ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ; ಅದೃಷ್ಟವಶಾತ್ ಪಾರು
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್(VS Patil) ಅವರ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬನವಾಸಿಯಿಂದ ಪಾಳಾ- ರಾಮಾಪುರ ಮಾರ್ಗವಾಗಿ ತಮ್ಮ ಗ್ರಾಮ ಅಂದಲಗಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ.
ಉತ್ತರ ಕನ್ನಡ, ಮಾ.08: ಜಿಲ್ಲೆಯ ಮುಂಡಗೋಡ(Mundgod) ತಾಲೂಕಿನ ಹಾರವಳ್ಳಿ ಬಳಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್(VS Patil) ಅವರ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬನವಾಸಿಯಿಂದ ಪಾಳಾ- ರಾಮಾಪುರ ಮಾರ್ಗವಾಗಿ ತಮ್ಮ ಗ್ರಾಮ ಅಂದಲಗಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ.
ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಪರಿಣಾಮ ಶಾಸಕ ವಿ. ಎಸ್. ಪಾಟೀಲರ ಎದೆಗೆ ಪೆಟ್ಟು ಬಿದ್ದರೆ, ಚಾಲಕ ಆನಂದ ಎಂಬಾತನ ಕಣ್ಣಿಗೆ ಗಾಯವಾಗಿದೆ. ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಹೆಚ್ಚು ಗಾಯ- ನೋವುಗಳಾಗಿಲ್ಲ. ತಕ್ಷಣವೇ ಮಾಜಿ ಶಾಸಕರನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ: ಮಗು ಸೇರಿದಂತೆ ಬಳ್ಳಾರಿ ಮೂಲದ ಐವರು ಸಾವು
2023 ರಲ್ಲೂ ನಡೆದಿತ್ತು ಅಪಘಾತ
ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ವೊಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರ ಕಾರಿಗೆ 2023 ಜನವರಿ 28 ರಂದು ಮುಂಡಗೋಡಿನ ಬನ್ನಿಕಟ್ಟಿ ಬಳಿ ಡಿಕ್ಕಿ ಹೊಡೆದಿತ್ತು. ಮುಂಡಗೋಡಿನಿಂದ ಯಲ್ಲಾಪುರಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದ್ದು, ಕಾರಿನ ಹಿಂಬದಿ ಜಖಂಗೊಂಡಿತ್ತು. ಅದೃಷ್ಟವಶಾತ್ ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರು ಅಂದು ಕೂಡ ಯಾವುದೇ ಅಪಾಯ ಆಗದೇ ಬಚಾವ್ ಆಗಿದ್ದರು. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿಯೇ ಊ ಅವಘಡ ಸಂಭವಿಸಿತ್ತು. ಯಲ್ಲಾಪುರ ಕಡೆಗೆ ಹೊರಟಿದ್ದಾಗ ಹಿಂಬದಿಯಿಂದ ಬಂದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಟ್ರ್ಯಾಕ್ಟರ್ ಚಾಲಕನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿ, ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Fri, 8 March 24