ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್ ನಡೆ
ರಾಜ್ಯದ ವರಮಾನ ಹೆಚ್ಚಿಸುವ ಸಲುವಾಗಿ ಸರ್ಕಾರ ವಿದೇಶಿ ಕಂಪನಿಗೆ ಮೇಲುಸ್ತುವಾರಿಕೆ ವಹಿಸಿರುವುದು ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಇದೇ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಸುಮಾರು 25000 ಎಕರೆ ಭೂಮಿಯನ್ನು ಲೀಸ್ಗೆ ಕೊಟ್ಟು ಅದರಿಂದ ಬರುವಂತಹ ಹಣದಿಂದ ಸರ್ಕಾರ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಇದು ಬಿಜೆಪಿಗೆ ಅಸ್ತ್ರವಾಗಿದೆ.
ಬೆಂಗಳೂರು, ಜೂನ್ 21: 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕಾಂಗ್ರೆಸ್ (Congress) ಸರ್ಕಾರ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ರಾಜ್ಯದ ವರಮಾನ ಹೆಚ್ಚಿಸುವ ಸಲುವಾಗಿ ಸರ್ಕಾರ ವಿದೇಶಿ ಕಂಪನಿಗೆ ಮೇಲುಸ್ತುವಾರಿಕೆ ವಹಿಸಿರುವುದು ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಇದೇ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ ಸುಮಾರು 25000 ಎಕರೆ ಭೂಮಿಯನ್ನು ಲೀಸ್ಗೆ ಕೊಟ್ಟು ಅದರಿಂದ ಬರುವಂತಹ ಹಣದಿಂದ ಸರ್ಕಾರವನ್ನು ನಡೆಸಬಹುದು, ಗ್ಯಾರಂಟಿ ಯೋಜನೆಗಳಿಗೆ ಹಣ ತರಬಹುದು ಎಂಬ ಸಲಹೆಗಳನ್ನು ಕಂಪನಿ ನೀಡುತ್ತಿದೆ. ಇದೇ ವಿಚಾರ ಬಿಜೆಪಿ ನಾಯಕರಿಗೆ ದೊಡ್ಡ ಅಸ್ತ್ರವಾಗುತ್ತಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos