ಆತ್ಮನಿರ್ಭರ​​ ಯೋಜನೆಯಡಿ ಭಾರತೀಯ ನೌಕೆಗಳ ಅಭಿವೃದ್ಧಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 27, 2022 | 5:41 PM

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾರವಾರ ನೌಕಾನೆಲೆಯ ನೇವಲ್ ಬೇಸ್‌ಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ, ಯೋಜನೆ ಪರಿಶೀಲಿಸಿದರು.

ಆತ್ಮನಿರ್ಭರ​​ ಯೋಜನೆಯಡಿ ಭಾರತೀಯ ನೌಕೆಗಳ ಅಭಿವೃದ್ಧಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್
Follow us on

ಕಾರವಾರ: ಭಾರತದಲ್ಲಿ ಯುದ್ಧ ನೌಕೆಗಳು ತಯಾರಾಗೋ ಮೂಲಕ ಪ್ರಧಾನಿಯವರ ಆತ್ಮನಿರ್ಭರ್ ಅಭಿಯಾನಕ್ಕೆ ಹೆಚ್ಚು ಬಲ ಬಂದಿದೆ. ವಿಕ್ರಾಂತ್ ಹಾಗೂ ವಿಕ್ರಮಾದಿತ್ಯ ಭಾರತದ ನೌಕಾಶಕ್ತಿಯನ್ನು ಹೆಚ್ಚು ಬಲಯುತಗೊಳಿಸಲಿದೆ ಎಂದು ಕಾರವಾದಲ್ಲಿ ಮಾಧ್ಯಮದವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ. ಪ್ರಪಂಚದಲ್ಲಿ ಪ್ರಮುಖ ನೇವಿಗಳ ಸಾಲಿನಲ್ಲಿ ಇಂಡಿಯನ್ ನೇವಿ ಗುರುತಿಸಲ್ಪಡುತ್ತಿದೆ. ಪ್ರಪಂಚದ ದೊಡ್ಡ ದೊಡ್ಡ ನೌಕಾಶಕ್ತಿಗಳು ಭಾರತದ ಜತೆ ಸಹಯೋಗ ಹೊಂದಲು ಇಚ್ಚುಕವಾಗಿದೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾರವಾರ ನೌಕಾನೆಲೆಯ ನೇವಲ್ ಬೇಸ್‌ಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯ, ಯೋಜನೆ ಪರಿಶೀಲಿಸಿದರು.

ಇಂದು ಬೆಳಗ್ಗೆ ಫೈಟರ್ ಜೆಟ್, ಹೆಲಿಕಾಪ್ಟರ್, ಸಬ್ ಮರೀನ್‌ಗಳಲ್ಲಿ ಪ್ರಯಾಣ ಮಾಡಿದ ರಾಜ್‌ನಾಥ್ ಸಿಂಗ್​, ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಐಎನ್‌ಎಸ್ ಖಂಡೇರಿ ಸಬ್ ಮರೀನ್‌ನಲ್ಲಿ ಪ್ರಯಾಣ ಮಾಡಿ, ರಕ್ಷಣಾ ವ್ಯವಸ್ಥೆ ಪರಿಶೀಲಿಸಿದರು. ಕಾರವಾರದ ನೇವಲ್ ಬೇಸ್‌ಗೆ ನಿನ್ನೆ ಬಂದಿದ್ದೆ. ನೇವಿಯ ಶೂರ ಸೈನಿಕರು, ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರ ಜತೆ ಮಾತುಕತೆಯಾಯ್ತು. ಸೀಬರ್ಡ್ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ್ದು, ಇದರ ಅಭಿವೃದ್ಧಿಯಂದ ನಾನು ಸಂತುಷ್ಠನಾಗಿದ್ದೇನೆ.

ಇದನ್ನೂ ಓದಿ: ರವಿ ಶಾಸ್ತ್ರಿಗೆ 60ರ ಜನ್ಮದಿನದ ಸಂಭ್ರಮ: ಶಾಸ್ತ್ರಿ ಮುಖ್ಯ ಕೋಚ್​ನಲ್ಲಿ ಭಾರತ ತಂಡದ ಕೆಲವು ಸಾಧನೆಗಳು ಇಲ್ಲಿವೆ

ಇಂದು ಇಂಡಿಯನ್ ನೇವಿಯ ಅಟ್ಯಾಕ್ ಸಬ್ ಮರೀನ್ ಐಎನ್‌ಎಸ್ ಖಂಡೇರಿಯಲ್ಲಿ ಪ್ರಯಾಣ ಮಾಡುವ ಅವಕಾಶ ದೊರೆಯಿತು. ಇಂದು ಅಂಡರ್ ವಾಟರ್‌ನಲ್ಲೂ ಸಬ್ ಮರೀನ್ ಮೂಲಕ ಯುದ್ಧ ಕಾರ್ಯಾಚರಣೆ ಯಾವ ರೀತಿ ನಡೆಯುತ್ತೆ ಅಂತಾ ನೋಡಿದೆ. ಇಂದಿನ ಕಾರ್ಯಾಚರಣೆ ನೋಡಿದ ಬಳಿಕ ಯಾವುದೇ ಸ್ಥಿತಿಯನ್ನು ಎದುರಿಸಿ, ಜಯ ಸಾಧಿಸುವಲ್ಲಿ ನೇವಿ ತಯಾರಿದೆ ಅಂತಾ ತಿಳಿದುಕೊಂಡೆ. ಐಎನ್‌ಎಸ್ ಖಂಡೇರಿ ಭಾರತದ ಮೇಕ್ ಇಂಡಿಯಾ ಪ್ರಾಜೆಕ್ಟ್‌ನ ಅತ್ಯುತ್ತಮ ಉದಾಹರಣೆಯಾಗಿದೆ. ಇಂಡಿಯನ್ ನೇವಿಗಾಗಿ ತಯಾರಾಗುತ್ತಿರುವ 41 ಶಿಪ್ ಅಥವಾ ಹಾಗೂ ಸಬ್ ಮರೀನ್‌ಗಳ ಪೈಕಿ 39 ಭಾರತದಲ್ಲೇ ತಯಾರಾಗುತ್ತಿದೆ. 10 ದಿನಗಳ ಹಿಂದೆ 2 ಶಿಪ್‌ಗಳ ಉದ್ಘಾಟನೆಯನ್ನು ನಾನು ಮುಂಬೈನಲ್ಲಿ ನಡೆಸಿದ್ದೇನೆ.

ಇಂದು ನಾನು ಪ್ರಯಾಣ ಬೆಳೆಸಿದ ಐಎನ್‌ಎಸ್ ಖಂಡೇರಿ ಸಬ್‌ಮರೀನ್‌ಗೆ 2019 ಸೆಪ್ಟೆಂಬರ್‌ನಲ್ಲಿ ನಾನೇ ಚಾಲನೆ ನೀಡಿದ್ದೆ.  ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೇವಿಯ ಐಎನ್‌ಎಸ್​ ವಿಕ್ರಾಂತ್ ಕಮಿಷನಿಂಗ್‌ಗೆ ತಯಾರಾಗಿದೆ. ಭಾರತದ ನೇವಿಯಲ್ಲಿ ನಡೆಯುತ್ತಿರುವ ತಯಾರಿಗಳು ಯಾರದ್ದೇ ವಿರುದ್ಧವಾಗಲ್ಲ. ಬದಲಾಗಿ ದೇಶದ ಕರಾವಳಿ ತೀರದ ಜನರ ಶಾಂತಿ, ನೆಮ್ಮದಿ, ಸಂಪದ್ಬರಿತ ಜೀವನಕ್ಕಾಗಿ ಈ ತಯಾರಿಗಳು ನಡೆಯುತ್ತಿವೆ. ಇಂಡಿಯನ್ ನೇವಿಯ ಸಾಮರ್ಥ್ಯವನ್ನು ಬಹಳ ಹತ್ತಿರದಿಂದ ನೋಡಲು ನೇವಿ ಮುಖ್ಯಸ್ಥರು ಸಹಾಯ ಮಾಡಿದರು. ನೇವಿಯ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಪಶ್ಚಿಮ ನೌಕಾವಲಯ ಮುಖ್ಯಸ್ಥ ಅಜೇಂದ್ರ ಬಹಾದ್ದೂರ್ ಸಿಂಗ್ ಅಭಿನಂದನೆ ಸಲ್ಲಿಸುತ್ತೇನೆ. ಇವರು ದೇಶದ ರಕ್ಷಣೆಯ ವಿಚಾರದಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:38 pm, Fri, 27 May 22