ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ; ಭಾರತೀಯ ನೌಕಾಪಡೆಯೊಂದಿಗೆ ಸಹಭಾಗಿತ್ವಕ್ಕೆ ಅಮೆರಿಕ ಉತ್ಸುಕ ಎಂದರು
ಐ.ಎನ್.ಎಸ್ ಕದಂಬ ನೌಕನೆಲೆಗೆ 2 ದಿನಗಳ ಭೇಟಿಗಾಗಿ ಗುರುವಾರ ಸಂಜೆ ಆಗಮಿಸಿದ ರಾಜನಾಥ್ ಸಿಂಗ್, ನೌಕಾನೆಲೆಯ ಅಧಿಕಾರಿ ವರ್ಗ, ಸಿಬ್ಬಂದಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಇರುವ ಕದಂಬ ನೌಕಾನೆಲೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ. ರಾಜ್ಯದ ಎರಡು ದಿನಗಳ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಅವರು ನೌಕಾನೆಲೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದವರನ್ನ ಭೇಟಿ ಮಾಡಿದ್ದಾರೆ.
ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ವೀಕ್ಷಣೆ ಮಾಡಲಿರುವ ರಾಜನಾಥ್ ಸಿಂಗ್ಗೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸಾಥ್ ನೀಡಲಿದ್ದಾರೆ. ಇಲ್ಲಿನ ಐ.ಎನ್.ಎಸ್ ಕದಂಬ ನೌಕನೆಲೆಗೆ 2 ದಿನಗಳ ಭೇಟಿಗಾಗಿ ಗುರುವಾರ ಸಂಜೆ ಆಗಮಿಸಿದ ರಾಜನಾಥ್ ಸಿಂಗ್, ನೌಕಾನೆಲೆಯ ಅಧಿಕಾರಿ ವರ್ಗ, ಸಿಬ್ಬಂದಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದೆ. ಅಮೆರಿಕದ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದು ಸಚಿವ ರಾಜನಾಥ ಸಿಂಗ್ ಹೇಳಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇತ್ತೀಚೆಗೆ ನಾನು ಅಮೆರಿಕಾಗೆ ತೆರಳಿದ್ದಾಗ ಆ ದೇಶದ ನೌಕಾಪಡೆಯ ಮುಖ್ಯಸ್ಥರ ಭೇಟಿಯಾಗಿತ್ತು. ಆಗ ಅವರೊಂದಿಗೆ ಮಾತುಕತೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಭಾರತದ ಕಡಲು ನೌಕಾಪಡೆಯಿಂದಾಗಿ ಸುರಕ್ಷಿತವಾಗಿದೆ. ದೇಶದ ಗಡಿಗಳು ಸುರಕ್ಷಿತವಾಗಿವೆ. ಇದರಲ್ಲಿ ದೇಶದ ರಕ್ಷಣೆಯಲ್ಲಿ ತೊಡಗಿರುವ ಮೂರು ಪಡೆಗಳ ಕೊಡುಗೆಯಿದೆ. ಹಾಗಾಗಿ ಪ್ರಜೆಗಳಲ್ಲಿ ನಿಮ್ಮೆಲ್ಲರ ಬಗ್ಗೆ ಇರುವ ಗೌರವ ಮತ್ತು ಹೆಮ್ಮೆಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೀವು ದೇಶದ ಯುವಕರಿಗೆ ಪ್ರೇರಣೆ ನೀಡುತ್ತಿದ್ದೀರಿ ಎಂದು ರಾಜನಾಥ ಸಿಂಗ್ ಶ್ಲಾಘಿಸಿದರು.
Published On - 9:37 pm, Thu, 26 May 22