ಹುಬ್ಬಳ್ಳಿಯ ಅಂಜಲಿ ಕೊಲೆಯಾಗಿ 3 ತಿಂಗಳಾದ್ರೂ ಸರ್ಕಾರದಿಂದ ಸಿಕ್ಕಿಲ್ಲ ನಯಾಪೈಸೆ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ

ಮೇ 15 ರಂದು ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಕೊಲೆಯಾಗಿತ್ತು. ಮನೆಯಲ್ಲಿ ಮಲಗಿದಾಗ ವಿಶ್ವ ಅಲಿಯಾಸ್ ಗೀರಿಶ್ ಅಂಜಲಿ‌ಗೆ ಚಾಕು ಚುಚ್ಚಿ ಕೊಲೆ ಮಾಡಿದ್ದ. ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ‌ ಅಂಜಲಿ ‌ಕೊಲೆಯಾಗಿದ್ದು ಇಡೀ ಹುಬ್ಬಳ್ಳಿ ಮಂದಿ ಬೆಚ್ಚಿ ಬಿದ್ದಿದ್ದರು. ಬಳಿಕ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಅಂಜಲಿ ಕುಟುಂಬಕ್ಕೆ ಯಾವುದೇ ಪರಿಹಾರ ಸರ್ಕಾರ ನೀಡಿಲ್ಲ.

ಹುಬ್ಬಳ್ಳಿಯ ಅಂಜಲಿ ಕೊಲೆಯಾಗಿ 3 ತಿಂಗಳಾದ್ರೂ ಸರ್ಕಾರದಿಂದ ಸಿಕ್ಕಿಲ್ಲ ನಯಾಪೈಸೆ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ
ಹುಬ್ಬಳ್ಳಿಯ ಅಂಜಲಿ ಕೊಲೆಯಾಗಿ 3 ತಿಂಗಳಾದ್ರೂ ಸರ್ಕಾರದಿಂದ ಸಿಕ್ಕಿಲ್ಲ ನಯಾಪೈಸೆ: ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 01, 2024 | 9:37 PM

ಹುಬ್ಬಳ್ಳಿ, ಜುಲೈ 01: ಹುಬ್ಬಳ್ಳಿ ನೇಹಾ ಅಂಜಲಿ (Anjali Ambigera) ಕೊಲೆಗಳಿಂದ ಸಾಕಷ್ಟು ಸುದ್ದಿಯಾಗಿತ್ತು. ಎರಡು ಕೊಲೆಗಳು ಇಡೀ ದೇಶದಲ್ಲಿ ಸದ್ದು ಮಾಡಿದ್ದರು. ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡು ಕೊಲೆ ಕೇಸ್ ನಿಂದ ಚೋಟಾ ಮುಂಬೈ ಬೆಚ್ಚಿ ಬಿದ್ದಿತ್ತು. ನೇಹಾ ಹಾಗೂ ಅಂಜಲಿ ಕೊಲೆ ಕೇಸ್ ಖಂಡಿಸಿ ಇಡೀ ರಾಜ್ಯದಲ್ಲಿ ಹೋರಾಟಗಳು ನಡೆದಿದ್ದರು. ಹೋರಾಟದ ಫಲವಾಗಿ ಸಿಎಂ ಆದಿಯಾಗಿ ಸರ್ಕಾರದ ಸಚಿವರೆಲ್ಲ ಎರಡು ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅದರಲ್ಲೂ ಅಂಜಲಿ ಮನೆಗೆ ಭೇಟಿ ನೀಡಿದ ಗೃಹ ಸಚಿವರು ಪರಿಹಾರದ ಭರವಸೆ ನೀಡಿದ್ದರು. ಅಂಜಲಿ ಕುಟುಂಬ ಮೊದಲೇ ಬಡ ಕುಟುಂಬ. ನಿತ್ಯ ದುಡಿದರೆ ಮಾತ್ರ ಅವರ ಮನೆ ನಡೆಯೋದು. ಹೀಗಾಗಿ ಸರ್ಕಾರ ಪರಿಹಾರ ಕೊಡಬೇಕು ಎಂದು ಮಠಾಧೀಶರು, ಅಂಜಲಿ ಕುಟುಂಬಸ್ಥರು ಆಗ್ರಹ ಮಾಡಿದ್ದರು. ಗೃಹ ಸಚಿವರ ಮುಂದೆಯೂ ಅದೇ ಬೇಡಿಕೆ ಇಟ್ಟಿದ್ದರು. ಚುನಾವಣೆ ಮುಗಿದ ಬಳಿಕ ಪರಿಹಾರ ಘೋಷಣೆ ‌ಮಾಡೋದಾಗಿ ಹೇಳಿದ ಸರ್ಕಾರ ಇದುವರೆಗೂ ಅಂಜಲಿ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಹಾಗಾಗಿ ಸರ್ಕಾರದ ಬಳಿ ಪರಿಹಾರ ನಿಡುವುದುಕ್ಕೆ ಹಣ ಇಲ್ವಾ ಅನ್ನೋ ಅನುಮಾನ ಮೂಡಿದೆ.

ಮೇ 15 ರಂದು ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಕೊಲೆಯಾಗಿತ್ತು. ಮನೆಯಲ್ಲಿ ಮಲಗಿದಾಗ ವಿಶ್ವ ಅಲಿಯಾಸ್ ಗೀರಿಶ್ ಅಂಜಲಿ‌ಗೆ ಚಾಕು ಚುಚ್ಚಿ ಕೊಲೆ ಮಾಡಿದ್ದ. ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ‌ ಅಂಜಲಿ ‌ಕೊಲೆಯಾಗಿದ್ದು ಇಡೀ ಹುಬ್ಬಳ್ಳಿ ಮಂದಿ ಬೆಚ್ಚಿ ಬಿದ್ದಿದ್ರು. ಮೇ 20 ರಂದು‌ ಅಂಜಲಿ ಮನೆಗೆ ಪರಮೇಶ್ವರ ಭೇಟಿ ನೀಡಿದ್ರು. ಬಡವರೀದೀವಿ‌ ಒಂದು ಮನೆ, ಸಹಾಯ ನೌಕರಿ ಕೊಡಿ ಎಂದು ಅಂಗಲಾಚಿದ್ದರು. ಜಿ‌ ಪರಮೇಶ್ವರ ಕೂಡ ಕುಟುಂಬಸ್ಥರಿಗೆ ಚುನಾವಣೆ ಮುಗಿಲಿ ಸಹಾಯ ಮಾಡೋದಾಗಿ ಭರವಸೆ ನೀಡಿದ್ರು. ಆದ್ರೆ ಚುನಾವಣೆ ಮುಗಿದ್ರು ಜಿ ಪರಮೇಶ್ವರ ಕೊಟ್ಟ ಆಶ್ವಾಸನೆ ಈಡೇರಿಲ್ಲ ಪರಿಹಾರ ಕೊಟ್ಟ ಮಾತು ತಪ್ಪಿಸಿದ್ದಾರೆ.

ಇದನ್ನೂ ಓದಿ: ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ

ಸರ್ಕಾರದಲ್ಲಿ ‌ಪರಿಹಾರ ಕೊಡೋಕು ದುಡ್ಡಿಲ್ವಾ ಅನ್ನೋ ಅನುಮಾನ ಮೂಡಿದೆ. ಅಂಜಲಿ ಮನೆಗೆ ಭೇಟಿ ನೀಡಿ ಹೆಚ್ಚು ಕಡಿಮೆ ಎರಡು ತಿಂಗಳಾದರೂ ಸರ್ಕಾರದಿಂದ ನಯಾಪೈಸೆ ಹಣ ಪರಿಹಾರ ಬಂದಿಲ್ಲ. ಹೀಗಾಗಿ ಇಂದಿಗೂ ಅಂಜಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಂಜಲಿ ಅಜ್ಜಿ ಗಂಗಮ್ಮ ಹಾಗೂ ಸಹೋದರಿ ಸಂಜನಾ ಕಣ್ಣೀರು ಹಾಕುತ್ತಿದ್ದಾರೆ. ಒಂದು ಗೇಣು ಜಾಗ ಕೊಡಿ ಎಂದು‌ ಅಜ್ಜಿ ಕಣ್ಣೀರು ಹಾಕ್ತೀದಾರೆ. ಅಕ್ಕ ಸತ್ತಾಗ ಎಲ್ಲರೂ‌ ಬಂದು ಮಾತು ಕೊಟ್ಟರು. ಜಿ ಪರಮೇಶ್ವರ ಕೂಡ ಪರಿಹಾರ ನೀಡುತ್ತೇವೆ ಅಂದಿದ್ದರು. ಆದರೆ ಎಲ್ಲರೂ ಮಾತು ತಪ್ಪಿದ್ದಾರೆ ಎಂದು ಅಂಜಲಿ ಸಹೋದರಿ ಸಂಜನಾ ಕಣ್ಣೀರು ಹಾಕಿದ್ದಾರೆ.

ಅಂಜಲಿ‌ ಮನೆಯಲ್ಲಿ ಯಾರೂ ಗಂಡಮಕ್ಕಳಿಲ್ಲ. ಅಂಜಲಿ ಅಜ್ಜಿಯೇ ಮೊಮ್ಮಕ್ಕಳನ್ನ ಕೂಲಿ ನಾಲಿ‌ ಮಾಡಿ ಸಾಕ್ತಿದ್ರು. ಅಂಜಲಿ ಕೂಡ ದುಡಿದು ಅವರ ಕುಟುಂಬ ನೋಡಿಕೊಳ್ಳುತ್ತಿದ್ದಳು. ಆದರೆ ಅಂಜಲಿ ‌ಕೊಲೆಯಾದ ಬಳಿಕ ದುಡಿಯೋರು ಯಾರೂ‌ ಇಲ್ಲದಂತಾಗಿದೆ. ಹೀಗಾಗಿ‌ ಅಂಜಲಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಮನೆ‌ ಬಾಡಿಗೆ ಕೂಡಾ ಹೆಚ್ಚಿಗೆ ಮಾಡಿದ್ದಾರೆ. ನಾವು ಹೇಗೆ ಜೀವನ ಮಾಡೋದ ಎಂದ ಅಳಲು ತೋಡಿಕೊಳುತ್ತಿದ್ದಾರೆ.

ಇದನ್ನೂ ಓದಿ: ಅಂಜಲಿ ಹತ್ಯೆ ಪ್ರಕರಣ; ಆರೋಪಿ ವಿಶ್ವ 8 ದಿನ ಸಿಐಡಿ ವಶಕ್ಕೆ ನೀಡಿದ ಕೋರ್ಟ್​

ಅಂಜಲಿ ಕೊಲೆಯಾದ ಸಮಯದಲ್ಲಿ ಸರ್ಕಾರ ಕಣ್ಣೊರೆಸೋ ತಂತ್ರ ಮಾಡಿತ್ತು. ಉದ್ಯೋಗ ಮನೆ, ಪರಿಹಾರದ ಭರವಸೆ ನೀಡಿತ್ತು. ಆದ್ರೆ ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸೋಕೆ ಪರದಾಡ್ತಿದೆ. ಹೀಗಾಗಿ ಪರಿಹಾರ ಕೊಡೋಕು ಸರ್ಕಾರದ ಬಳಿ ಹಣ ಇಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕೇವಲ‌ ಮಾತು ಕೊಟ್ಟ ಸರ್ಕಾರ ನಂತರ ಮರೆತು ಬಿಟ್ಟಿದೆ. ನಿತ್ಯ ದುಡಿದು ಜೀವನ ಮಾಡ್ತಿದ್ದ ಅಂಜಲಿ ಕುಟುಂಬದ ಕಣ್ಣೀರು ಇನ್ನು ನಿಂತಿಲ್ಲ.

ಹೆಚ್ಚು ಕಡಿಮೆ ಅಂಜಲಿ ಕೊಲೆಯಾಗಿ ಮೂರು ತಿಂಗಳ ಆಗ್ತಾ ಬಂತು, ಸರ್ಕಾರದ ಭರವಸೆ ಮರೀಚಿಕೆಯಾಗಿದೆ. ಮನೆ ಬಾಡಿಗೆಗೆ ಹಣ ಕಟ್ಟೋಕು ಕುಟುಂಬ ಕಷ್ಟ ಪಡ್ತಿದೆ. ಸರ್ಕಾರದ ನಡೆಗೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಅಂಜಲಿ‌ ಕುಟುಂಬಸ್ಥರು ಉಳ್ಳವರಲ್ಲ, ಅವರು ಬಡವರು ಅಕಸ್ಮಾತ್ ಅವರಿಗೆ ಪರಿಹಾರ ಕೊಡದೆ ಹೊದ್ರೆ ಅವರ ಶಾಪ ತಟ್ಟುತ್ತೆ ಎಂದು ಬಿಜೆಪಿ ಶಾಸಕ‌ ಮಹೇಶ್ ಟೆಂಗಿನಕಾಯಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ದಿನಬೆಳಗಾದ್ರೆ ಸಿಎಂ ಡಿಸಿಎಮ್ ಕಿತ್ತಾಟದಲ್ಲಿರೋ ರಾಜ್ಯ ಸರ್ಕಾರ ಬಡವರಿಗೆ ಪರಿಹಾರ ಕೊಡೋದನ್ನೆ ಮರೆತಂತಿದೆ. ಗ್ಯಾರಂಟಿಗಾಗಿ‌ ಪೆಟ್ರೋಲ್, ಡಿಸೇಲ್, ಹಾಲಿನ ದರವೂ ಹೆಚ್ಚಳವಾಗಿದೆ. ಆದ್ರೆ ಸರ್ಕಾರದ ಸಚಿವರೇ ಕೊಟ್ಟ ಭರವಸೆ ಇನ್ನು ಮರೀಚಿಕೆಯಾಗಿದೆ. ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಿ ಬಡ ಕುಟುಂಬದ ಕಣ್ಣೀರನ್ನ ಒರೆಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು