬಿಡುಗಡೆಯಾಗಿದೆ.

20 ಲಕ್ಷದಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ರೆಸ್ಟೋರೆಂಟ್, ಪಾರ್ಕ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲು 1.80 ಕೋಟಿ ರೂ. ಹಣ ಇಲಾಖೆ ಬಳಿಯೇ ಉಳಿದಿದ್ದು ಕಾಮಗಾರಿ ಸಹ ಪ್ರಾರಂಭವಾಗಿಲ್ಲ. ಸದ್ಯ ಸಾಂಕೇತಿಕ ಉದ್ಘಾಟನೆ ಮಾಡಲಾಗಿದೆ. ಹೊರಗಿನಿಂದ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಮುಂದೆ ಎಲ್ಲಾ ಕಾರ್ಯ ಮುಗಿದ ನಂತರ ಮತ್ತೊಮ್ಮೆ ಉದ್ಘಾಟನೆಗೊಳ್ಳಲಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.

ಇದನ್ನೂ ಓದಿ: ಎರಡು ತಿಂಗಳ ಕಾಲ ಮೀನುಗಾರಿಕೆ ಬಂದ್​; ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ

ಒಟ್ಟಾರೆಯಾಗಿ ಉದ್ಘಾಟನೆಗೊಂಡು ಕೆಲವೇ ಗಂಟೆಯಲ್ಲಿ ಬಂದ್ ಮಾಡಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಕೆಲಸವೇ ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವ ಕಾರ್ಯ ಏಕೆ ಬೇಕಿತ್ತು ಎಂದು ಜನರ ಪ್ರಶ್ನೆ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:02 pm, Mon, 1 July 24