ಮಹಾಶಿವರಾತ್ರಿಗೆ ಮಹಾಬಲೇಶ್ವರನ ತೇರು ಏಳೆದು ಭಕ್ತಿ ಸಮರ್ಪಣೆ: ಗೋಕರ್ಣದಲ್ಲಿ ವಿದೇಶಿ ಭಕ್ತರ ಸಡಗರ
ಒಟ್ಟಾರೆಯಾಗಿ ಆತ್ಮಲಿಂಗ ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಈ ವೇಳೆ ಬಾಳೆ ಹಣ್ಣನ್ನು ತೇರಿಗೆ ಎಸೆಯುವದರ ಮೂಲಕ ತಮ್ಮ ಹರಕೆಯನ್ನ ಆದಷ್ಟು ಬೇಗ ಈಡೇರಿಸುವಂತೆ ಮನವಿ ಮಾಡಿಕೊಂಡರು.
ಆತ್ಮಲಿಂಗ ನೆಲಿಸಿದ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಜಾತ್ರೆ ಸಡಗರ ಮನೆ ಮಾಡಿದೆ. ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಜಾತ್ರೆಗೆ ಭಕ್ತ ಸಾಗರ ಹರಿದು ಬಂದಿತ್ತು. ಇಂದು ನಡೆದ ತೇರು ಏಳೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿ ಆಗಿ ಭಕ್ತಿಯಿಂದ ತೇರು ಏಳೆದು ಭಕ್ತಿಯನ್ನ ಸಮರ್ಪಿಸಿದ್ರು. ಈ ಕುರಿತ ವರದಿ ಇಲ್ಲಿದೆ ನೋಡಿ. ಎಲ್ಲಿ ನೋಡಿದರಲ್ಲಿ ಜನವೋ ಜನ… ಜನಸ್ತೋಮದ ಮಧ್ಯೆ ಬೃಹತ್ ಗಾತ್ರದ ತೇರು ಏಳೆಯುತ್ತಿರುವ ಭಕ್ತ ಸಾಗರ… ಈ ಮಧ್ಯೆ ಹರಕೆ ತೀರಿಸಲು ಬಾಳೆ ಹಣ್ಣು ಎಸೆಯುತ್ತಿರುವ ಜನ ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಗೋಕರ್ಣದಲ್ಲಿ.
ಹೌದು ಮಹಾಶಿವರಾತ್ರಿ ನಿಮಿತ್ತ ಒಟ್ಟು ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಎಂಟನೆ ದಿನವಾದ ನಿನ್ನೆ ಸೋಮವಾರ ವಿಜೃಂಭಣೆ ಮನೆ ಮಾಡಿತ್ತು. ಮಹಾಬಳೇಶ್ವರ ದೇವರು ವಿರಾಜಮಾನವಾದ ಬೃಹತ್ ರಥೋತ್ಸವ ಮಾಡಲಾಯಿತು. ರಥೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ ಗೋವಾ ಸೇರಿದಂತೆ ಹೊರ ದೇಶಗಳಿಂದಲೂ ಭಕ್ತರ ದಂಡು ಪಾಲ್ಗೊಂಡಿತ್ತು. ಸುಮಾರು 40 ಅಡಿಗೂ ಎತ್ತರವಾದ ಬೃಹತ್ ರಥದಲ್ಲಿ ಮಹಾಬಳೇಶ್ವರನ ಮೂರ್ತಿ ಇಟ್ಟು ಭಕ್ತರು ತಾ ಮುಂದೆ ನಾ ಮುಂದೆ ಎಂದು ರಥವನ್ನ ಎಳೆಯುವದರ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ರು.
ಇನ್ನು ಒಟ್ಟು ಎಂಟು ದಿನಗಳ ಕಾಲ ನಡೆಯುವ ಗೋಕರ್ಣ ಜಾತ್ರೆಯಲ್ಲಿ, ನಿತ್ಯವೂ ಒಂದೊಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಮಹಾಶಿವರಾತ್ರಿಗೆ ಮುನ್ನಾ ನಾಲ್ಕು ದಿನ ಹಾಗೂ ಮಹಾಶಿವರಾತ್ರಿಯ ಬಳಿಕದ ನಾಲ್ಕು ದಿನ ನಡೆಯುವ ಜಾತ್ರೆಯಲ್ಲಿ, ಅಮಾವಾಸ್ಯೆಯ ಮರುದಿನ ಬೃಹತ್ ರಥೋತ್ಸವ ಮಾಡಲಾಗುತ್ತದೆ. ಈ ರಥೋತ್ಸವಕ್ಕೆ ಬಂದವರು, ಯಾಲಕ್ಕಿ ಬಾಳೆ ಹಣ್ಣನ್ನು ಕೈಯಲ್ಲಿ ಹಿಡಿದು ಹರಕೆ ಕೇಳಿಕೊಂಡು ರಥದಲ್ಲಿರುವ ಮಹಾಬಳೇಶ್ವರನಿಗೆ ಎಸೆದರೆ ಒಂದು ವರ್ಷದಲ್ಲಿ ತಮ್ಮ ಹರಕೆಯನ್ನ ಆ ಮಹಾಬಳೇಶ್ವರ ಈಡೇರುಸುತ್ತಾನೆ ಎಂಬ ಪ್ರತೀತಿ ಇದೆ.
Also Read: ಶನಿ ಗೋಚರ -ಶೀಘ್ರದಲ್ಲೇ ನಕ್ಷತ್ರವನ್ನು ಬದಲಾಯಿಸಲಿರುವ ಶನೇಶ್ವರ… ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ