ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ (Paresh Mesta) ಪ್ರಕರಣದ ಎ1 ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ನೀಡಿದ್ದ ಹಿನ್ನೆಲೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದು, ವಕ್ಫ್ ಮಂಡಳಿ ಚುನಾಣಾ ಪ್ರಕ್ರಿಯೆ ಇರುವ ವ್ಯವಸ್ಥೆ. ವಕ್ಫ್ ಮಂಡಳಿಗೆ ನಮ್ಮ ಕಡೆಯಿಂದ 50% ಜನ ವಿರೋಧ ಪಕ್ಷದಿಂದ 50% ಜನ ಕೊಡಬೇಕು ಎಂಬ ತೀರ್ಮಾನ ಆಗಿತ್ತು. ನಾವು ಕೊಟ್ಟಿರುವ ಪಟ್ಟಿ ಸರಿ ಇದೆ. ವಿರೋಧ ಪಕ್ಷದವರು ಕೊಟ್ಟ ಪಟ್ಟಿಯಲ್ಲಿ ಅಣ್ಣಿಗೇರಿ ಇದ್ದರು. ಇದು ಸರಿಯಲ್ಲ ಎಂದು ನಾನು ಹೇಳಿದಾಗ ಈ ಪಟ್ಟಿಯನ್ನು ರದ್ದು ಮಾಡಿದ್ದಾರೆ. ನಮಗೆ ಬಹುಮತ ಇಲ್ಲದ ಕ್ಷೇತ್ರ ಅದು. ಮುಂದೆ ಹೆಚ್ಚಿನ ಮಾಹಿತಿ ಕೊಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಪರೇಶ್ ಮೆಸ್ತಾ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ರಾಷ್ಟ್ರಧ್ವಜಕ್ಕಿಂತ ಬಿಜೆಪಿಗೆ ಭಗವಾಧ್ವಜ ಮೇಲೆ ಪ್ರೀತಿ ಎಂಬ ಸಿದ್ದರಾಮಯ್ಯ ಹೇಳಿಕೆ ಕೋಟ ಶ್ರೀನಿವಾಸ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರ ಮಾನಸಿಕತೆ ಇದ್ದವರೇ ತಿರಂಗ ಧ್ವಜ ಹಾರಿಸುತ್ತೇವೆ ಎಂದು ನಮ್ಮ ಸಂಘದ ಕಡೆ ಬಂದಿದ್ದಾರೆ. ಅಂತವರಿಗೆ ಸಿಹಿ ಕೊಟ್ಟು ಸ್ವಾಗತ ಮಾಡಲು ಹೋದಾಗ ವಾಪಾಸ್ ಹೋಗಿದ್ದಾರೆ ಎಂದು ಕಾರವಾರದಲ್ಲಿ ಹೇಳಿಕೆ ನೀಡಿದರು.
ಆಕ್ರೋಶಕ್ಕೆ ಮಣಿದು ಆದೇಶ ತಡೆಹಿಡಿದ ರಾಜ್ಯ ವಕ್ಫ್ ಮಂಡಳಿ
ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಆರೋಪಿಗೆ ಜಿಲ್ಲಾ ವಕ್ಘ ಮಂಡಳಿಯ ಉಪಾಧ್ಯಕ್ಷನಾಗಿ ಆಯ್ಕೆ ಮಾಡಿರುವ ಹಿನ್ನಲೆ ಆಕ್ರೋಶಕ್ಕೆ ಮಣಿದು ರಾಜ್ಯ ವಕ್ಫ್ ಮಂಡಳಿ ಆದೇಶ ತಡೆಹಿಡಿದಿದೆ. ಪರೇಶ್ ಮೆಸ್ತಾ ಹತ್ಯೆ ಪ್ರಕರಣದ ಆರೋಪಿ ಆಜಾದಿ ಅಣ್ಣಿಗೇರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಪರೇಶ ಮೆಸ್ತಾ ಹತ್ಯೆ ಪ್ರಕರಣದ A1 ಆಗಿದ್ದ ಆಜಾದಿ ಅಣ್ಣಿಗೇರಿ, ಬಿಜೆಪಿಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಆದೇಶಕ್ಕೆ ತಡೆಹಿಡಿದಿದ್ದು, ಮುಂದಿನ ಆದೇಶದವರೆಗೂ ತನ್ನ ಆದೇಶವನ್ನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ತಡೆ ಹಿಡಿದಿದೆ.
ಪ್ರಕರಣ ಹಿನ್ನೆಲೆ:
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಗಲಭೆಗೆ ಕಾರಣವಾಗಿ, ಬಿಜೆಪಿಗೆ ಗೆಲುವು ತಂದು ಕೊಟ್ಟ ಹೊನ್ನಾವರದ ಪರೇಶ್ ಮೇಸ್ತಾ ಮೃತಪಟ್ಟು 5 ವರ್ಷ ಕಳೆಯುತ್ತಾ ಬಂತು. ಅಂದು 2017ರ ಡಿಸೆಂಬರ್ 6 ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದರು. ಈ ವೇಳೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರೇಶ್ ಮೇಸ್ತಾನ ಶವ ಪತ್ತೆಯಾದ ಬಳಿಕ ಬಿಜೆಪಿಗರು ಮೃತ ಯುವಕನನ್ನು ಹಿಂದೂ ಕಾರ್ಯಕರ್ತನೆಂದು ಬಿಂಬಿಸಿ, ಆತನ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ತದ ನಂತರ ಪರೇಶನದ್ದು ಕೊಲೆ ಎಂದು ಕುಟುಂಬದವರು ಕೂಡ ಆರೋಪಿಸಿದರು. ಅಂದು ಕರಾವಳಿ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಗಲಭೆ ನಡೆದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಯಿತು. ನಂತರ ಈ ಪ್ರಕರಣ ರಾಜಕೀಯ ತಿರುವು ಪಡೆದು ಬಿಜೆಪಿ ಹಾಗೂ ಪರೇಶನ ತಂದೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಅದರಂತೆ ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣ ಸಿಬಿಐಗೆ ವಹಿಸಿತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Sat, 13 August 22