ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ ಈ ಗ್ರಂಥಾಲಯ, ರಾಜ್ಯದಲ್ಲೇ ಮೊದಲ ಪ್ರಯತ್ನ – ಯಾವ ಜಿಲ್ಲೆಯಲ್ಲಿ?

ಬಡ ವಿದ್ಯಾರ್ಥಿಗಳು ಓದಿನ ಜೊತೆ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ವೇಳೆ ಸಮಯ ಸಿಗುತ್ತದೆಯಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪುಸ್ತಕಗಳನ್ನು ಕೊಂಡುಕೊಂಡು ತಯಾರಿ ನಡೆಸುವುದು ಕಷ್ಟಕರ. ಹೀಗಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದೀಗ 24 ತಾಸು ಸಹ ಸಾರ್ವಜನಿಕ ಗ್ರಂಥಾಲಯ ತೆರೆದಿದ್ದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ತಲ್ಲೀನರಾಗುತಿದ್ದಾರೆ.

ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ  ಈ ಗ್ರಂಥಾಲಯ, ರಾಜ್ಯದಲ್ಲೇ ಮೊದಲ ಪ್ರಯತ್ನ - ಯಾವ ಜಿಲ್ಲೆಯಲ್ಲಿ?
ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ ಈ ಗ್ರಂಥಾಲಯ, ರಾಜ್ಯದಲ್ಲೇ ಮೊದಲ ಪ್ರಯತ್ನ
Updated By: ಸಾಧು ಶ್ರೀನಾಥ್​

Updated on: Mar 19, 2024 | 12:36 PM

ಓದಬೇಕೆಂಬ ಹಂಬಲ ಇರುವ ಅನೇಕ ವಿದ್ಯಾರ್ಥಿಗಳಿಗೆ, ಸೂಕ್ತ ವ್ಯವಸ್ಥೆ ಸಿಗದೆ ಓದಿನಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ವಿನೂತನ ಹೆಜ್ಜೆ ಇಟ್ಟಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ರಾತ್ರಿ 12 ಗಂಟೆವರೆಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಓಪನ್ ಇಡುವಂತೆ ಸೂಚಿಸಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಸ್ಪರ್ಧಾಳುಗಳು ಇದರ ಲಾಭ ಪಡೆಯುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ರಾತ್ರಿ 12 ಗಂಟೆ ಆದ್ರೂ ಓಪನ್ ಆಗಿರುವ ಗ್ರಂಥಾಲಯ. ಪುಸ್ತಕವನ್ನು ಹಿಡಿದು ಓದುತ್ತಿರುವ ಜ್ಞಾನ ದಾಹಿಗಳು. ಮತ್ತೊಂದೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಪುಸ್ತಕಗಳು. ಹೌದು ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ. ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಎಷ್ಟೋ ಜನರಿಗೆ ಓದುವ ಹಂಬಲ ಇದ್ರೂ ಓದುವ ವಾತಾವರಣ ಸಿಗುತ್ತಿಲ್ಲ. ಹಾಗಾಗಿ ಜಿಲ್ಲಾ ಗ್ರಂಥಾಲಯವನ್ನೆ ನಂಬಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಾರ್ಯನಿರ್ವಹಿಸುವ ಸಮಯ ಸಾಕಾಗುತ್ತಿಲ್ಲ.

ಈ ಸಮಸ್ಯೆಯನ್ನ ಅರಿತ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಎಂದು ಸಾರ್ವಜನಿಕ ಗ್ರಂಥಾಲಯವನ್ನು 24 ಘಂಟೆಗಳ ಕಾಲವೂ ತೆರೆದಿಡಲು ಆದೇಶ ಮಾಡಿದ್ದಾರೆ, ಇದೀಗ ಬಡ ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ದಿನವಿಡೀ ಜ್ಞಾನಾರ್ಜನೆ ಮಾಡಬಹುದಾಗಿದೆ. ರಾಜ್ಯದಲ್ಲೇ ಇದೇ ಮೊದಲ ಬಾರಿ ಈ ಪ್ರಯತ್ನಕ್ಕೆ ಕಾರವಾರದಲ್ಲಿ ಜಿಲ್ಲಾಡಳಿತ ಮುನ್ನುಡಿ ಬರೆದಿದೆ. ಇದೀಗ ಸರ್ಕಾರಿ ರಜೆ ಹೊರತುಪಡಿಸಿ ನಿತ್ಯ 17 ಗಂಟೆ ಕಾಲ ಕಾರ್ಯನಿರ್ವಹಿಸುತಿದ್ದು ಇದಕ್ಕಾಗಿ ಹೊರ ಗುತ್ತಿಗೆಯ ಸಿಬ್ಬಂದಿಯನ್ನು ಸಹ ನೇಮಕ ಮಾಡಲಾಗಿದೆ.

ಬಡ ವಿದ್ಯಾರ್ಥಿಗಳು ಓದಿನ ಜೊತೆ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ವೇಳೆ ಸಮಯ ಸಿಗುತ್ತದೆಯಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪುಸ್ತಕಗಳನ್ನು ಕೊಂಡುಕೊಂಡು ತಯಾರಿ ನಡೆಸುವುದು ಕಷ್ಟಕರ. ಹೀಗಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದೀಗ 24 ತಾಸು ಸಹ ಸಾರ್ವಜನಿಕ ಗ್ರಂಥಾಲಯ ತೆರೆದಿದ್ದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿದಿನ ರಾತ್ರಿ 12 ಘಂಟೆಯವರೆಗೂ ಗ್ರಂಥಾಲಯಕ್ಕೆ ಆಗಮಿಸಿ ಜ್ಞಾನಾರ್ಜನೆಯಲ್ಲಿ ತಲ್ಲೀನರಾಗುತಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ನಂತರ ಬಿಡುವು ಸಿಕ್ಕಾಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಓದಲು ಸಮಯ ಸಿಗುತ್ತಿದೆ, ಆದ್ರೆ ನಮಗೆ ಬೇಕಾದ ಪುಸ್ತಕ ಕೊಂಡುಕೊಳ್ಳುವುದೇ ಕಷ್ಟ, ಅದ್ರೆ ಇದೀಗ ಗ್ರಂಥಾಲಯ ದಿನವಿಡೀ ತೆರದಿರುವುದರಿಂದ ಸಾಕಷ್ಟು ಅನುಕೂಲ ಆಗಿದೆ ಅಂತಾರೆ ಇಲ್ಲಿ ಓದಲು ಬರುವ ವಿದ್ಯಾರ್ಥಿಗಳು.

ಇದನ್ನೂ ಓದಿ: ಮಹಾಶಿವರಾತ್ರಿಗೆ ಮಹಾಬಲೇಶ್ವರನ ತೇರು ಏಳೆದು ಭಕ್ತಿ ಸಮರ್ಪಣೆ: ಗೋಕರ್ಣದಲ್ಲಿ ವಿದೇಶಿ ಭಕ್ತರ ಸಡಗರ

ಸಾರ್ವಜನಿಕ ಗ್ರಂಥಾಲಯ ದಿನದ 24 ಘಂಟೆಯೂ ತೆರದಿಡುವುದರಿಂದ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುತಿದ್ದು ರಾಜ್ಯದಲ್ಲೇ ಈ ಮೊದಲ ಪ್ರಯತ್ನ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಬೆಳಕು ನೀಡುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.