AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಡಿಕಲ್ ವಿದ್ಯಾರ್ಥಿಗಳಿಗೆ ಶಾಕ್! ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಏರಿಕೆ ಸಾಧ್ಯತೆ

ಪೋಷಕರು ನಮ್ಮ ಮಕ್ಕಳು ಇಂಜಿನಿಯರ್​​, ಡಾಕ್ಟರ್​ ಆಗಬೇಕು ಎಂಬ ಕನಸು ಕಂಡಿರುತ್ತಾರೆ. ಇದೇ ಆಸೆಯಲ್ಲಿ ಕಾಲೇಜುಗಳಿಗೆ ದಾಖಲು ಮಾಡಿಸಲು ಹೋದರೆ ಪ್ರವೇಶ ಶುಲ್ಕ ಕೇಳಿ ಒಂದು ಕ್ಷಣ ದಂಗಾಗುತ್ತಾರೆ. ಈಗಾಗಲೆ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ಏರಿಕೆಯಾಗಿದೆ. ಇದೀಗ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಪ್ರವೇಶ ಶುಲ್ಕ ಏರಿಕೆಗೆ ಸದ್ದಿಲ್ಲದೆ ತಯಾರಿ ನಡೆದಿದೆ.

ಮೆಡಿಕಲ್ ವಿದ್ಯಾರ್ಥಿಗಳಿಗೆ ಶಾಕ್! ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Vinay Kashappanavar
| Edited By: |

Updated on: Jun 23, 2024 | 8:10 AM

Share

ಬೆಂಗಳೂರು, ಜೂ.23: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶ ಶುಲ್ಕ (Karnataka Medical Fees Seat Fees) ಏರಿಕೆಯಾಗುವ ಸಾಧ್ಯತೆ ಇದೆ. ಎಂಜನಿಯರಿಂಗ್ ಶುಲ್ಕ ಏರಿಕೆ ಬಳಿಕ ಈಗ ಮೆಡಿಕಲ್ ಸೀಟ್ ಶುಲ್ಕ ಏರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ (Medical education department) ಮನಸ್ಸು ಮಾಡಿದೆ. ವೈದ್ಯಕೀಯ, ದಂತ ವೈದ್ಯಕೀಯ ಸೇರಿದ್ದಂತೆ ವೈದ್ಯಕೀಯ ಶಿಕ್ಷಣದ ಕಾಲೇಜುಗಳಲ್ಲಿನ ಖಾಸಗಿ ಕೋಟಾದ ಸೀಟುಗಳ ಶುಲ್ಕವನ್ನು ಶೇ15 ರಷ್ಟು ಹೆಚ್ಚಳ ಮಾಡಲು ವೈದ್ಯಕೀಯ ಕಾಲೇಜುಗಳು ಬೇಡಿಕೆ ಇಟ್ಟಿವೆ.

ಕಳೆದ ಎರಡು ವರ್ಷಗಳಿಂದ ವೈದ್ಯಕೀಯ ಶುಲ್ಕ ಏರಿಕೆ ಮಾಡಿಲ್ಲ ಅಂತ ಸರ್ಕಾರಕ್ಕೆ ವೈದ್ಯಕೀಯ ಕಾಲೇಜುಗಳು ತಿಳಿಸಿವೆ. 2024-25ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ನಿಗದಿಪಡಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸಿದೆ.

ಇದನ್ನೂ ಓದಿ: ನೀಟ್-ಪಿಜಿ ಪರೀಕ್ಷೆಯಲ್ಲಿ ಅಕ್ರಮ; ಭಾನುವಾರ ನಡೆಯಬೇಕಿದ್ದ ಎಕ್ಸಾಂ ಮುಂದೂಡಿಕೆ

ವೈದ್ಯಕೀಯ ಕಾಲೇಜುಗಳು ಶೇ15 ರಷ್ಟು ಶುಲ್ಕ ಹೆಚ್ಚಳದ ಪ್ರಸ್ತಾವನೆ ಇಟ್ಟರೂ, ಶೇ10 ರಷ್ಟು ಶುಲ್ಕ ಏರಿಕೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಬೆಲೆ ಏರಿಕೆ ಮಧ್ಯೆ ಶಿಕ್ಷಣದ ಬೆಲೆ ಹೆಚ್ಚಳದ ಬಗ್ಗೆ ಜನರು, ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.

2018-19ರಲ್ಲಿ ಸರಾಸರಿ ಶೇ26 ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ತದನಂತರದಲ್ಲಿ 2019-20, 2020-21ರಲ್ಲಿ ಶೇಕಾಡ ಶೇ15ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಆದರೆ ಈ ಮಧ್ಯೆ ಕೊರೊನಾ ಕಾರಣ ಕಳೆದ ಎರಡು ವರ್ಷಗಳಿಂದ ಯಾವುದೇ ಶುಲ್ಕ ಹೆಚ್ಚಳ ಮಾಡಿಲ್ಲ. ಸದ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆಡಿಕಲ್ ಸೀಟಿಗೆ 50 ಸಾವಿರ ಇದ್ದರೆ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ 1,28,726 ರೂ. ಶುಲ್ಕ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ