AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಮತ್ತೊಂದು ಹತ್ಯೆ: ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷ ಪುತ್ರನ ಕೊಲೆ

ಹುಬ್ಬಳ್ಳಿ ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ಹಳೇ ದ್ವೇಷದ ಹಿನ್ನೆಲೆ ಮದ್ಯ ಕುಡಿಸಿ ಚಾಕುವಿನಿಂದ ಇರಿದು ಓರ್ವ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರ ಆಕಾಶ್​ ಮಠಪತಿ ಮೃತ ಯುವಕ. ಸದ್ಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಮತ್ತೊಂದು ಹತ್ಯೆ: ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷ ಪುತ್ರನ ಕೊಲೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಹತ್ಯೆ: ಚಾಕುವಿನಿಂದ ಇರಿದು ಆಟೋ ಚಾಲಕರ ಸಂಘದ ಅಧ್ಯಕ್ಷ ಪುತ್ರನ ಕೊಲೆ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 22, 2024 | 9:43 PM

Share

ಹುಬ್ಬಳ್ಳಿ, ಜೂನ್​ 22: ಚಾಕುವಿನಿಂದ ಇರಿದು (stabbed) ಆಟೋ ಚಾಲಕರ ಸಂಘದ ಅಧ್ಯಕ್ಷನ ಪುತ್ರನ ಬರ್ಬರ ಹತ್ಯೆ (murder) ಮಾಡಿರುವಂತಹ ಘಟನೆ ಲೋಹಿಯಾ ನಗರದ ಪವನ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ. ಆಕಾಶ್ ಮಠಪತಿ (25) ಮೃತ ಯುವಕ. ಆಕಾಶ್ ಮಠಪತಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಳೇ ದ್ವೇಷದ ಹಿನ್ನೆಲೆ ಮದ್ಯ ಕುಡಿಸಿ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆಕಾಶ್ ಮಠಪತಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಶವಾಗಾರದ ಮುಂದೆ ಆಕಾಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ ತಂದೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ರೇಣುಕಾ ಸುಕುಮಾರ ಪ್ರತಿಕ್ರಿಯಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ತಲೆಗೆ ಗಾಯ ಆಗಿರುವುದು ತಿಳಿದು ಬಂದಿದೆ. ಆಕಾಶ್ ತಲೆ ಬಿಟ್ಟು ಬೇರೆ ಕಡೆ ಗಾಯ ಇಲ್ಲ. ತಂದೆ ಶೇಖರಯ್ಯ ಮಠಪತಿ ಅವನ ಸ್ನೇಹಿತರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಯನ್ನೇ ಅಟ್ಟಾಡಿಸಿ ಬರ್ಬರ ಹತ್ಯೆ

ಆರು ಜನ ಸ್ನೇಹಿತರ ಮೇಲೆ ಆರೋಪ ಮಾಡಿದ್ದಾರೆ. ನಾವು ಅವರು ಎಲ್ಲ ಮಾಹಿತಿ ಕಲೆ ಹಾಕಿದ್ದೇವೆ. ಅವರ ತಂದೆ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಅವರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕನಿಗೆ ಹೃದಯ ಘಾತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಬಳಿ ಕೆಎಸ್​​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಕೃಷ್ಣ ಶೆಟ್ಟಿ(65) ಎಂಬುವವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ನಾಲ್ವರು ಹೆಂಡಿರ ಮುದ್ದಿನ ಗಂಡ! ನಾಲ್ಕನೇ ಪತ್ನಿಗಾಗಿ 3ನೇ ಪತ್ನಿಯ ಚಿನ್ನ ಕದ್ದವನಿಗೆ ಮಗನಿಂದಲೇ ಬಿತ್ತು ಗೂಸಾ

ಮೃತ ಕೃಷ್ಣ ಶೆಟ್ಟಿ ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ನಿವಾಸಿ ಆಗಿದ್ದಾರೆ. ಹೊನ್ನಾವರದಿಂದ ಗೇರುಸೊಪ್ಪ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್​ನಲ್ಲಿ ಘಟನೆ ನಡೆದಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:31 pm, Sat, 22 June 24