AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್‌, ದಕ್ಷಿಣ ಕೊರಿಯಾಗೆ ತೆರಳಿದ ಸಚಿವ ಎಂಬಿ ಪಾಟೀಲ್​ ನೇತೃತ್ವದ ನಿಯೋಗ: ಬಂಡವಾಳ ಹೂಡಿಕೆಗೆ ಆಹ್ವಾನ

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್​, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಇತರೆ ಉನ್ನತ ಅಧಿಕಾರಿಗಳು ಸಹ ಸಚಿವರು ಸೇರಿದಂತೆ ಸಚಿವ ಸಚಿವ ಎಂ.ಬಿ.ಪಾಟೀಲ್​ ನೇತೃತ್ವದ ನಿಯೋಗವು ಇಂದಿನಿಂದ 10 ದಿನ ವಿದೇಶ ಪ್ರವಾಸ ಕೈಗೊಂಡಿದೆ. ಆ ಮೂಲಕ ಜಪಾನ್‌ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದೆ.

ಜಪಾನ್‌, ದಕ್ಷಿಣ ಕೊರಿಯಾಗೆ ತೆರಳಿದ ಸಚಿವ ಎಂಬಿ ಪಾಟೀಲ್​ ನೇತೃತ್ವದ ನಿಯೋಗ: ಬಂಡವಾಳ ಹೂಡಿಕೆಗೆ ಆಹ್ವಾನ
ಜಪಾನ್‌, ದಕ್ಷಿಣ ಕೊರಿಯಾಗೆ ತೆರಳಿದ ಸಚಿವ ಎಂಬಿ ಪಾಟೀಲ್​ ನೇತೃತ್ವದ ನಿಯೋಗ: ಬಂಡವಾಳ ಹೂಡಿಕೆಗೆ ಆಹ್ವಾನ
ಪ್ರಸನ್ನ ಗಾಂವ್ಕರ್​
| Edited By: |

Updated on:Jun 22, 2024 | 10:41 PM

Share

ಬೆಂಗಳೂರು, ಜೂನ್​ 22: ಬೃಹತ್​ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಸಚಿವ ಎಂ.ಬಿ.ಪಾಟೀಲ್ (MB Patil) ನೇತೃತ್ವದ ನಿಯೋಗವು ಇಂದಿನಿಂದ 10 ದಿನ ವಿದೇಶ ಪ್ರವಾಸ ಕೈಗೊಂಡಿದೆ.  ಇಂದು ರಾತ್ರಿ ಕೆಂಪೇಗೌಡ ಏರ್​​ಪೋರ್ಟ್​ನಿಂದ ತೆರಳುವ ನಿಯೋಗ ಜಪಾನ್‌ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಜಾಗತಿಕ ಹೂಡಿಕೆದಾರರ (investment) ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಲಿದೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್​, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಇತರೆ ಉನ್ನತ ಅಧಿಕಾರಿಗಳು ಸಹ ಸಚಿವರ ನಿಯೋಗದಲ್ಲಿ ಇರಲಿದ್ದಾರೆ.

ಇದನ್ನೂ ಓದಿ: ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ವಿದೇಶಿ ಕಂಪನಿಗಳಿಗೆ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ: ಲಹರ್ ಸಿಂಗ್

2 ದೇಶಗಳ ಪ್ರಮುಖ ಉದ್ಯಮಿಗಳಿಗೆ ಆಹ್ವಾನ ನೀಡಲಿರುವ ನಿಯೋಗ, 2 ದೇಶಗಳ ಪ್ರಮುಖ ಕಂಪನಿಗಳಿಗೆ ರಾಜ್ಯದಲ್ಲಿನ ಉದ್ಯಮ ಸ್ನೇಹಿ ವಾತಾವರಣ ಮನದಟ್ಟು ಮಾಡುವ ಪ್ರಯತ್ನ ಮಾಡಲಿದೆ. 27ಕ್ಕೂ ಹೆಚ್ಚು ಕಂಪನಿಗಳ ಜೊತೆ ನಿಯೋಗ ಸಮಾಲೋಚನೆ ನಡೆಸಲಿದೆ. ಜೊತೆಗೆ ಟೋಕಿಯೋ ಮತ್ತು ಸೋಲ್‌ನಲ್ಲಿ ನಿಯೋಗ ರೋಡ್​ಶೋ ನಡೆಸಲಿದೆ.

ರಾಜ್ಯದಲ್ಲಿ ವರಮಾನ ಸಂಗ್ರಹ ಹೆಚ್ಚಳಕ್ಕೆ ಇರುವ ಅವಕಾಶಗಳ ಕುರಿತು ಹಣಕಾಸು ಇಲಾಖೆಗೆ ಸಲಹೆ ನೀಡಲು ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂ‍ಪ್‌ ಕಂಪನಿಯನ್ನು‌ ಸರ್ಕಾರ ನೇಮಿಸಿದೆ. ಈ ಕಂಪನಿ ಇತ್ತೀಚೆಗೆ ಪ್ರಾಥಮಿಕ ವರದಿಯೊಂದನ್ನು ಸಲ್ಲಿಸಿದ್ದು, ಜಮೀನುಗಳ ನಗರೀಕರಣ ಅಥವಾ ರಾಜ್ಯ ನಿರ್ದೇಶಿತ ನಗರೀಕರಣ ಮಾದರಿಗಳ ಮೂಲಕ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ಕೂಡ ನೀಡಿದೆ.

ಇದನ್ನೂ ಓದಿ: ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್​ ನಡೆ

ಇದಕ್ಕೆ ವಿಪಕ್ಷ ಬಿಜೆಪಿ ಟೀಕೆ ಮಾಡುತ್ತಿದ್ದು, ಇದು ಆಶ್ಚರ್ಯ ಮತ್ತು ಶಾಕಿಂಗ್, ಸಿಎಂ ಸುತ್ತ ತಜ್ಞ ಅಧಿಕಾರಿಗಳು ಇದ್ರೂ ವಿದೇಶಿ ಕನ್ಸಲ್ಟೆನ್ಸಿ ನೇಮಕ ಮಾಡಿದ್ದಾರೆ ಅಂತಾ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:31 pm, Sat, 22 June 24

AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ